ದಶಕಗಳ ಬಳಿಕ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ'' ಮೂಲಕ ಮತ್ತೆ ಕಿರುತೆಗೆ ಮರಳಿದ್ದು, ಅವರ ಸಂಭಾವನೆ, ವೃತ್ತಿ ಬದುಕಿನ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.
ನವದೆಹಲಿ: ದಶಕಗಳ ಬಳಿಕ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ‘ಕ್ಯೂಂಕಿ ಸಾಸ್ ಭಿ ಕಭಿ ಬಹು ಥಿ'' ಮೂಲಕ ಮತ್ತೆ ಕಿರುತೆಗೆ ಮರಳಿದ್ದು, ಅವರ ಸಂಭಾವನೆ, ವೃತ್ತಿ ಬದುಕಿನ ಬಗ್ಗೆ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿದೆ.
ಸ್ಮೃತಿ ಇರಾನಿ 2000 ಇಸವಿಯಲ್ಲಿ ಪ್ರತಿ ಸಂಚಿಕೆಗೆ 1800 ಸಂಭಾವನೆ ಪಡೆಯುತ್ತಿದ್ದರು. 25 ವರ್ಷಗಳಲ್ಲಿ ಆ ಪ್ರಮಾಣದಲ್ಲಿ ಭಾರೀ ಏರಿಕೆಯಾಗಿದ್ದು 14 ಲಕ್ಷ ರು. ಒಂದು ದಿನಕ್ಕೆ ಪಡೆಯಲಿದ್ದಾರೆ ಎನ್ನಲಾಗಿದೆ. ಆದರೆ ಈ ಬಗ್ಗೆ ಧಾರವಾಹಿ ತಂಡವಾಗಲಿ, ಸ್ಮೃತಿ ಇರಾನಿ ಅವರಾಗಲಿ ಸ್ಪಷ್ಟಪಡಿಸಿಲ್ಲ.
ಜೂ.29ರಿಂದ ಧಾರವಾಹಿ ಪ್ರಸಾರವಾಗಲಿದ್ದು ತುಳಸಿ ಪಾತ್ರದಲ್ಲಿ ಮಿಂಚಲಿದ್ದಾರೆ. ,ಈ ಕುರಿತು ಸಂದರ್ಶನವೊಂದರಲ್ಲಿ ಮಾಜಿ ಸಚಿವೆ ಕೂಡ ಮಾತನಾಡಿದ್ದು ‘ನಾನು ಅರೆಕಾಲಿಕ ನಟಿ, ಪೂರ್ಣ ಪ್ರಮಾಣದ ರಾಜಕಾರಣಿ’ ಎಂದಿದ್ದಾರೆ.
ಮಿನಿ ಸ್ಕರ್ಟ್ ಧರಿಸಿ ರ‍್ಯಾಂಪ್ ವಾಕ್ ಮಾಡಿದ್ದ ಸ್ಮೃತಿ ಇರಾನಿ
ಕಿರುತೆರೆ ನಟಿ ಮತ್ತು ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಈಚೆಗೆ ಸಾಕಷ್ಟು ಸುದ್ದಿ ಮಾಡುತ್ತಿರಲು ಕಾರಣವಾದದ್ದು, ದೇಶಕ್ಕಾಗಿ ತೆಗೆದುಕೊಂಡಿದ್ದ ಬಹು ದೊಡ್ಡ ನಿರ್ಧಾರ. ಅದೇನೆಂದರೆ, ಅವರು ತಮ್ಮ ಪಿಂಚಣಿಯನ್ನು ಹಾಗೂ ಸರ್ಕಾರದಿಂದ ತಮಗೆ ಸಿಗುತ್ತಿರುವ ಸವಲತ್ತುಗಳನ್ನು ಭಾರತದ ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ನೀಡುವುದಾಗಿ ಘೋಷಿಸುವ ಮೂಲಕ ದೇಶಪ್ರೇಮ ಮೆರೆದಿದ್ದಾರೆ. 'ಭಾರತದ ನಾಗರಿಕರು ಮತ್ತು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟ'ದ ಕಾರ್ಯತಂತ್ರದ ಸಲಹೆಗಾರರೂ ಆಗಿರುವ ಸ್ಮೃಇ ಇರಾನಿ, ತಮ್ಮ ಪಿಂಚಣಿಯನ್ನು ಭಾರತದ ರಾಷ್ಟ್ರೀಯ ರಕ್ಷಣಾ ನಿಧಿಗೆ ದೇಣಿಗೆ ನೀಡಿದ್ದಾರೆ. ಡಲು ಕಳೆದ ಒಂದು ವರ್ಷದಿಂದ, ಮಾಜಿ ಸಂಸದನಾಗಿ, ನಾನು ಪಿಂಚಣಿ ಪಡೆದಿಲ್ಲ ಅಥವಾ ಯಾವುದೇ ಸೌಲಭ್ಯವನ್ನು ಪಡೆದಿಲ್ಲ. ಇದು ಭಾರತದ ಖಜಾನೆಯಿಂದ ಬಂದ ಹಣ, ಇದನ್ನು ನಾನು ಇಂದು ರಾಷ್ಟ್ರೀಯ ರಕ್ಷಣಾ ನಿಧಿಗೆ ಅರ್ಪಿಸುತ್ತಿದ್ದೇನೆ ಎಂದು ಹೇಳುವ ಮೂಲಕ ಎಲ್ಲರಿಗೂ ಮಾದರಿಯಾದವರು.
ಅಷ್ಟಕ್ಕೂ, ರೂಪದರ್ಶಿಯಾಗಿ, ನಟಿಯಾಗಿ ಹಾಗೂ ನಿರೂಪಕಿಯಾಗಿ ನಂತರ ರಾಜಕೀಯಕ್ಕೆ ಪದಾರ್ಪಣೆ ಮಾಡಿದ ಸ್ಮೃತಿ ಇರಾನಿ ಅವರ ಸಾಧನೆಯ ಹಾದಿ ಬಹಳ ದೀರ್ಘವಾಗಿದೆ. ಯಾವ ಗಾಡ್ ಫಾದರ್ ಇಲ್ಲದೇ ರಾಜಕೀಯ ಹಿನ್ನಲೆಯೂ ಇಲ್ಲದೇ ಸ್ವಂತ ಪರಿಶ್ರಮದಿಂದ ರಾಜಕೀಯ ಜೀವನದಲ್ಲಿ ತಮ್ಮದೇ ಛಾಪು ಮೂಡಿಸಿದವರು ಅವರು. ಅಂದಹಾಗೆ ಸ್ಮೃತಿ ಅವರಿಗೆ ಈಗ 49 ವರ್ಷ ವಯಸ್ಸು. ಮಾರ್ಚ್ 23ರ 1976ರಂದು ಹುಟ್ಟಿರೋ ಸ್ಮೃತಿ ಇರಾನಿ, ರಾಜಕೀಯಕ್ಕೂ ಬರುವ ಮುನ್ನ ಕಿರುತೆರೆಯಲ್ಲಿ ಫೇಮಸ್ ಎನ್ನುವುದು ಎಲ್ಲರಿಗೂ ತಿಳಿದದ್ದೇ. ಕ್ಯೂಂ ಕಿ ಸಾಸ್ ಭೀ ಕಭೀ ಬಹೂ ಥಿ ಧಾರಾವಾಹಿಯಲ್ಲಿ ತುಳಸಿಯಾಗಿ ಅಭಿನಯಿಸಿ ಹಲವು ವರ್ಷ ಮನೆಮನೆಗಳಲ್ಲಿನ ಮನಗಳನ್ನು ಗೆದ್ದವರು. ಇರಾನಿ ಸೌಂದರ್ಯ ಸ್ಪರ್ಧೆಯ ಮಿಸ್ ಇಂಡಿಯಾ 1998 ರಲ್ಲಿ ಭಾಗವಹಿಸಿದವರಲ್ಲಿ ಒಬ್ಬರು. ಆಲ್ಬಂ, ಟಿವಿ ಸರಣಿ ನಟನೆಯನ್ನು ಪ್ರಾರಂಭಿಸಿದರು. ಜಿ ಟಿವಿಯಲ್ಲಿ ರಾಮಾಯಣದಲ್ಲಿ ಸೀತಾ ಎಂಬ ಮಹಾಕಾವ್ಯ ಪಾತ್ರವನ್ನು ನಿರ್ವಹಿಸಿದರು. ಆದರೆ ಕುತೂಹಲದ ವಿಷಯ ಎಂದರೆ, ಅವರು, 21ನೇ ವಯಸ್ಸಿನಲ್ಲಿಯೇ ಮಿಸ್ ಇಂಡಿಯಾ ಆಗುವ ಕನಸು ಹೊತ್ತು ಭಾರತದಿಂದ ಪ್ರತಿನಿಧಿಸಿದ್ದರು ಎನ್ನುವ ವಿಷಯ ಬಹುತೇಕ ಮಂದಿಗೆ ತಿಳಿದಿರಲಿಕ್ಕಿಲ್ಲ! ಹೌದು. ಅದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಸದ್ದು ಮಾಡುತ್ತಿದೆ.
1998ರಲ್ಲಿ ನಡೆದ ಈ ಸ್ಪರ್ಧೆಯಲ್ಲಿ, ಸ್ಮೃತಿ ಅವರು ಕ್ಯಾಟ್ ವಾಕ್ ಮಾಡುತ್ತಲೇ ತಮ್ಮನ್ನು ತಾವು ಪರಿಚಯಿಸಿಕೊಂಡಿರುವುದನ್ನು ನೋಡಬಹುದು. ನನಗೆ ಈಗ 21 ವರ್ಷ ವಯಸ್ಸು. ಎತ್ತರ 5 ಅಡಿ ಎಂಟು ಇಂಚು ಎನ್ನುತ್ತಲೇ ಆಗ ರಾಜಕೀಯ ಎಂದರೆ ತಮಗೆ ಇಷ್ಟ ಎಂದು ಹೇಳಿದ್ದರು. ಭಾರತದ ಸಂಸ್ಕೃತಿ ಮತ್ತು ರಾಜಕೀಯದ ಕುರಿತು ಮಾತನಾಡಿದ್ದ ಸ್ಮೃತಿ ಅವರು 21ನೇ ವಯಸ್ಸಿನಲ್ಲಿಯೇ ರಾಜಕೀಯ ಪ್ರವೇಶ ಮಾಡುವ ಸೂಚನೆ ನೀಡಿದ್ದರು. ಸ್ಪರ್ಧೆಯಲ್ಲಿ ಅವರು ಕಿತ್ತಳೆ ಬಣ್ಣದ ಸ್ಲೀವ್‌ಲೆಸ್ ಟಾಪ್ ಮತ್ತು ಮಿನಿ ಸ್ಕರ್ಟ್ ಧರಿಸಿ ರ‍್ಯಾಂಪ್ ವಾಕ್ ಮಾಡಿದ್ದರು. ಫೈನಲ್ ರೌಂಡ್ ಪ್ರವೇಶಿಸಿದ್ದು. ಆದರೆ ಅಗ್ರ 9 ರೊಳಗೆ ತಲುಪಲು ಸಾಧ್ಯವಾಗದ ಸ್ಪರ್ಧಿಗಳಲ್ಲಿ ಸ್ಮೃತಿ ಕೂಡಾ ಒಬ್ಬರು.


