ಬೆಂಗಳೂರು(ಅ.6): ಸ್ಯಾಂಡಲ್ ವುಡ್ ನಲ್ಲಿ ಲೂಸ್ ಮಾದ ಅಂತಾನೆ ಗುರುತಿಸಿಕೊಂಡಿರುವ ನಟ ಲೂಸ್ ಮಾದ ಯೋಗಿಗೆ ಲವ್ವಾಗಿದೆ. ತಾವು ಲವ್ವಲ್ಲಿರೋದನ್ನಾ ಸ್ವತಃ ಯೋಗಿ ಒಪ್ಪಿಕೊಂಡಿದ್ದಾರೆ. ಆದರೆ ಯೋಗಿ ಪ್ರೀತಿಸ್ತಿರೋದು ಸಿನಿಮಾ ಕ್ಷೇತ್ರದವರನ್ನಲ್ಲಾ. ಐಟಿ ಕಂಪನಿಯ ಉದ್ಯೋಗಿಯನ್ನು . ಯೋಗಿಯ ಮನಕದ್ದ ಚೆಲುವೆಯ ಹೆಸರು ಸಾಹಿತ್ಯ.

ಯೋಗಿ ಮತ್ತು ಸಾಹಿತ್ಯ 13 ವರ್ಷದಿಂದ ಪರಿಚಿತರು. ಎರಡು ವರ್ಷದಿಂದ ಪ್ರೀತಿಯಲ್ಲಿರೋದಾಗಿ ಯೋಗಿ ಹೇಳಿಕೊಂಡಿದ್ದಾರೆ. ಈ ವರ್ಷ ಯೋಗಿ ಅಣ್ಣ ಮಹೇಶ್'ನ ಮದುವೆ ನಡೆಯಲಿದೆ. ಅದರ ನಂತರವಷ್ಟೇ ಯೋಗಿ ಹಾಗೂ ಸಾಹಿತ್ಯ ಮದುವೆಯ ಡೇಟ್ ಫಿಕ್ಸ್ ಆಗಲಿದೆ. ಸಾಮಾನ್ಯವಾಗಿ ನಾಯಕರು ತಮ್ಮ ಲವ್ ಸ್ಟೋರಿಗಳನ್ನು ಎಲ್ಲೂ ಬಿಟ್ಟುಕೊಡಲ್ಲ.ಆದರೆ ಯೋಗಿ ಮದುವೆಗೆ ಮುಂಚೇನೆ ತಮ್ಮ ಲವ್ ಸ್ಟೋರಿನಾ ಓಪನ್ ಆಗಿ ಹೇಳಿಕೊಂಡಿರೋದು ವಿಶೇಷ.
