ನಾಗಸ್ವರ ಊದುತ್ತಾ ಬಂದವನಿಗೆ ಶಾಕ್ ಹಾವಿನಂತೆ ವರ್ತಿಸಿದ ಅಂಗಡಿ ಮಾಲೀಕ ಮಾಲೀಕನ ವರ್ತನೆಗೆ ಹೆದರಿ ಓಡಿದ ವಾದಕ
ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ಮನೋರಂಜನೆಗೇನು ಕೊರತೆ ಇಲ್ಲ. ಬೇಜಾರಾಗಿದೆ ಎಂದು ಮತ್ತಷ್ಟು ಬೇಸರಿಸುತ್ತಾ ಕೂರುವ ಅಗತ್ಯವಿಲ್ಲ. ಸಾಮಾಜಿಕ ಜಾಲತಾಣ ಒಳಹೊಕ್ಕರೆ ಸಾಕು ನಿಮ್ಮ ಮನಸ್ಸನ್ನು ಹಗುರವಾಗಿಸುವ ನೂರಾರು ವಿಚಾರಗಳು ಅಲ್ಲಿವೆ. ನಿಮ್ಮನ್ನು ನಕ್ಕು ನಗಿಸಿ ಮನಸ್ಸಿಗೆ ಮುದ ನೀಡುತ್ತವೆ ಹಾಸ್ಯಮಯವಾದ ಸಾವಿರಾರು ವಿಡಿಯೋಗಳು. ಹೀಗೆ ಇಲ್ಲೊಂದು ಹಾಸ್ಯಮಯವಾದ ಘಟನೆ ನಡೆದಿದೆ.
ವ್ಯಕ್ತಿಯೊಬ್ಬ ಬಹುಶಃ ಆತ ನಾಗಸ್ವರ ಅಥವಾ ವಾದ್ಯವನ್ನು ಊದುತ್ತಾ ಅಂಗಡಿ ಅಂಗಡಿಗಳಿಗೆ ತೆರಳಿ ಭಿಕ್ಷೆ ಬೇಡಿ ತನ್ನ ದೈನಂದಿನ ಬದುಕು ಸಾಗಿಸುತ್ತಿರುವ ವ್ಯಕ್ತಿ. ಈತ ಹೀಗೆ ನಾಗಸ್ವರವನ್ನು ಊದುತ್ತಾ ಅಂಗಡಿ ಅಂಗಡಿ ತೆರಳಿದ್ದು, ಒಂದು ಅಂಗಡಿ ಮುಂದೆ ಊದುತ್ತಾ ನಿಂತವನಿಗೆ ಶಾಕ್ ಕಾದಿದೆ. ಅದಕ್ಕೆ ಕಾರಣ ಏನಿರಬಹುದು ಹಾವೇನಾದೂ ಬಂತೆ ಎಂಬ ಅಚ್ಚರಿ ನಿಮಗಿರಬಹುದು. ಆದರೆ ಇಲ್ಲಿ ಬಂದಿದ್ದು, ಹಾವಲ್ಲ ಹಾವಿನಂತೆ ವರ್ತಸುತ್ತಾ ಬಂದ ಅಂಗಡಿ ಮಾಲೀಕ.
ಹೌದು ನಾಗಸ್ವರಕ್ಕೆ ಹಾವುಗಳು ಬಳುಕಿ ಬಾಗಿ ಹೇಗೆ ತಲೆದೂಗುತ್ತವೋ ಹಾಗೆ ಇಲ್ಲೊಬ್ಬ ಅಂಗಡಿ ಮಾಲೀಕ ಈತ ವಾದ್ಯ ಊದುತ್ತಾ ಬರುತ್ತಿದ್ದಂತೆ ಮೆಲ್ಲನೆ ಅಂಗಡಿಯ ಬಾಗಿಲನ್ನು ಸ್ವಲ್ಪ ತೆರೆದು ಹಾವಿನಂತೆಯೇ ಹೊರಬಂದ ಈತ ನಾಗಸ್ವರಕ್ಕೆ ತಕ್ಕನಾಗಿ ತನ್ನ ದೇಹವನ್ನು ಹಾವಿನಂತೆಯೇ ಬಳುಕಿಸಲು ಶುರು ಮಾಡುತ್ತಾ ಈ ವಾದ್ಯ ಊದುವವನ ಸಮೀಪ ಸಮೀಪವೇ ಬರುತ್ತಾನೆ. ಇದನ್ನು ನೋಡಿ ಗಾಬರಿಯಾದ ವಾದ್ಯ ಊದುವವ ಅಲ್ಲಿಂದ ಕಾಲ್ಕಿತ್ತು ಜಾಗ ಖಾಲಿ ಮಾಡುತ್ತಾನೆ.
ವಾದ್ಯ ಊದುವವ ಕೇಸರಿ ವೇಷ ತೊಟ್ಟು ಸ್ವಾಮೀಜಿಯ ಧಿರಿಸಿನಲ್ಲಿದ್ದರೆ ಇತ್ತ ಅಂಗಡಿ ಮಾಲೀಕ ಪಕ್ಕ ಹಾವಿನಂತೆ ಕಪ್ಪು ಬಣ್ಣದ ಪ್ಯಾಂಟ್ ಶರ್ಟ್ ಧರಿಸಿದ್ದ. ಇವರಿಬ್ಬರ ಈ ಜುಗಲ್‌ಬಂದಿ ನೋಡುಗರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದೆ. 35 ಸೆಕೆಂಡ್‌ಗಳ ವಿಡಿಯೋ ಇದಾಗಿದ್ದು, ಬಟ್ನಿ ಕೆ ಮೆಮೆ (bhutni_ke_meme) ಎಂಬ ಇನ್ಸ್ಟಾ ಖಾತೆಯಿಂದ ಈ ವಿಡಿಯೋ ಅಪ್ಲೋಡ್ ಆಗಿದೆ. ಸಾವಿರಾರು ಜನ ಈ ವಿಡಿಯೋ ವೀಕ್ಷಿಸಿದ್ದು, ಹಾಸ್ಯಮಯವಾಗಿ ಕಾಮೆಂಟ್ ಮಾಡಿದ್ದಾರೆ.
ಸಿಂಹವನ್ನು ಎತ್ತಿಕೊಂಡು ಹೋದ ಮಹಿಳೆ... ವಿಡಿಯೋ ನೋಡಿದ ನೆಟ್ಟಿಗರಿಂದ ಹಾಸ್ಯದ ಸುರಿಮಳೆ
ಕೆಲ ದಿನಗಳ ಹಿಂದೆ ಭಾರತದ ಹರ್ನಾಜ್ ಕೌರ್ ಸಂಧು(Harnaaz Kour Sandhu) ಮಿಸ್ ಯೂನಿವರ್ಸ್(Miss Universe) ಪಟ್ಟ ಗೆದ್ದು ಭಾರತಕ್ಕೆ ಹಿಂದಿರುಗಿದ ಕೂಡಲೇ ಕಾಂಗ್ರೆಸ್ ಸಂಸದ(Congress MP) ಶಶಿ ತರೂರ್(Shashi Taroor) ಆಕೆಯನ್ನು ಭೇಟಿ ಅಭಿನಂದನೆ ಹೇಳಿದ್ದಾರೆ. ತಮ್ಮ ಈ ಭೇಟಿಯ ಬಗ್ಗೆ ಅತ್ಯುತ್ಸಾಹದಿಂದ ಟ್ವಿಟ್ಟರ್(Twitter)ನಲ್ಲಿ ಬರೆದುಕೊಂಡಿರುವ ತರೂರ್, ಸಂಧುವಿನ ಜೊತೆ ತೆಗೆದುಕೊಂಡ ಸೆಲ್ಫೀಗಳೆರಡನ್ನು ಕೂಡಾ ಪೋಸ್ಟ್ ಮಾಡಿದ್ದರು.
ಕರ್ನಾಟಕ ಸಂಗೀತಕ್ಕೆ ಆ ಹೆಸರೇಕೆ... ಹಾಸ್ಯಮಯವಾಗಿ ವರ್ಣಿಸಿದ ಸಂಗೀತಗಾರ
'ಮಿಸ್ ಯೂಮಿವರ್ಸ್ ಹರ್ನಾಜ್ ಕೌರ್ ಸಂಧುಗೆ ಅಭಿನಂದಿಸಿ ಖುಷಿಯಾಗಿದೆ. ಹೊಸ ವರ್ಷ(new year)ವನ್ನು ಭಾರತದಲ್ಲಿ ಆಚರಿಸಲು ಹಿಂದಿರುಗಿದ ಆಕೆ ಗೆದ್ದ ಉತ್ಸಾಹದಲ್ಲಿದ್ದಳು. ಭಾರತ(India) ಕೂಡಾ ಆಕೆಯನ್ನು ಸ್ವಾಗತಿಸಲು ಹೆಮ್ಮೆ ಪಡುತ್ತಿದೆ. ವೇದಿಕೆಯಲ್ಲಿ ಕಂಡಷ್ಟೇ ಮನೋಹಾರಿ ವ್ಯಕ್ತಿತ್ವ ಆಕೆಯದು' ಎಂದು ತರೂರ್ ಬರೆದಿದ್ದರು. ಸಂಧುವಿನ ಗೆಲುವಿಗೆ ಭಾರತವೇ ಸಂಭ್ರಮಿಸಿದೆ. ಆದರೆ, ಏಕೋ ತರೂರ್ ಸಂಭ್ರಮಿಸಿದ್ದು ಮಾತ್ರ ನೆಟ್ಟಿಗರಿಗೆ ಇಷ್ಟವಾದಂತಿಲ್ಲ. ತರೂರ್ ಹಾಕಿದ ಈ ಪೋಸ್ಟ್‌ಗೆ ನೆಟ್ಟಿಗರು(Netizens) ಹಾಕಿದ ಕಾಮೆಂಟ್‌ಗಳಲ್ಲಿ ಸಲಹೆ ಸೂಚನೆ, ವ್ಯಂಗ್ಯ, ಹಾಸ್ಯವೇ ತುಂಬಿತ್ತು. ಸಂಧು ಜೊತೆಗಿನ ತರೂರ್ ಫೋಟೋ(Photo)ಕ್ಕಿಂತ ಅದಕ್ಕೆ ಬಂದ ನೆಟ್ಟಿಗರ ಪ್ರತಿಕ್ರಿಯೆಗಳೇ ಹೆಚ್ಚು ಸದ್ದು ಮಾಡುತ್ತಿತ್ತು.