ಶೃತಿ ಹರಿಹರನ್ ಇದೀಗ ಕಿರುಚಿತ್ರ ನಿರ್ಮಾಪಕಿ! ಸದ್ದು ಮಾಡುತ್ತಿದೆ ಟ್ರೇಲರ್

First Published 12, Jun 2018, 1:30 PM IST
Shruthi Hariharan producer of Short Movie
Highlights

ಶ್ರುತಿ ಹರಿಹರನ್ ತಮ್ಮ ಹೋಮ್ ಬ್ಯಾನರ್ ಕಲಾತ್ಮಕ ಪ್ರೊಡಕ್ಷನ್ಸ್ ಮೂಲಕ ‘ರೀಟಾ’ ಹೆಸರಿನ ಮತ್ತೊಂದು ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ. ‘ಲಾಸ್ಟ್ ಕನ್ನಡಿಗ’ ನಂತರ ಇದು ಅವರ ನಿರ್ಮಾಣದ ಎರಡನೇ ಕಿರುಚಿತ್ರ.

ಬೆಂಗಳೂರು (ಜೂ. 12): ಶ್ರುತಿ ಹರಿಹರನ್ ತಮ್ಮ ಹೋಮ್ ಬ್ಯಾನರ್ ಕಲಾತ್ಮಕ ಪ್ರೊಡಕ್ಷನ್ಸ್ ಮೂಲಕ ‘ರೀಟಾ’ ಹೆಸರಿನ ಮತ್ತೊಂದು ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ.

‘ಲಾಸ್ಟ್ ಕನ್ನಡಿಗ’ ನಂತರ ಇದು ಅವರ ನಿರ್ಮಾಣದ ಎರಡನೇ ಕಿರುಚಿತ್ರ. ಮಹಿಳೆ ಮೇಲೆ ಕೌಟುಂಬಿಕ ದೌರ್ಜನ್ಯ ಮತ್ತು ಅದರ ಸುತ್ತಲ ಸೂಕ್ಷ್ಮ ಸಂಗತಿಗಳು ಈ ಕಿರುಚಿತ್ರದ ಕಥಾವಸ್ತು. ರಚನ್ ರಾಮಚಂದ್ರ ನಿರ್ದೇಶಕರು. ವಿವಾಹಿತ ಮಹಿಳೆಯರ ಮೇಲಿನ ದೌರ್ಜನ್ಯಗಳನ್ನಿಟ್ಟು ಈ ಕಿರುಚಿತ್ರ ರೂಪಿಸಲಾಗಿದೆ. ಸದ್ಯಕ್ಕೆ ಟ್ರೇಲರ್ ಬಿಡುಗಡೆ ಆಗಿದೆ.

ಶ್ರೇಯಾ ಅಂಚನ್, ರೂಪಾ ನಟರಾಜ್, ಅಭಿನವ್ ರಾಜ್ ಈ ಕಿರುಚಿತ್ರದ ಪಾತ್ರಧಾರಿಗಳು. ಅನೂಪ್ ಸೀಳಿನ್ ಸಂಗೀತ, ಕಾರ್ತಿಕ್ ಮಾಲೂರು ಛಾಯಾಗ್ರಹಣ, ಪ್ರದೀಪ್ ಸಂಕಲನ ಈ ಚಿತ್ರಕ್ಕಿದೆ. 

ಚಿತ್ರದ ಟ್ರೇಲರ್ ಹೀಗಿದೆ; 

 

 

loader