ಶಿವಣ್ಣ ಯಾಕೆ ಅಷ್ಟೊಂದು ಬ್ಯುಸಿಯಾಗಿರ್ತಾರೆ? ಇಲ್ಲಿವೆ ಟಾಪ್ 10 ರೀಸನ್ಸ್!

Shivaraj Kumar Busy Secret
Highlights

ಸೋಲು ಮತ್ತು ಗೆಲುವು ಎರಡನ್ನೂ ನೋಡಿದ್ದೇನೆ. ಸೋತಾಗ ಯಾಕೆ ಸೋತೆ ಎಂದು ಚಿಂತೆ ಮಾಡಿಕೊಂಡು ಕೂರಲ್ಲ. 6  ಚಿತ್ರ ಮುಗಿಸಿ ತೆರೆಗೆ ತರುವ ತನಕ ತಂಡದ ಜತೆ ನಾನಿರುತ್ತೇನೆ. ಚಿತ್ರದ ಪ್ರಚಾರಕ್ಕೂ ಹೋಗುತ್ತೇನೆ. ಆದರೆ, ವರ್ಷಗಳ ಕಾಲ ಟೈಮ್ ತೆಗೆದುಕೊಂಡು ಒಂದೇ ಚಿತ್ರಕ್ಕೆ ಅಂಟಿಕೊಂಡು ಕೂರಲ್ಲ ಅಂತಾರೆ ಶಿವಣ್ಣ. 

‘ನೀವು ಟೈಟಲ್ ಕೇಳಿ ಕಾಲ್‌ಶೀಟ್ ಕೊಡಬೇಡಿ’ ಎಂದು ಇತ್ತೀಚೆಗೆ ಸುದೀಪ್  ಶಿವಣ್ಣ ಹತ್ತಿರ ಹೇಳಿದ್ದರು. ಶಿವಣ್ಣ ಬಂದ ಸಿನಿಮಾ ಎಲ್ಲವನ್ನೂ ಒಪ್ಕೋತಾರೆ ಅನ್ನುವ ಮಾತೂ ಇದೆ. ಬೇರೆ ಸ್ಟಾರುಗಳು ವರ್ಷಕ್ಕೊಂದು ಸಿನಿಮಾ ಮಾಡಿದರೆ ಶಿವಣ್ಣನ ಮೂರು ನಾಲ್ಕು ಸಿನಿಮಾ ತೆರೆಕಾಣುತ್ತವೆ. ಶಿವಣ್ಣ ಇಷ್ಟೊಂದು ಬಿಜಿಯಾಗಿರಲು ಕಾರಣ ಏನು? ಇಲ್ಲಿವೆ ಟಾಪ್ 10 ರೀಸನ್ಸ್.


1. ನಾನು ಒಪ್ಪಿಕೊಂಡ ಚಿತ್ರದ ಶೂಟಿಂಗ್ ಶುರುವಾದ ಮೇಲೆ ವಾಚ್ ಕಡೆ ನೋಡಲ್ಲ. ಬೆಳಗ್ಗೆ, ಮಧ್ಯಾನ್ಹ, ಸಂಜೆ, ರಾತ್ರಿ ಹೀಗೆ ಯಾವುದರ ಬಗ್ಗೆಯೂ ಗಮನ ಕೊಡದೆ ಸಿನಿಮಾ, ಸಿನಿಮಾ, ಸಿನಿಮಾ ಅಂತಲೇ ಕೆಲಸ ಮಾಡುತ್ತೇನೆ.

2.  ಸಾಮಾನ್ಯವಾಗಿ ದೊಡ್ಡ ನಟರಿಗೆ ಕತೆ ಹೇಳುವುದಕ್ಕೆ ತುಂಬಾ ಜನ ಬರುತ್ತಾರೆ. ಬಹುತೇಕರು ಅಂಥವರಿಗೆ ಸುಲಭಕ್ಕೆ ಸಿಗದಿರಬಹುದು. ಆದರೆ, ನಾನು ಕತೆ ಹೇಳುತ್ತೇನೆಂದು ಬಂದವರನ್ನು ಅನುಮಾನದಿಂದ ನೋಡಿ ದೂರ ಇಟ್ಟಿಲ್ಲ. ಯಾರೇ ಬಂದು ಕತೆ ಹೇಳುತ್ತೇನೆ ಎಂದಾಗ ಕೇಳುತ್ತೇನೆ. ಚೆನ್ನಾಗಿದ್ದರೆ ಒಪ್ಪಿಕೊಳ್ಳುತ್ತೇನೆ.

3.  ಹೊಸಬರು, ಹಳೇ ನಿರ್ದೇಶಕರು ಎನ್ನುವ ಭೇದವಿಲ್ಲದೆ ಎಲ್ಲರನ್ನು  ಹತ್ತಿರಕ್ಕೆ ಸೇರಿಸಿಕೊಳ್ಳುತ್ತೇನೆ. ಎಲ್ಲರಿಗೂ ಸುಲಭಕ್ಕೆ ಸಿಗುವ ಕಲಾವಿದ.

4.  ಕ್ಯಾಮೆರಾ ಮುಂದೆ ಹೋಗುವ ಮುನ್ನ ನಿರ್ದೇಶಕರ ಬಳಿ ಏನೆಲ್ಲ ಕೇಳಬೇಕೋ ಅದೆಲ್ಲವನ್ನೂ ಕೇಳಿಕೊಂಡಿರುತ್ತೇನೆ. ಒಮ್ಮೆ ಕ್ಯಾಮೆರಾ ಮುಂದೆ ನಿಂತ ಮೇಲೆ, ಚಿತ್ರಕ್ಕೆ ಶೂಟಿಂಗ್ ಶುರುವಾದ ಮೇಲೆ ಅದು ಮುಗಿಯುವ ತನಕ ನಾನು ನಿರ್ದೇಶಕರ ನಟ. ನಿರ್ದೇಶಕರಿಗೇ ನಿರ್ದೇಶನ ಮಾಡಕ್ಕೆ ಹೋಗಲ್ಲ. ನಿರ್ದೇಶಕರು ಹೇಳಿದ್ದನ್ನು ತಪ್ಪದೆ ಮಾಡುತ್ತೇನೆ. ಕೆಲವು ಬಾರಿ ದೃಶ್ಯಗಳ ನಡುವೆ ಬಿಡುವು ಇದ್ದರೆ ಹೋಗಿ ಕ್ಯಾರವಾನ್‌ನಲ್ಲಿ ಕೂರಲ್ಲ. ನಿರ್ದೇಶಕನ ಕೂಗಳತೆಯಲ್ಲೇ ನಿಂತಿರುತ್ತೇನೆ.

5.  ಸೋಲು ಮತ್ತು ಗೆಲುವು ಎರಡನ್ನೂ ನೋಡಿದ್ದೇನೆ. ಸೋತಾಗ ಯಾಕೆ ಸೋತೆ ಎಂದು ಚಿಂತೆ ಮಾಡಿಕೊಂಡು ಕೂರಲ್ಲ.

6.  ಚಿತ್ರ ಮುಗಿಸಿ ತೆರೆಗೆ ತರುವ ತನಕ ತಂಡದ ಜತೆ ನಾನಿರುತ್ತೇನೆ. ಚಿತ್ರದ ಪ್ರಚಾರಕ್ಕೂ ಹೋಗುತ್ತೇನೆ. ಆದರೆ, ವರ್ಷಗಳ ಕಾಲ ಟೈಮ್ ತೆಗೆದುಕೊಂಡು ಒಂದೇ ಚಿತ್ರಕ್ಕೆ ಅಂಟಿಕೊಂಡು ಕೂರಲ್ಲ.

7.  ಮಿನಿಮಮ್ ಗ್ಯಾರಂಟಿ ನಟ ಎನ್ನುವ ನಂಬಿಕೆ ಬಹುತೇಕರದ್ದು. ಅವರ ಈ ನಂಬಿಕೆಯನ್ನು ಸುಳ್ಳು ಮಾಡಿಲ್ಲ. ಹಾಕಿದ ಬಂಡವಾಳವನ್ನು ವಾಪಸ್ಸು ಕೊಡಿಸುವೆ. ಅಷ್ಟರ ಮಟ್ಟಿಗೆ ನಾನು ಗ್ಯಾರಂಟಿ ನಟ.

8.  ಡ್ಯಾನ್ಸ್, ಫೈಟ್, ಭೂಗತ- ಮಾಸ್ ಕತೆಗಳಿಗೆ ಸ್ಟಾರ್ ಲುಕ್ ಬೇಕು ಎನ್ನುವವರಿಗೆ ನಾನೇ ಸೂಕ್ತ ಎನ್ನುವ ಭಾವನೆ ಇದೆ. ಅಂಥ ಕತೆ ತಂದವರನ್ನು ನಾನು ದೂರ ಮಾಡಿಲ್ಲ.

9.  ಮಾಮೂಲಿ ಕಮರ್ಷಿಯಲ್ ಚಿತ್ರಗಳ ಜತೆಗೆ ನಾನು ಹೊಸ ರೀತಿ ಕತೆಗಳಿಗೂ ಮಹತ್ವ ಕೊಡುತ್ತೇನೆ. ಆ ಕಾರಣಕ್ಕೆ ‘ಕವಚ’ ರೀಮೇಕ್ ಆದರೂ ಒಪ್ಪಿಕೊಂಡೆ. ಈಗ ‘ದ್ರೋಣ’ ಚಿತ್ರ ಕೂಡ ಅಂಥ ಹೊಸ ಬಗೆಯ ಶಿಕ್ಷಕನ ಕತೆ.

10.  ನನ್ನ ಚಿತ್ರಗಳ ಪ್ರಚಾರ, ನನ್ನ ಚಿತ್ರಗಳ ಗೆಲುವಿನ ಬಗ್ಗೆ ಮಾತ್ರ ಯೋಚಿಸಲ್ಲ. ಬೇರೆಯವರ ಚಿತ್ರಗಳ ಪ್ರಚಾರ ಸೇರಿದಂತೆ ಸಾಕಷ್ಟು  ರೀತಿಯಲ್ಲಿ ಅವರಿಗೆ ಬೆಂಬಲವಾಗಿ ನಿಲ್ಲುತ್ತೇನೆ. 

loader