ಈಗಾಗಲೇ ಮುದ್ದಾದ ಹೆಣ್ಣು ಮಗುವಿನ ಪೋಷಕರಾದ ಬಾಲಿವುಡ್ ನಟ ಶಾಹೀದ್ ಕಪೂರ್ ಹಾಗೂ ಮೀರಾ ರಜಪೂತ್ ಇದೀಗ ಮತ್ತೊಂದು ಗಂಡು ಮಗುವಿನ ಪೋಷಕರಾಗಿದ್ದಾರೆ.
ಬಾಲಿವುಡ್ ನಟ ಶಾಹಿದ್ ಕಪೂರ್ ಪತ್ನಿ ಮೀರಾ ಕಪೂರ್ ಎರಡನೇ ಮಗುವಿನ ತಾಯಿಯಾಗಿದ್ದಾರೆ. ಇತ್ತೀಚೆಗೆ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದ ಮೀರಾ, ಶಿಕ್ಷಕರ ದಿನಾಚರಣೆಯಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.ಮುಂಬೈನ ಹಿಂದೂಜಾ ಆಸ್ಪತ್ರೆಯಲ್ಲಿ ಮೀರಾ ಗಂಡು ಮಗುವಿಗೆ ಜನ್ಮ ನೀಡಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸಾಮಾಜಿಕ ಜಾಲತಾಣದಲ್ಲಿ ಈ ದಂಪತಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ.
ಈ ದಂಪತಿಯ ಮೊದಲ ಮಗು ಮೀಶಾ ಈಗಾಗಲೇ ಇನ್‌ಸ್ಟಾಗ್ರಾಮ್‌ನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಪಡೆದಿದ್ದು, ಈ ಸಾಲಿಗಿನ್ನು ಈಕೆಯ ತಮ್ಮನೂ ಸೇರಿ ಕೊಳ್ತಾನಾ ನೋಡಬೇಕು. ಬಾಲಿವುಡ್‌ನಲ್ಲಿ ಕರೀನಾ ಹಾಗೂ ಸೈಫ್ ಆಲಿ ಖಾನ್ ಮಗನಾದ, ಹಾಲುಗೆನ್ನೆಯ ತೈಮೂರ್ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಸೃಷ್ಟಿಸಿದ್ದಾನೆ. ಈ ಸಾಲಿಗೆ ಶಾಹೀದ್ ಮಗನೂ ಸೇರ್ತಾನಾ ನೋಡಬೇಕು.
