ಡಾ.ಶಿವರಾಜ್ ಕುಮಾರ್ ಮತ್ತು ಕಿಚ್ಚ ಸುದೀಪ್ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಕಾರಣಕ್ಕೆ ಅಪಾರ ನಿರೀಕ್ಷೆ ಮೂಡಿಸಿರುವ 'ದಿ ವಿಲನ್' ಚಿತ್ರದ ಹಾಡೊಂದನ್ನು ನಿರ್ದೇಶಕ ಪ್ರೇಮ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. 'ನಿನ್ನೆ ಮೊನ್ನೆ ಬಂದೋರೆಲ್ಲ ನಾನೇ ನಂಬರ್ 1 ಅಂತಾರೋ...' ಎಂಬೀ ಹಾಡು ಯಾರಿಗೋ ಟಾಂಗ್ ಕೊಟ್ಟಂತೆ ಇದ್ದು, ಜನರಿಂದ ವಿಭಿನ್ನ ಪ್ರತಿಕ್ರಿಯೆಗಳು ಲಭ್ಯವಾಗುತ್ತಿದೆ.

ಆ್ಯಮಿ ಜಾಕ್ಸನ್ ನಟಿಯಾಗಿರುವ ಈ ಚಿತ್ರದಲ್ಲಿ ಅರ್ಜುನ್ ಜನ್ಯ ಅವರು ಸಂಗೀತ ನೀಡಿದ್ದಾರೆ. ವಿಭಿನ್ನ ಗೆಟ್‌ ಅಪ್‌ನಲ್ಲಿ ಶಿವರಾಜ್ ಕುಮಾರ್ ಕಾಣಿಸುತ್ತಿದ್ದು, ಕಳೆದೆರಡು ವರ್ಷಗಳಿಂದಲೂ ಚಿತ್ರೀಕರಣ ನಡೆಯುತ್ತಲೇ ಇದೆ. ಈಗಾಗಲೇ ಈ ಚಿತ್ರದ ಹಾಡುಗಳು 1.8 ಕೋಟಿ ರೂ.ಗೆ ಮಾರಾಟವಾಗಿರುವುದು ಈ ಚಿತ್ರದ ಮತ್ತೊಂದು ವಿಶೇಷ.

'ನಿನ್ನೆ ಮೊನ್ನೆ ಬಂದೋರೆಲ್ಲ ನಾನೇ ನಂಬರ್ 1 ಅಂತಾರೋ...' ಹಾಡಿನಲ್ಲಿಯೂ ಶಿವರಾಜ್‌ಕುಮಾರ್ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಿದ್ದು, ನೃತ್ಯ ನಿರ್ದೆಶನವನ್ನು ವಿ. ನಾಗೇಶ್ ಮಾಸ್ಟರ್ ಮಾಡಿದ್ದಾರೆ. Young and Energetic ಆಗಿ ಶಿವಣ್ಣ ಸ್ಟೆಪ್ಸ್ ಹಾಕಿದ್ದು, ಈ ಹಾಡಿಗೆ ಜೀವ ತುಂಬಿದ್ದಾರೆ. 

ನಿನ್ನೆ ಮೊನ್ನೆ ಬಂದೋರೆಲ್ಲ...ವಿವಾದ ಹುಟ್ಟಿಸಬಹುದಾ ಎನ್ನೋ ಅನುಮಾನ ಹುಟ್ಟಿಸಿದೆ.

ಅಷ್ಟಕ್ಕೂ ಈ ಚಿತ್ರಕ್ಯಾಕೆ ಇಷ್ಟು ಟೈಂ?

ಏನೇ ಸಿನಿಮಾ ಮಾಡಿದರೂ ಒಂದು ವರ್ಷ ಟೈಮ್ ತೆಗೆದುಕೊಳ್ಳುವ ಪ್ರೇಮ್, 'ಯಾವುದೇ ಕಾರಣಕ್ಕೂ ಕ್ವಾಲಿಟಿ ವಿಷಯದಲ್ಲಿ ರಾಜಿ ಮಾಡುಕೊಳ್ಳುವುದಿಲ್ಲ. ಈ ಸಿನಿಮಾದ ಕ್ಲೈಮಾಕ್ಸ್ ಮಾತ್ರ ಬಾಕಿ ಇದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಮುಗಿಲದೆ,' ಎನ್ನುತ್ತಾರೆ ಜೋಗಿ ಫೇಮ್‌ನ ಪ್ರೇಮ್.

ಮಾಸ್ ಸಾಂಗ್, ಸ್ಟಾರ್ ನಟರು ಹಾಗೂ ಬಾಲಿವುಡ್ ಬೆಡಗಿ ಸಿನಿಮಾಕ್ಕೆ ಚಿತ್ರರಂಗ ಆತುರದಿಂದ ಕಾಯುತ್ತಿದೆ.

Scroll to load tweet…