ಶಿವಣ್ಣ ನಟನೆಯ ‘ಟಗರು’ ಸಿನಿಮಾ ತಮಿಳಿಗೆ ರೀಮೇಕ್ ಆಗುತ್ತಿದೆ
ಪ್ರಸಿದ್ಧ ನಿರ್ದೇಶಕ ಎಂ ಮುತ್ತಯ್ಯ ಅವರೇ ಟಗರು ಚಿತ್ರದ ರೀಮೇಕ್ ರೈಟ್ಸ್ ತೆಗೆದುಕೊಂಡಿದ್ದಾರೆ. ತಮಿಳು ವರ್ಷನ್‌ನಲ್ಲಿ ನಟರಾದ ವಿಜಯ್ ಸೇತುಪತಿ ಅಥವಾ ಕಾರ್ತಿ ಅವರು ಶಿವಣ್ಣ ಪಾತ್ರವನ್ನು ನಟಿಸುವ ಸಾಧ್ಯತೆಗಳಿವೆ. ನಾಯಕನ ಹೊರತಾಗಿ ಬರುವ ಡಾಲಿ, ಅಂಕಲ್, ಸರೋಜಾ ಪಾತ್ರಗಳನ್ನು ಯಾರು ಮಾಡುತ್ತಾರೆಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.
ಟಗರು ಚಿತ್ರದಲ್ಲಿ ಕತೆ ಇಲ್ಲ ಎನ್ನುವವರಿಗೆ ಉತ್ತರ ಎಂಬಂತೆ ಕನ್ನಡದ ಸಿನಿಮಾವೊಂದು ಕಾಲಿವುಡ್ ನಿರ್ದೇಶಕನ ಗಮನ ಸೆಳೆದಿದೆ.
