ಸದ್ಯದಲ್ಲೇ ಸೂಪರ್ ಕಾಂಬಿನೇಷನ್‌ನ ಸಿನಿಮಾ ಸೆಟ್ಟೇರುತ್ತಿದೆ.  ಇದರ ಸಾರಥಿ ಶಿವರಾಜ್‌ಕುಮಾರ್ ಹಾಗೂ ವಿನಯ್ ರಾಜ್ ಕುಮಾರ್. ಇವರಿಬ್ಬರು ಮೊಟ್ಟ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ‘ಜಟ್ಟ’, ‘ಮೈತ್ರಿ’, ‘ಮೈನಾ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ ಎನ್‌ಎಸ್ ರಾಜ್‌ಕುಮಾರ್ ಇದರ ನಿರ್ಮಾಪಕ. ಈ ಚಿತ್ರ ಆಗಸ್ಟ್ ತಿಂಗಳಲ್ಲಿ ಸೆಟ್ಟೇರಲಿದೆ.‘

ಬೆಂಗಳೂರು (ಮಾ. 28): ಸದ್ಯದಲ್ಲೇ ಸೂಪರ್ ಕಾಂಬಿನೇಷನ್‌ನ ಸಿನಿಮಾ ಸೆಟ್ಟೇರುತ್ತಿದೆ. ಇದರ ಸಾರಥಿ ಶಿವರಾಜ್‌ಕುಮಾರ್ ಹಾಗೂ ವಿನಯ್ ರಾಜ್ ಕುಮಾರ್. ಇವರಿಬ್ಬರು ಮೊಟ್ಟ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ‘ಜಟ್ಟ’, ‘ಮೈತ್ರಿ’, ‘ಮೈನಾ’ ಮುಂತಾದ ಚಿತ್ರಗಳನ್ನು ನಿರ್ಮಿಸಿದ ಎನ್‌ಎಸ್ ರಾಜ್‌ಕುಮಾರ್ ಇದರ ನಿರ್ಮಾಪಕ. ಈ ಚಿತ್ರ ಆಗಸ್ಟ್ ತಿಂಗಳಲ್ಲಿ ಸೆಟ್ಟೇರಲಿದೆ.

ಈಗಾಗಲೇ ಕತೆ ಓಕೆ ಮಾಡಿದ್ದೇನೆ. ಎಂಟರ್‌ಟೇನ್‌ಮೆಂಟ್ ಕಂ ಆ್ಯಕ್ಷನ್ ಸಿನಿಮಾ ಇದು. ಶಿವಣ್ಣ ಹಾಗೂ ವಿನಯ್ ಜೋಡಿಗೆ ಹೇಳಿ ಮಾಡಿಸಿದಂತಹ ಕತೆ’ ಎನ್ನುತ್ತಾರೆ ಎನ್‌ಎಸ್ ರಾಜ್‌ಕುಮಾರ್. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ಯಾರು, ಚಿತ್ರದ ಹೆಸರೇನು ಎಂಬ ಗುಟ್ಟು ಬಹಿರಂಗಗೊಂಡಿಲ್ಲ. ಒಂದು ಕಡೆ ಶಿವಣ್ಣ ‘ದಿ ವಿಲನ್’ ಹಾಗೂ ‘ಕವಚ’ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ನಂತರ ರವಿವರ್ಮ ನಿರ್ದೇಶನದ ‘ರುಸ್ತುಂ’ ಚಿತ್ರ ಶುರು ಮಾಡಲಿದ್ದಾರೆ. ನಂತರ ಲಕ್ಕಿ
ಗೋಪಾಲ ನಿರ್ದೇಶನದ ‘ಎಸ್‌ಆರ್‌ಕೆ’ ಸಿನಿಮಾ. ಇಷ್ಟು ಚಿತ್ರಗಳನ್ನು ಮುಗಿಸಿದ ನಂತರ ವಿನಯ್ ರಾಜ್‌'ಕುಮಾರ್‌ಗೆ ಜತೆಯಾಗಲಿದ್ದಾರೆ ಶಿವಣ್ಣ.