ಮುಂಬೈ (ಜು. 30): ಖ್ಯಾತ ಗಾಯಕ ಉದಿತ್ ನಾರಾಯಣ್ ಗೆ ಅನಾಮಿಕ ನಂಬರ್ ನಿಂದ ಬೆದರಿಕೆ ಕರೆ ಬಂದಿದ್ದು ಮುಂಬೈನ ಅಂಬೋಲಿ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ. 

ಆನಾಮಿಕನೊಬ್ಬ ಉದಿತ್ ಗೆ ಕರೆ ಮಾಡಿ ಕೆಟ್ಟದಾಗಿ ಬೈದಿದ್ದಾರೆ. ಜೊತೆಗೆ ಬೆದರಿಕೆಯನ್ನೂ ಹಾಕಿದ್ದಾನೆ ಎನ್ನಲಾಗಿದೆ.  ಉದಿತ್ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ. ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

ತನಿಖೆ ನಡೆಸಿದಾಗ ಉದಿತ್ ಮನೆ ಸೆಕ್ಯುರಿಟಿ ಗಾರ್ಡ್ ಹೆಸರಲ್ಲಿ ನಂಬರ್ ರಿಜಿಸ್ಟರ್ ಆಗಿರುವುದು ತಿಳಿದು ಬಂದಿದೆ. ಅವನನ್ನು ವಿಚಾರಣೆಗೆ ಒಳಪಡಿಸಿದಾಗ, ‘ಹುಟ್ಟೂರು ಬಿಹಾರಕ್ಕೆ ಹೋಗುವಾಗ ರೈಲಿನಲ್ಲಿ ಮೊಬೈಲ್ ಕಳೆದು ಹೋಗಿರುವುದಾಗಿ‘ ಹೇಳಿದ್ದಾನೆ.