ಈ ವರ್ಷ ಸಪ್ತಪದಿ ತುಳಿಯಲಿದ್ದಾರಾ ಬಾಲಿವುಡ್ ಬ್ಯೂಟಿ ಶ್ರದ್ಧಾ ಕಪೂರ್

Shraddha Kapoor gets Married This Year
Highlights

ಬಾಲಿವುಡ್’ನಲ್ಲಿ ಮದುವೆಗಳ ಸಾಲೇ ನಡೆಯುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಕ್ರಿಕೆಟಿಗ ವಿರಾಟ್ ಕೋಹ್ಲಿ ಜೊತೆ ಅನುಷ್ಕಾ ಶರ್ಮ ಸಪ್ತಪದಿ ತುಳಿದಿದ್ದು, ಇನ್ನೇನು ಕೆಲ ದಿನಗಳಲ್ಲೇ ರಣ್ವೀರ್ ಹಾಗೂ ದೀಪಿಕಾ ಪಡುಕೋಣೆ  ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಇನ್ನು ಸೋನಮ್ ಕಪೂರ್ ಕೂಡ ಗೆಳೆಯ ಆನಂದ್ ಅಹುಜಾ ಜೊತೆಗೆ ಮದುವೆಯಾಗಲು ಸಜ್ಜಾಗಿದ್ದಾರೆ.  ಈ ಸಾಲಿಗೆ ಶ್ರದ್ಧಾ ಕಪೂರ್ ಕೂಡ ಸೇರುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. 

ಮುಂಬೈ : ಬಾಲಿವುಡ್’ನಲ್ಲಿ ಮದುವೆಗಳ ಸಾಲೇ ನಡೆಯುತ್ತಿದೆ. ಕೆಲ ತಿಂಗಳ ಹಿಂದಷ್ಟೇ ಕ್ರಿಕೆಟಿಗ ವಿರಾಟ್ ಕೋಹ್ಲಿ ಜೊತೆ ಅನುಷ್ಕಾ ಶರ್ಮ ಸಪ್ತಪದಿ ತುಳಿದಿದ್ದು, ಇನ್ನೇನು ಕೆಲ ದಿನಗಳಲ್ಲೇ ರಣ್ವೀರ್ ಹಾಗೂ ದೀಪಿಕಾ ಪಡುಕೋಣೆ  ವಿವಾಹ ಬಂಧನಕ್ಕೆ ಒಳಗಾಗಲಿದ್ದಾರೆ. ಇನ್ನು ಸೋನಮ್ ಕಪೂರ್ ಕೂಡ ಗೆಳೆಯ ಆನಂದ್ ಅಹುಜಾ ಜೊತೆಗೆ ಮದುವೆಯಾಗಲು ಸಜ್ಜಾಗಿದ್ದಾರೆ. 

ಈ ಸಾಲಿಗೆ ಶ್ರದ್ಧಾ ಕಪೂರ್ ಕೂಡ ಸೇರುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಅದಕ್ಕೆ ಕಾರಣವಾಗಿರುವುದು ಅವರು ತಮ್ಮ ಇನ್ ಸ್ಟಾಗ್ರಾಂನಲ್ಲಿ ಹಾಕಿಕೊಂಡಿರುವ ಸ್ಟೇಟಸ್ ಆಗಿದೆ. ಹಳದಿ ಬಣ್ಣದ ಲೆಹಾಂಗಾವನ್ನು ಇರಿಸಿಕೊಂಡು ಗೆಟ್ಟಿಂಗ್ ರೆಡಿ ಫಾರ್ ಬಿಗ್ಗೆಸ್ಟ್ ಹಳದಿ ಸೆರೆಮನಿ ಎಂದು ಹಾಕಿಕೊಂಡಿದ್ದಾರೆ.  ಈ ಮೂಲಕ ಬಾಲಿವುಡ್ ನಲ್ಲಿ ಮದುವೆ ಯಾಗುತ್ತಿರುವವರ ಸಾಲಿಗೆ ಶ್ರದ್ಧಾ ಕೂಡ ಸೇರುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. 

 ಶ್ರದ್ಧಾ ಕಪೂರ್ ಬಾಯ್ ಫ್ರೆಂಡ್ ಬಗ್ಗೆ ಈ ಹಿಂದೆ ಅನೇಕ ಬಾರಿ ಗುಸು ಗುಸು ಕೇಳಿ ಬಂದಿತ್ತು. ಶ್ರದ್ಧಾ ಜೊತೆ ಆಶಿಕಿ 2 ಚಿತ್ರದಲ್ಲಿ ನಟಿಸಿದ್ದ  ಆದಿತ್ಯ ರಾಯ್ ಕಪೂರ್ ಜೊತೆಗೂ ಅವರ ಹೆಸರು ತಳುಕು ಹಾಕಿತ್ತು.  ಆದರೆ ಎಂದಿಗೂ ಕೂಡ ಶ್ರದ್ಧ ಇಂತಹ ಗಾಸಿಪ್’ಗಳಿಗೆ ಸೊಪ್ಪು ಹಾಕಿಲ್ಲ. ಇನ್ನು ಶ್ರದ್ಧಾ ತಂದೆ ಶಕ್ತಿ ಕಪೂರ್ ಕೂಡ ಮಗಳ ಮದುವೆ ಇದುವರೆಗೆ ಯಾವುದೇ ಮಾತನ್ನು ಆಡಿಲ್ಲ.
 
ಸದ್ಯ ಪ್ರಭಾಸ್ ಜೊತೆಗೆ ಸಾಹೋ ಚಿತ್ರದಲ್ಲಿ ಬ್ಯುಸಿಯಾಗಿರುವ ಶ್ರದ್ಧಾ ಕೈಯಲ್ಲಿ ಅನೇಕ ಚಿತ್ರಗಳೂ ಕೂಡ ಇದೆ.

 

 

Getting ready for the biggest haldi ceremony of the year 💛💖

A post shared by Shraddha (@shraddhakapoor) on

loader