ಬಿಡುಗಡೆಗೂ ಮುನ್ನವೇ ಕುತೂಹಲ ಮೂಡಿಸುತ್ತಿರುವ ‘ಕೆಲವು ದಿನಗಳ ನಂತರ’ ಎನ್ನುವ ಚಿತ್ರದಲ್ಲಿ ನಿರ್ದೇಶಕ ಶ್ರೀನಿ ಹೊಸ ಚಮತ್ಕಾರ ತೋರಿದ್ದಾರೆ. ಇದೊಂದು  ಹಾರರ್ ಸಿನಿಮಾ ಆಗಿದ್ದು, ಇಲ್ಲಿ ಪುಟ್ಟ ಮಗು ಬಹು ಮುಖ್ಯ ಪಾತ್ರ ಮಾಡುತ್ತಿದೆ. ಆದರೆ, ಆಗಷ್ಟೇ ಹುಟ್ಟಿದ ಮಗುವಿನ ಪಾತ್ರಕ್ಕಾಗಿ ಕಂಪ್ಯೂಟರ್ ಜನರೇಟೆಡ್ ಇಮೇಜರಿ ತಂತ್ರಜ್ಞಾನದ ಮೂಲಕ ಮಗುವನ್ನು ಸೃಷ್ಟಿ ಮಾಡಿದ್ದಾರೆ. 

6 ತಿಂಗಳ ಮಗುವಿನ ಪಾತ್ರವನ್ನು ಪೋಸ್ಟರ್‌ಗಳಲ್ಲಿ ನೋಡಿದವರು ಇದು ನಿಜವಾದ ಮಗು ಎಂದೇ ಭಾವಿಸಿದ್ದಾರೆ. ಇಂಥದ್ದೊಂದು ಪ್ರಯತ್ನ ಕನ್ನಡ ಚಿತ್ರರಂಗದಲ್ಲೇ ಇದೇ ಮೊದಲ ಎಂಬುದು ನಿರ್ದೇಶಕರ ಮಾತು.

‘ಕನ್ನಡ ಚಿತ್ರದಲ್ಲಿ ಇದೇ ಮೊದಲ ಬಾರಿಗೆ 3 ಡಿ ಸಿಜಿಐ ಮೂಲಕ ಒಂದು ಮಗು ಕ್ರಿಯೇಟ್ ಮಾಡಿದ್ದೇವೆ. ಚಿತ್ರದಲ್ಲಿ ಈ ಮಗುವಿನ ಪಾತ್ರ 20 ನಿಮಿಷ ಇರಲಿದೆ. ಹಾರರ್ ಚಿತ್ರವಾಗಿರುವ ಕಾರಣ ಸಿಜಿಐ ಮೂಲಕ ಕ್ರಿಯೇಟ್ ಮಾಡಿರುವ ಮಗು ಪಾತ್ರಕ್ಕೆ ಮಹತ್ವ ಇದೆ’ ಎನ್ನುತ್ತಾರೆ ನಿರ್ದೇಶಕ ಶ್ರೀನಿ.