ಆತ ಪಕ್ಕಾ ಹಳ್ಳಿ ಹುಡುಗ ಆತನ ಸಾಧನೆ ನೋಡಿದರೆ ಬೆಚ್ಚಿ ಬೆರಗಾಗಬೇಕು. ಕನ್ನಡ ನೆಲದಲ್ಲಿ ಇಂಗ್ಲೀಷ್ ವಿಡಿಯೋ ಆಲ್ಬಮ್ ಮಾಡಿ ವಿದೇಶಗಳಲ್ಲೂ ಹೆಸರು ಮಾಡಿದ್ದಾನೆ ಆ ಪೋರ. ಈಗ ಆತನಿಂದ ಹೊರ ಬಂದಿರುವುದು ಎರಡು ಆಲ್ಬಮ್, ಸಾಕಷ್ಟು ಜನರ ಮೆಚ್ಚುಗೆ ಗಳಿಸಿದೆ.
ಬೆಳಗಾವಿ(ಎ.30): ಆತ ಪಕ್ಕಾ ಹಳ್ಳಿ ಹುಡುಗ ಆತನ ಸಾಧನೆ ನೋಡಿದರೆ ಬೆಚ್ಚಿ ಬೆರಗಾಗಬೇಕು. ಕನ್ನಡ ನೆಲದಲ್ಲಿ ಇಂಗ್ಲೀಷ್ ವಿಡಿಯೋ ಆಲ್ಬಮ್ ಮಾಡಿ ವಿದೇಶಗಳಲ್ಲೂ ಹೆಸರು ಮಾಡಿದ್ದಾನೆ ಆ ಪೋರ. ಈಗ ಆತನಿಂದ ಹೊರ ಬಂದಿರುವುದು ಎರಡು ಆಲ್ಬಮ್, ಸಾಕಷ್ಟು ಜನರ ಮೆಚ್ಚುಗೆ ಗಳಿಸಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದ ನಿವಾಸಿಯಾಗಿರುವ ಯುವಕ ಶ್ರೇಣಿಕ್ ಇಂಗ್ಲೀಷ್ ಆಲ್ಬಂವೊಂದನ್ನು ತಯಾರಿಸಿದ್ದಾರೆ. ಚಿಕ್ಕೋಡಿಯ ಈ ಯುವಕ ಬೆಂಗಳೂರಿನ ಆಡಿಯೋ ಲೈಫ್ ಕಾಲೇಜಿಗೆ ಸೇರಿಕೊಂಡ ಬಳಿಕ ಆತನಲ್ಲಿ ಅಡಗಿಕೊಂಡಿರೋ ಸಾಧನೆಯು ಇಂಗ್ಲೀಷ್ ವಿಡಿಯೋ ಆಲ್ಬಮ್ ಗಳ ಮೂಲಕ ಹೊರ ಬಿದ್ದಿದೆ. ಈಗಾಗಲೇ ಶ್ರೇಣಿಕ್ ತನ್ನ ಸ್ವಂತ ಪ್ರತಿಭೆಯಿಂದೇ ರಿಯಲ್ ಗೈ ಎನ್ನುವ 3 ನಿಮಿಷ ಡ್ಯೂರೇಶನ್ ಇರುವ ಆಡಿಯೋ ಆಲ್ಬಮ್ ತಯಾರಿಸಿದ್ದಾನೆ.
ಇನ್ನು ಈ ಆಲ್ಬಂಗೆ ಈತನೇ ಲಿರಿಕ್ಸ್ ಆಲ್ಬಮ್ ಬರೆದಿದ್ದು ನಟನೆ ಕೂಡ ಅದ್ಭುತವಾಗಿ ಮಾಡಿದ್ದಾನೆ. ಈ ಕಾರಣಕ್ಕಾಗಿ ದೇಶ-ವಿದೇಶಗಳಲ್ಲಿ ಈತನ ಹೆಸರು ಜನ ಜನಿತವಾಗಿದೆ. ಈಗಾಗಲೇ ಹಲವು ಕಂಪನಿಗಳು ಹಾಡಿನ ಹಕ್ಕುಪಡೆಯಲು ಮುಂದೆ ಬಂದಿವೆ. ಇನ್ನು, ಶ್ರೇಣಿಕ್ ಸಾಧನೆಗೆ ಬೆನ್ನಲುಬಾಗಿ ನಿಂತವರು ತಂದೆ ಸಂಜಯ-ತಾಯಿ ಭಾರತಿ.
ಇಂಗ್ಲೀಷ್ ಹಾಡುಗಳ ಮೇಲೆ ಅತಿಯಾದ ಹಂಬಲ ಹೊಂದಿದ್ದ ಶ್ರೇಣಿಕ್ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಹಾಗೂ ಸಂಗೀತ ಲೋಕದಲ್ಲಿ ತನ್ನದೇ ಆದ ಸಾಧನೆ ಮಾಡಿದ್ದಾನೆ. ಉತ್ತರ ಕರ್ನಾಟಕದ ಯುವಕನೋರ್ವ ಇಂಗ್ಲೀಷ್ ಭಾಷೆಯಲ್ಲಿ ಹಾಡು ರಚನೆ ಮಾಡಿ, ಯಶಸ್ವಿಗೊಂಡಿರೋ ಮೊದಲ ಯುವಕ ಈತ ಎನ್ನಲಾಗುತ್ತಿದೆ.
ಒಟ್ಟಿನಲ್ಲಿ, ತನ್ನ 19ನೇ ವರ್ಷದಲ್ಲಿಯೇ ಇಂತಹದೊಂದು ಸಾಧನೆ ಮಾಡಿರೋದು ನಿಜಕ್ಕೂ ಹೆಮ್ಮೆಯಾಗಿದೆ. ಈತನ ಸಾಧನೆಗೆ ತಂದೆ-ತಾಯಿ ಹಾಗೂ ಫ್ರೆಂಡ್ಸ್ ಸಾಕಷ್ಟು ಪ್ರೋತ್ಸಾಹ ನೀಡಿದ್ದು, ಈ ಪ್ರೋತ್ಸಾಹವೇ ತನಗೆ ಇಂತಹ ಸ್ಥಾನಕ್ಕೆ ಬರೋದಕ್ಕೆ ಕಾರಣವಾಗಿದೆ ಅನ್ನೋದು ಸಾಧನೆ ಮಾಡಿರೋ ಯುವಕ ಶ್ರೇಣಿಕ್ ಮಾತು.
