ಧೂಮ್ರಪಾನ ಮಾಡದಿರಿ ಜಾಹಿರಾತಿನ ಬಾಲಕಿ ಈಗ ನಾಯಕಿ

First Published 14, Mar 2018, 9:22 AM IST
Simran Natekar Become Heroin in Sandalwood
Highlights

ಚಿತ್ರಮಂದಿರದಲ್ಲಿ ಸಿನಿಮಾ ಆರಂಭವಾಗುವ ಮುನ್ನ ಪ್ರಸಾರವಾಗುವ ಧೂಮ್ರಪಾನ  ಮಾಡದಿರಿ, ಮಾಡಲು ಬಿಡದಿರಿ ಎಂಬ ಜಾಹೀರಾತನ್ನು ಬಹುತೇಕರು ನೋಡಿರುತ್ತೀರಿ. ಆ ಜಾಹೀರಾತಿನ ಪುಟ್ಟ ಹುಡುಗಿ ಈಗ ಬೆಳೆದು ದೊಡ್ಡವಳಾಗಿದ್ದಾಳೆ.

ಬೆಂಗಳೂರು (ಮಾ. 14): ಚಿತ್ರಮಂದಿರದಲ್ಲಿ ಸಿನಿಮಾ ಆರಂಭವಾಗುವ ಮುನ್ನ ಪ್ರಸಾರವಾಗುವ ಧೂಮ್ರಪಾನ  ಮಾಡದಿರಿ, ಮಾಡಲು ಬಿಡದಿರಿ ಎಂಬ ಜಾಹೀರಾತನ್ನು ಬಹುತೇಕರು ನೋಡಿರುತ್ತೀರಿ. ಆ ಜಾಹೀರಾತಿನ ಪುಟ್ಟ ಹುಡುಗಿ ಈಗ ಬೆಳೆದು ದೊಡ್ಡವಳಾಗಿದ್ದಾಳೆ.

ಇಂಟರೆಸ್ಟಿಂಗ್ ಅಂದ್ರೆ ಈಗ ಕನ್ನಡ ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಆಕೆಯ  ಹೆಸರು ಸಿಮ್ರಾನ್ ನಟೇಕರ್. ಚಿತ್ರದ ಹೆಸರು ಕಾಜಲ್. ಕಚೇರಿಯಿಂದ ಸುಸ್ತಾಗಿ ಬರುವ ಅಪ್ಪ, ಅಪ್ಪನ  ಆಗಮನವನ್ನೇ ಎದುರು ನೋಡುತ್ತ ಕೂತ ಪುಟ್ಟ ಮಗು ತನ್ನ ತಂದೆ ಧೂಮಪಾನ ಮಾಡುವುದನ್ನು ನೋಡುತ್ತಾಳೆ. ಧೂಮಪಾನಕ್ಕೆ ಒಳಗಾದರೆ ಏನಾಗುತ್ತದೆ ಎಂಬುದನ್ನು ಟಿವಿನಲ್ಲಿ ನೋಡಿದ ಕ್ಷಣ ಕರುಣಾಜನಕವಾಗಿ ತನ್ನ ಅಪ್ಪನ  ಮುಖ ನೋಡಿದಾಗ ಕೈಯಲ್ಲಿದ್ದ ಸಿಗರೇಟು ಬಿಸಾಕಿ ಬಂದು ತನ್ನ ಪುಟ್ಟ ಕಂದನನ್ನು ತಬ್ಬಿಕೊಳ್ಳುತ್ತಾನೆ ಅಪ್ಪ. ಹೀಗೆ ಒಂದು ಕಣ್ಣೋಟದಿಂದ ಇಡೀ ದೇಶಕ್ಕೆ ಧೂಮಪಾನ  ಮಾಡಬೇಡಿ ಎಂಬ ಸಂದೇಶ ನೀಡಿದ ಪುಟ್ಟ ಪೋರಿಯೇ ಈ ಸಿಮ್ರಾನ್ ನಟೇಕರ್. ಮುಂಬೈನಲ್ಲಿ ಹುಟ್ಟಿ ಬೆಳೆದ ಈಕೆ ಹತ್ತನೇ ತರಗತಿ ಓದುತ್ತಿದ್ದಾಳೆ. ನೋ ಸ್ಮೋಕಿಂಗ್ ಜಾಹೀರಾತಿನ ಮೂಲಕ ಬಾಲ ನಟಿಯಾಗಿಯೇ ತೆರೆ ಮೇಲೆ ನಮ್ಮೆಲ್ಲರಿಗೂ  ಚಿರಪರಿಚಿತರಾಗಿ ಮುಂದೆ ಒಂದಿಷ್ಟು ಜಾಹೀರಾತುಗಳಲ್ಲಿ ಕಾಣಿಸಿಕೊಂಡರೂ ಮೊದಲ ಬಾರಿಗೆ ಒಂದು ಸಿನಿಮಾ
ಮೂಲಕ ಬಿಗ್‌ಸ್ಕ್ರೀನ್‌ಗೆ ಬರುತ್ತಿದ್ದಾಳೆ. ಅದರಲ್ಲೂ ಕನ್ನಡ ಸಿನಿಮಾದಿಂದ ಎಂಬುದು ವಿಶೇಷ.

‘ಕಾಜಲ್’ ಎಂಬುದು ಸಿಮ್ರಾನ್ ನಟೇಕರ್ ಅಭಿನಯಿಸುತ್ತಿರುವ ಮೊದಲ ಕನ್ನಡ ಸಿನಿಮಾ. ಸುಮಂತ್ ಕ್ರಾಂತಿ ನಿರ್ದೇಶನದ ಚಿತ್ರವಿದು. ಸಂತೋಷ್ ಈ ಚಿತ್ರದ ನಾಯಕ. ಒಬೆರಾಯ್ ಹೋಟೆಲ್ ಮ್ಯಾನೇಜರ್‌ನ ಪುತ್ರಿ ‘ನಾನು ಇತ್ತೀಚೆಗೆ ಸಿನಿಮಾ ನೋಡುತ್ತಿದ್ದಾಗ ನೋ ಸ್ಮೋಕಿಂಗ್ ಜಾಹೀರಾತಿನಲ್ಲಿ ಕಂಡ ಆ ಮಗು ಈಗ ಹೇಗಿರಬಹುದು ಅಂತ ಹುಡುಕಿದಾಗ ಆಕೆ ಹೆಸರು, ಎಲ್ಲಿರುವುದು ಎಲ್ಲ ಮಾಹಿತಿ ಸಿಕ್ಕಿತು. ಯಾಕೆ ಇವಳನ್ನು ನಾಯಕಿ ಪಾತ್ರಕ್ಕೆ ಕೇಳಬಾರದು ಅಂದುಕೊಂಡು ನಾನೇ ಬಾಂಬೆಗೆ ಹೋದೆ. ಆಗಲೇ ಸಿಮ್ರಾನ್ ನಟೇಕರ್, ಒಂದಿಷ್ಟು ಕತೆ ಕೇಳಿ ಮೂರು ಸಿನಿಮಾಗಳನ್ನು ಆಯ್ಕೆ  ಮಾಡಿಕೊಂಡಿದ್ದಳು. ನಾನು ಹೋಗಿ ಅವರ  ತಾಯಿಯನ್ನು ಭೇಟಿ ಮಾಡಿ ಕತೆ ಹೇಳಿದ ಮೇಲೆ ಅವರಿಗೆ ಖುಷಿಯಾಗಿ ಮೂರು ಸಿನಿಮಾಗಳನ್ನು ಬಿಟ್ಟು ನನ್ನ ಚಿತ್ರವನ್ನು ಒಪ್ಪಿಕೊಂಡರು. ಅಲ್ಲದೆ ಸಿಮ್ರಾನ್ ನಟೇಕರ್ ಗೂ ಸೌತ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಆಸೆ ಇತ್ತು’  ಎನ್ನುತ್ತಾರೆ ನಿರ್ದೇಶಕ ಸುಮಂತ್ ಕ್ರಾಂತಿ. ಅಂದಹಾಗೆ
ಈ ಸಿಮ್ರಾನ್ ಮುಂಬೈ ಒಬೇರಾಯ್ ಹೋಟೆಲ್‌ನ ಮ್ಯಾನೇಜರ್ ಪುತ್ರಿ.

ಈ ಚಿತ್ರವನ್ನು ನಿರ್ಮಾಣ ಮಾಡುತ್ತಿರುವುದು ಆನೇಕಲ್ ಬಾಲರಾಜ್ ಅವರೇ. ‘ಕರಿಯ ೨’ ನಂತರ  ಮತ್ತೊಂದು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂತೋಷ್ ಅವರಿಗೆ ಈ ತಿಂಗಳ ೩೧ಕ್ಕೆ ಹುಟ್ಟುಹಬ್ಬ. ಅಂದು ‘ಕಾಜಲ್’  ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಲಿದೆ. ಕುಲು ಮನಾಲಿ, ಊಟಿ, ಜಮ್ಮು ಮತ್ತು ಕಾಶ್ಮೀರ ಮುಂತಾದ ಕಡೆ ಚಿತ್ರೀಕರಣ ನಡೆಯಲಿದೆ. ವಿಶೇಷ ಅಂದರೆ ಸಂಪೂರ್ಣವಾಗಿ ಫ್ಯಾಂಟಿಸಿ ಪ್ರೇಮ ಕತೆಯಾಗಿರುವ
ಈ ಚಿತ್ರದಲ್ಲಿ ಕತೆ ಕೂಡ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು.
 

loader