Asianet Suvarna News Asianet Suvarna News

ಎಂಡಿ ಪಲ್ಲವಿ ಕಂಠದಲ್ಲಿ 'ತಾಳ' ತಪ್ಪಿದ ಹಾಡು!

'ನನ್ನ ಇನಿಯನ ನೆಲೆಯ ಬಲ್ಲೆಯೇನೆ, ಹೇಗೆ ತಿಳಿಯನು ಅದನು ಹೇಳೆ ನೀನೆ' ಎಂದು ಲಕ್ಷ್ಮೀ ನಾರಾಯಣ ಭಟ್ ಅವರ ಗೀತೆಯನ್ನು ಸುಶ್ರಾವ್ಯವಾಗಿ ಎಂ.ಡಿ.ಪಲ್ಲವಿ ಹಾಡುತ್ತಿದ್ದರೆ ತಲೆ ದೂಗದವರು ಯಾರಿದ್ದಾರೆ? ಮೋಡಿ ಮಾಡುವ ಗಾಯಕಿ ಎಂ.ಡಿ.ಪಲ್ಲವಿ ಅವರು ಇದೀಗ ಒಂದು ಗೀತೆ, ಗೀತೆ ಎನ್ನುವುದಕ್ಕಿಂತ ಗದ್ಯ-ಪದ್ಯದ ಮಿಶ್ರಣವನ್ನು ಹಾಡಿದ್ದಾರೆ. ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಟ್ರೆಂಡ್ ಆಗುತ್ತಿದೆ. ಅದು ಒಳ್ಳೆಯ ಕಾರಣಕ್ಕೊ ಅಥವಾ ಕೆಟ್ಟ ಕಾರಣಕ್ಕೊ ಗೊತ್ತಿಲ್ಲ. ಹಾಗಾದರೆ ಏನು ಆ ಹಾಡು? ಏನದರ ಕತೆ? ಇಲ್ಲಿದೆ ವಿವರ...

Social Media Reaction on md pallavi new song in youtube
Author
Bengaluru, First Published Sep 11, 2018, 4:59 PM IST

ನೀ ಸಿಗದೇ ಬಾಳೊಂದು ಬಾಳೆ ಕೃಷ್ಣಾ ಎಂದು ಪಲ್ಲವಿ ಹಾಡುತ್ತಿದ್ದರೆ ಚಪ್ಪಾಳೆಗಳ ಸುರಿಮಳೆಯೇ ಬೀಳುತ್ತಿತ್ತು. ಇಂದು ಸಹ ಅಂತರ್ಜಾಲದಲ್ಲಿ ಸಿಗುವ ಹಾಡುಗಳನ್ನು ಅದೆಷ್ಟೋ ಮಂದಿ ಗುನುಗುತ್ತಲೇ ಇರುತ್ತಾರೆ. ಭಾವಗೀತೆಗಳಿಗೆ ಜೀವ ತುಂಬುವ ಕಂಠ ಸಿರಿಗೆ ಮೆಚ್ಚುಗೆ ಸೂಚಿಸದೆ ಇರಲು ಸಾಧ್ಯವೇ?

ಆದರೆ ಅದೇ ಎಂ ಡಿ ಪಲ್ಲವಿ ಹಾಡಿರುವ ಗೀತೆಯೊಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ವೇದಿಕೆ ನಿರ್ಮಾಣ ಮಾಡುತ್ತಿದೆ. ಕನ್ನಡದ ಮುಂದಿನ ಸುಗಮ ಸಂಗೀತ ಹೀಗೆ ಇರಬಹುದೆ? ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತಿದೆ?  ಒಟ್ಟಿನಲ್ಲಿ ಇಂಗ್ಲಿಷ್ ಪದಗಳನ್ನು ಜೋಡಿಸಿರುವ ಪದ್ಯ ಆಧುನಿಕತೆಯ ಪ್ರೇಮದ ಕತೆ ಹೇಳಲು ಹೋಗಿದೆ. ಸ್ಟೇಶನ್, ಪೋನು ಎಲ್ಲವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ವಾಕ್ಯಗಳೆ ತುಂಬಿರುವ ಹಾಡನ್ನು ನೀವು ಕೇಳಿ.. ಕೇಳುವುದು ಮಾತ್ರ ಅಲ್ಲ ಅಭಿಪ್ರಾಯವೊಂದನ್ನು ದಾಖಲು ಮಾಡಿ...

 

 

Follow Us:
Download App:
  • android
  • ios