Asianet Suvarna News Asianet Suvarna News

ಕನ್ನಡದ ಖ್ಯಾತ'ನಟಿ ಮುಖಕ್ಕೆ ನಗ್ನಚಿತ್ರ ಅಳವಡಿಕೆ

ದುಷ್ಕರ್ಮಿಗಳು ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ರೀತಿಯ ಕುಕೃತ್ಯ ವಹಿಸುವುದರ ವಿರುದ್ಧ  ಕಠಿಣ ಶಿಕ್ಷೆ ವಿಧಿಸಬೇಕೆಂದು ಶೃತಿ ಹರಿಹರನ್ ತಿಳಿಸಿದ್ದಾರೆ. ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದಾರೆ

Shruti hariharan compliant cyber police

ಬೆಂಗಳೂರು(ಮೇ.12): ನನ್ನ ಮುಖಕ್ಕೆ ನಗ್ನಚಿತ್ರ ದೇಹದ ಭಾವಚಿತ್ರ ಅಂಟಿಸಿ  ಇಂಟರ್'ನೆಟ್'ನಲ್ಲಿ ಹಾಕಿ ಅಪಮಾನ ಮಾಡಿದ್ದಾರೆ ಎಂದು  ಕನ್ನಡದ ಖ್ಯಾತ ನಟಿ ಶೃತಿ ಹರಿಹರನ್ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಇಂತಹ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡು ಮಹಿಳೆಯರ ಮಾನ ಕಾಪಾಡಬೇಕೆಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕನ್ನಡವೂ ಸೇರಿದಂತೆ ವಿವಿಧ ಭಾಷೆಯ ನಟಿಯರ ಮುಖವನ್ನು ನಗ್ನ ದೇಹಕ್ಕೆ ಅಂಟಿಸಿ ಇಂಟರ್'ನೆಟ್'ನಲ್ಲಿ ಹಾಕುವ ಪ್ರವೃತ್ತಿ ಹೆಚ್ಚಾಗಿದೆ. ಕೆಲವರು ವಿವಾದವಾಗುವ ಕಾರಣದಿಂದ ವಿಷಯವನ್ನು ಹೆಚ್ಚು ಮಾಡಲು ಹೋಗುವುದಿಲ್ಲ. ದುಷ್ಕರ್ಮಿಗಳು ಇದನ್ನೇ ಬಂಡವಾಳ ಮಾಡಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ಈ ರೀತಿಯ ಕುಕೃತ್ಯ ವಹಿಸುವುದರ ವಿರುದ್ಧ  ಕಠಿಣ ಶಿಕ್ಷೆ ವಿಧಿಸಬೇಕೆಂದು ಶೃತಿ ಹರಿಹರನ್ ತಿಳಿಸಿದ್ದಾರೆ. ಈ ಸಂಬಂಧ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೂ ದೂರು ನೀಡಿದ್ದಾರೆ.

Follow Us:
Download App:
  • android
  • ios