ಮಾಧವನ್ ಜೊತೆ ಕನ್ನಡದ ಬೆಡಗಿ ಶ್ರದ್ಧಾ ಶ್ರೀನಾಥ್

Shraddha Shrinath acting with Madhavan
Highlights

ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್, ಕನ್ನಡಕ್ಕಿಂತ ತಮಿಳಿನಲ್ಲೇ ಹೆಚ್ಚು ಬ್ಯುಸಿ ಆಗುತ್ತಿದ್ದಾರೆ. ‘ವಿಕ್ರಂ ವೇದ’ ಬಂದು ಹೋದ ನಂತರ ಅಲ್ಲಿ ಅವರು ಬಹುಬೇಡಿಕೆಯ ನಟಿ ಆಗಿದ್ದಾರೆ. ವಿಶೇಷ ಅಂದ್ರೆ, ನಟ ಮಾದವನ್ ಕಾಂಬಿನೇಷನಲ್ಲೇ ಮತ್ತೊಂದು ಚಿತ್ರಕ್ಕೆ ನಾಯಕಿ ಆಗಿದ್ದಾರೆ. ಅಂದ ಹಾಗೆ, ಆ ಚಿತ್ರದ ಹೆಸರು ‘ಮಾರ’. ನವ ಪ್ರತಿಭೆ ದಿಲೀಪ್ ಕುಮಾರ್ ಚಿತ್ರದ ನಿರ್ದೇಶಕ. ಈಗಾಗಲೇ ‘ಕಲ್ಕಿ’ ಹೆಸರಿನ ಕಿರುಚಿತ್ರವೊಂದನ್ನು ನಿರ್ದೇಶಿಸಿ ತೆರೆಗೆ ತಂದಿದ್ದು, ಅದು ನೆಟ್‌ಪ್ಲೆಕ್ಸ್‌ಗೆ ಅತ್ಯಧಿಕ ಮೊತ್ತಕ್ಕೆ ಮಾರಾಟವಾಗಿದೆ.

ಯೂಟರ್ನ್ ಬೆಡಗಿ ಶ್ರದ್ಧಾ ಶ್ರೀನಾಥ್, ಕನ್ನಡಕ್ಕಿಂತ ತಮಿಳಿನಲ್ಲೇ ಹೆಚ್ಚು ಬ್ಯುಸಿ ಆಗುತ್ತಿದ್ದಾರೆ. ‘ವಿಕ್ರಂ ವೇದ’ ಬಂದು ಹೋದ ನಂತರ ಅಲ್ಲಿ ಅವರು ಬಹುಬೇಡಿಕೆಯ ನಟಿ ಆಗಿದ್ದಾರೆ. ವಿಶೇಷ ಅಂದ್ರೆ, ನಟ ಮಾದವನ್ ಕಾಂಬಿನೇಷನಲ್ಲೇ ಮತ್ತೊಂದು ಚಿತ್ರಕ್ಕೆ ನಾಯಕಿ ಆಗಿದ್ದಾರೆ.

ಅಂದ ಹಾಗೆ, ಆ ಚಿತ್ರದ ಹೆಸರು ‘ಮಾರ’. ನವ ಪ್ರತಿಭೆ ದಿಲೀಪ್ ಕುಮಾರ್ ಚಿತ್ರದ ನಿರ್ದೇಶಕ. ಈಗಾಗಲೇ ‘ಕಲ್ಕಿ’ ಹೆಸರಿನ ಕಿರುಚಿತ್ರವೊಂದನ್ನು ನಿರ್ದೇಶಿಸಿ ತೆರೆಗೆ ತಂದಿದ್ದು, ಅದು ನೆಟ್‌ಪ್ಲೆಕ್ಸ್‌ಗೆ ಅತ್ಯಧಿಕ ಮೊತ್ತಕ್ಕೆ ಮಾರಾಟವಾಗಿದೆ.ಅಲ್ಲಿಂದಲೇ ಭರವಸೆ  ಮೂಡಿಸಿದ ಯುವ ನಿರ್ದೇಶಕ ದಿಲೀಪ್ ಕುಮಾರ್ ಅವರಿಗೆ ಮೊದಲ ಪ್ರಯತ್ನದಲ್ಲೇ ಮಾಧವನ್ ಹಾಗೂ ಶ್ರದ್ಧಾ ಶ್ರೀನಾಥ್ ಅವರಂತಹ ಸ್ಟಾರ್ ಜೋಡಿಗೆ ಆ್ಯಕ್ಷನ್ ಕಟ್ ಹೇಳುವ ಅದೃಷ್ಟ ಖುಲಾಯಿಸಿದೆ.

ಇನ್ನು ‘ವಿಕ್ರಂ ವೇದ’ ಮೂಲಕ ಮಾಧವನ್ ಹಾಗೂ ಶ್ರದ್ಧಾ ಶ್ರೀನಾಥ್  ಜೋಡಿ ಕಾಲಿವುಡ್‌ನ ಸೂಪರ್ ಜೋಡಿ ಅಂತಲೇ ಫೇಮಸ್ ಆಗಿದೆ. ಆ ಜೋಡಿಯನ್ನು ಮತ್ತೊಮ್ಮೆ ತೆರೆಯಲ್ಲಿ ತೋರಿಸುವ ಯುವ ನಿರ್ದೇಶಕ ದಿಲೀಪ್ ಕುಮಾರ್ ಪ್ರಯತ್ನಕ್ಕೆ ಮುಂಬೈ ಮೂಲದ ನಿರ್ಮಾಪಕ ಪ್ರಮೋದ್ ಬಂಡವಾಳ ಹಾಕಲು ಮುಂದೆ ಬಂದಿದ್ದಾರೆ. ತಮಿಳಿನಲ್ಲಿ ಪ್ರಮೋದ್‌ಗೆ ಇದು ಎರಡನೇ ಚಿತ್ರ. ಅದ್ಧೂರಿ ವೆಚ್ಚದಲ್ಲೇ ಚಿತ್ರವನ್ನು ತೆರೆಗೆ ತರಲು ಸಿದ್ಧತೆ ನಡೆಸಿದ್ದಾರೆ. ಅದೆಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಕುತೂಹಲ ಹುಟ್ಟಿಸಿದ್ದು ಕನ್ನಡತಿ ಶ್ರದ್ಧಾ ಶ್ರೀನಾಥ್ ನಿಭಾಯಿಸುತ್ತಿರುವ ಪಾತ್ರ.

ಅವರೇ ಹೇಳುವ ಪ್ರಕಾರ ವಿಕ್ರಂ ವೇದ ಚಿತ್ರದಲ್ಲಿನ ಪಾತ್ರಕ್ಕೂ, ಇಲ್ಲಿನ ಪಾತ್ರಕ್ಕೂ ಸಾಕಷ್ಟು ವ್ಯತ್ಯಾಸವಿದೆ. ‘ನಾರ್ಮಲ್ ಹುಡುಗಿ. ಜನ ಏನು ಹೇಳ್ತಾರೆ ಅನ್ನೋದಕ್ಕಿಂತ ತನಗೆ ಇಷ್ಟ ಬಂದಂತೆ ಬದುಕುವ ಸ್ವಭಾವ. ಬೋಲ್ಡ್  ಹುಡುಗಿ. ತಂದೆ ಇಲ್ಲ, ಅಮ್ಮನೇ ಸರ್ವಸ್ವ. ತನ್ನದೇ ಜವಾಬ್ದಾರಿಯಿದೆ. ಹಾಗೆಯೇ ಏನಾದ್ರೂ ಸಾಧಿಸಬೇಕು ಎನ್ನುವ ಛಲವಿದೆ. ಆಗ ಹೀರೋ ಎಂಟ್ರಿಯಾಗುತ್ತಾನೆ, ಆನಂತರ ಆಕೆಯ ಬದುಕಲ್ಲಿ ಏನೆಲ್ಲ ಬದಲಾವಣೆ ಆಗುತ್ತೆ ಎನ್ನುವುದು ತಮ್ಮ ಪಾತ್ರ’ ಅಂತಾರೆ ಶ್ರದ್ಧಾ. ಮತ್ತೊಮ್ಮೆ ನಟ ಮಾಧವನ್ ಜತೆಗೆ ಕಾಣಿಸಿಕೊಳ್ಳುತ್ತಿರುವುದಕ್ಕೆ ಅವರು ಸಹಜವಾಗಿಯೇ ಖುಷಿ ಆಗಿದ್ದಾರೆ. ಹಾಗಂತ ಯಾವುದೇ ಎಕ್ಸೈಟ್‌ಮೆಂಟ್ ಇಲ್ಲ ಎನ್ನುವುದು ಅವರ ಮಾತು.

‘ಅಷ್ಟೊಂದು ದೊಡ್ಡ ನಟನ ಜತೆಗೆ ಮೊದಲು ಅಭಿನಯಿಸುವ ಅವಕಾಶ ಸಿಕ್ಕಾಗ ಸಹಜವಾಗಿಯೇ ತುಂಬಾನೆ ಎಕ್ಸೈಟ್‌ಮೆಂಟ್ ಇತ್ತು. ಆದ್ರೆ, ಅವರೊಂದಿಗೆ ಒಳ್ಳೆಯ ಬಾಂಡಿಂಗ್ ಬೆಳೆದಿದೆ. ಹಾಗಾಗಿ ಮತ್ತೊಮ್ಮೆ ಅಭಿನಯಿಸಲು ಅವಕಾಶ ಸಿಕ್ಕಿದ್ದು ಖುಷಿ ಆಗುತ್ತಿದೆ’ ಎನ್ನುತ್ತಾರೆ ಶ್ರದ್ಧಾ. ಜೂನ್ 18 ರಿಂದಲೇ ಚಿತ್ರೀಕರಣ ಶುರುವಾಗುತ್ತಿದೆ. ಮೊದಲ ಶೆಡ್ಯೂಲ್ ಪಾಂಡಿಚೇರಿಯಲ್ಲಿ ಫಿಕ್ಸ್ ಆಗಿದೆ. ಉಳಿದದ್ದು ಈಗಷ್ಟೇ ಫೈನಲ್ ಆಗಬೇಕಿದೆ. ಇದೊಂದು ಟ್ರಾವೆಲ್ ಕತೆ ಆಗಿದ್ದರಿಂದ ಹಲವು ಕಡೆಗಳಲ್ಲಿ ಚಿತ್ರೀಕರಣಕ್ಕೆ ಚಿತ್ರ ತಂಡ ಪ್ಲ್ಯಾನ್ ಮಾಡಿಕೊಂಡಿದೆಯಂತೆ.

ಇನ್ನು ತೆಲುಗು, ತಮಿಳು ಅವಕಾಶಗಳ ನಡುವೆ ಕನ್ನಡಕ್ಕೆ ಅಪರೂಪವೇ ಆಗಿರುವ ಶ್ರದ್ಧಾ, ಈಗಷ್ಟೇ ‘ಗೋದ್ರಾ’ ಚಿತ್ರದ ಬಹುತೇಕ ಚಿತ್ರೀಕರಣ ಮುಗಿಸಿದ್ದಾರೆ. ಒಂದು ಹಾಡಿನ ಚಿತ್ರೀಕರಣ ಮಾತ್ರ ಬಾಕಿಯಿದೆಯಂತೆ. ಜತೆಗೆ ಮತ್ತೊಂದು ಹೊಸ ಕನ್ನಡ ಚಿತ್ರಕ್ಕೂ ಅವರು ನಾಯಕಿ ಆಗುವ ಸಾಧ್ಯತೆಯಿದೆ. ಸದ್ಯಕ್ಕೆ ಆ ಬಗ್ಗೆ ಯಾವುದೇ ಮಾಹಿತಿ ನೀಡದ ಅವರು, ಇಷ್ಟರಲ್ಲೇ ಅದು ಫೈನಲ್ ಆಗುವುದು ಗ್ಯಾರಂಟಿ ಎನ್ನುತ್ತಾರೆ.  ಹಿಂದಿಯ ‘ಮಿಲನ ಟಾಕೀಸ್’ ಮೂಲಕ ಬಾಲಿವುಡ್‌ಗೆ ಕಾಲಿಟ್ಟರುವ ಅವರು, ಅಲ್ಲೂ ಮತ್ತೊಂದು ಚಿತ್ರಕ್ಕೆ ನಾಯಕಿ ಆಗುತ್ತಿದ್ದಾರೆಂಬ ಮಾತುಗಳಿವೆ.   

loader