ಕಚಗುಳಿ ಇಡುವಂತಹ ಮಾತುಗಳಿಂದ ಚಿತ್ರದ ಪ್ರತಿ ಪಾತ್ರವನ್ನು ನಿರೂಪಿಸಲಾಗಿದೆ. ನನ್ನ ಸಿನಿಮಾ ಹಾಗೂ ಗಣೇಶ್ ಮೇಲೆ ಅಭಿಮಾನ ಇಟ್ಟುಕೊಂಡು ಬರುವ ಪ್ರೇಕ್ಷಕರಿಗೆ ನಿರಾಸೆ ಮಾಡದ ಶುದ್ಧ ಪ್ರೇಮ ಕತೆಯ ಕೌಟುಂಬಿಕ ಸಿನಿಮಾ’ ಎಂಬುದು ನಿರ್ದೇಶಕ ಸುನಿ ಮಾತು.

ಸಿಂಪಲ್ ಸುನಿ ನಿರ್ದೇಶನದ ‘ಚಮಕ್’ ಚಿತ್ರದ ಟೀಸರ್ ಅನಾವರಣಗೊಂಡಿದೆ. ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸಿರುವ ಈ ಚಿತ್ರದ ಬಗ್ಗೆ ಈಗಾಗಲೇ ದೊಡ್ಡ ನಿರೀಕ್ಷೆಗಳು ಹುಟ್ಟಿಕೊಂಡಿವೆ. ಅದಕ್ಕೆ ಕಾರಣಕ್ಕೆ ಗೋಲ್ಡನ್, ಸಿಂಪಲ್ ಸುನಿ ಹಾಗೂ ರಶ್ಮಿಕಾ ಕಾಂಬಿನೇಷನ್. ಈಗಷ್ಟೇ ಬಿಡುಗಡೆಯಾಗಿರುವ ಟೀಸರ್‌ನಲ್ಲಿ ಗಣೇಶ್ ಮದುಮಗನ ಗೆಟಪ್‌ನಲ್ಲಿ, ರಶ್ಮಿಕಾ ಮಂದಣ್ಣ ಗೃಹಿಣಿ ಪಾತ್ರದಲ್ಲಿ ಗಮನ ಸೆಳೆಯುತ್ತಿದ್ದಾರೆ. ಎಂದಿನಂತೆ ಗಣೇಶ್ ಅವರ ಈ ಚಿತ್ರವೂ ಈ ವರ್ಷದ ಕೊನೆಯಲ್ಲಿ ತೆರೆಗೆ ಬರುವ ಸಿದ್ಧತೆಯಲ್ಲಿದೆ. ಸದ್ಯಕ್ಕೆ ಟೀಸರ್ ಬಿಟ್ಟಿರುವ ಸುನಿ, ಮುಂದೆ ಆಡಿಯೋ ಬಿಡುಗಡೆಯ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ‘ಲವ್ ಮತ್ತು ಫ್ಯಾಮಿಲಿ ಸ್ಟೋರಿ. ಸಂಭಾಷಣೆಗಳು

ತುಂಬಾ ಹೊಸದಾಗಿರುತ್ತವೆ. ಕಚಗುಳಿ ಇಡುವಂತಹ ಮಾತುಗಳಿಂದ ಚಿತ್ರದ ಪ್ರತಿ ಪಾತ್ರವನ್ನು ನಿರೂಪಿಸಲಾಗಿದೆ. ನನ್ನ ಸಿನಿಮಾ ಹಾಗೂ ಗಣೇಶ್ ಮೇಲೆ ಅಭಿಮಾನ ಇಟ್ಟುಕೊಂಡು ಬರುವ ಪ್ರೇಕ್ಷಕರಿಗೆ ನಿರಾಸೆ ಮಾಡದ ಶುದ್ಧ ಪ್ರೇಮ ಕತೆಯ ಕೌಟುಂಬಿಕ ಸಿನಿಮಾ’ ಎಂಬುದು ನಿರ್ದೇಶಕ ಸುನಿ ಮಾತು. ವಿಶೇಷ ಅಂದರೆ ಈ ಚಿತ್ರದ ಮೂಲಕ ಐದು ಮಂದಿ ಹೊಸ ಗೀತರಚನೆಕಾರರನ್ನು ಸಿಂಪಲ್ ಸುನಿ ಪರಿಚಯಿಸುತ್ತಿದ್ದಾರೆ. ವಿಜೇತ್,ಧೀರಜ್, ಸೌಂದರ್ಯ, ಅರ್ಜುನ್ ಹಾಗೂ ವಿಶ್ವಜಿತ್ ರಾವ್ ಅವರು ಈ ಚಿತ್ರದ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ. ಒಂದೇ ಚಿತ್ರದಲ್ಲಿ ಐದು ಮಂದಿ ಹೊಸ ಗೀತ ರಚನಕಾರರನ್ನು ಪರಿಚಯಿಸುವ ಮೂಲಕ ಸುನಿ ಬೇರೆಯವರಿಗೂ ಮಾದರಿಯಾಗಿದ್ದಾರೆ.?