ಮುಂಬೈ[ನ.08]  ಶ್ರದ್ಧಾ ಕಪೂರ್ ತಮ್ಮ ಬಾಯ್ ಫ್ರೆಂಡ್ ಜತೆ ಓಡಾಡುತ್ತಿರುವ ವಿಡಿಯೋ ಫುಲ್ ವೈರಲ್ ಆಗಿದೆ.  ಶ್ರದ್ಧಾ ಕಪೂರ್ ಬಾಯ್ ಫ್ರೆಂಡ್ ಬಗ್ಗೆ ಈ ಹಿಂದೆ ಅನೇಕ ಬಾರಿ ಗುಸು ಗುಸು ಕೇಳಿ ಬಂದಿತ್ತು. ಶ್ರದ್ಧಾ ಜೊತೆ ಆಶಿಕಿ 2 ಚಿತ್ರದಲ್ಲಿ ನಟಿಸಿದ್ದ  ಆದಿತ್ಯ ರಾಯ್ ಕಪೂರ್ ಜೊತೆಗೂ ಅವರ ಹೆಸರು ತಳುಕು ಹಾಕಿತ್ತು.  ಆದರೆ ಇಲ್ಲಿವರೆಗೂ ಯಾವುದೇ ಸಂಗತಿ ಬಹಿರಂಗ ಆಗಿರಲಿಲ್ಲ.

ಕಾರ್ಯಕ್ರಮಮವೊಂದನ್ನು ಮುಗಿಸಿಕೊಂಡು ಶ್ರದ್ಧಾ ಮತ್ತು ಆಕೆಯ ಬಾಯ್ ಫ್ರೆಂಡ್ ಮತ್ತೊಂದು ಕಡೆ ತೆರಳುತ್ತಿರುವ ಫೋಟೋ ಮತ್ತು ವಿಡಿಯೋ ಫುಲ್ ವೈರಲ್ ಆಗಿದೆ.  ಸೆಲೆಬ್ರಿಟಿ ಫೋಟೋಗ್ರಾಫರ್ ರೋಹನ್ ಶ್ರೇಷ್ಠಾ ಜತೆ ಶ್ರದ್ಧಾ ಓಡಾಡುತ್ತಿರುವ ಗಾಸಿಪ್ ಇದ್ದರೂ ಇಂದು ಅದು ಪಕ್ಕಾ ಆಗಿದೆ.