ಬಾಲಿವುಡ್‌ನಲ್ಲಿ ರೇಪ್‌ ಅನ್ನೋದೆ ಇಲ್ಲ, ಎಲ್ಲ ಮ್ಯೂಚುವಲ್!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 12, Oct 2018, 6:19 PM IST
Shilpa Shinde dismisses Me Too movement everything mutual in Bollywood
Highlights

ಯಾರನ್ನು ಒತ್ತಾಯ ಪೂರ್ವಕವಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಾಲಿವುಡ್ ನಟಿ ಯೊಬ್ಬರು ಬಾಂಬ್ ಸಿಡಿಸಿದ್ದಾರೆ. ವರ್ಷದ ಹಿಂದೆ ಆರೋಪ ಮಾಡಿದ್ದವರೇ ಇಂದು ಉಲ್ಟಾ ಹೊಡೆದಿದ್ದಾರೆ.

ಹಿಂದಿ ಕಿರುತೆರೆಯ ಕಲಾವಿದೆ, ಬಿಗ್ ಬಾಸ್ 11 ರ ವಿನ್ನರ್ ಶಿಲ್ಪಾ ಶಿಂಧೆ ಸಹ ಮೀ ಟೂ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರು ಹೇಳಿರುವ ವಿಚಾರ ಉಳಿದ ನಟಿಯರ ಆರೋಪಕ್ಕಿಂತ ಸಂಪೂರ್ಣ ಭಿನ್ನವಾಗಿದೆ.

ತನ್ನ ಮೇಲೆ ನಿರ್ಮಾಪಕ ಸಂಜಯ್ ಕೊಹ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಕಳೆದ ವರ್ಷ ಇದೇ ನಟಿ ಆರೋಪಿಸಿದ್ದರು.‘ಭಾಬಿಜೀ ಘರ್ ಪರ್ ಹೈ’ ಎಂಬ ಟಿವಿ ಶೋನಲ್ಲಿ ಮುಂದುವರೆಯಲು ತನ್ನೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ನಿರ್ಮಾಪಕ ಸಂಜಯ್ ಕೊಹ್ಲಿ ಒತ್ತಡ ಹೇರಿದ್ದರು ಎಂದು ಶಿಲ್ಪಾ ದೂರಿದ್ದರು. ಆದರೆ ಈಗ ಅವರು ಹೇಳಿರುವ ಮಾತು ವ್ಯತಿರಿಕ್ತವಾಗಿದೆ.

ಮೀ ಟೂ ಬಗ್ಗೆ ಖಾಸಗಿ ವಾಹಿನಿಯೊಂದು ಪ್ರಶ್ನೆ ಮಾಡಿದಾಗ ‘ ಇದು ಶುದ್ಧ ಬಾಲಿಶತನ, ಆಗ ಮಾತನಾಡದೆ ಈಗ ಮಾತನಾಡುವುದರಲ್ಲಿ ಅರ್ಥ ಏನಿದೆ?’ ಎಂದು ಪ್ರಶ್ನೆ ಮಾಡಿದ್ದಾರೆ.

ಇದೆಲ್ಲವೂ ಮ್ಯುಚುವಲ್ ಅಂಡರ್ ಸ್ಟಾಂಡಿಂಗ್ ಮೇಲೆ ನಡೆಯುತ್ತದೆ. ಅತ್ಯಾಚಾರದ ಮಾತು ಬಾಲುವುಡ್ ನಲ್ಲೇ ಇಲ್ಲ. ಯಾರನ್ನೂ ಯಾರೂ ಒತ್ತಾಯಪೂರ್ವಕವಾಗಿ ಹಾಸಿಗೆಗೆ ಎಳೆದೊಯ್ಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

 

 

 

 

loader