ಮೂರು ವರ್ಷದ ನಂತರ ಬರುತ್ತಿದೆ ಚಿರು ಕಾರ್ 'ಸೀಝರ್ '

First Published 12, Jan 2018, 12:32 PM IST
Sesar Kannada Movie Coming soon
Highlights

ಲೇಟಾದ್ರೂ ಲೇಟೆಸ್ಟ್ ಆಗಿ ಬರ್ತಿದ್ದೇವೆ. ತಡವಾಯಿತು ಅಂತ ‘ಭಯವಿಲ್ಲ..!  - ಸೀಝರ್ ಚಿತ್ರದ ನಿರ್ಮಾಪಕ ತ್ರಿವಿಕ್ರಮ್ ಸಾಲ್ಯ ಅತ್ಯಂತ ವಿಶ್ವಾಸದಿಂದಲೇ ಈ ಮಾತು ಹೇಳಿದರು.

ಬೆಂಗಳೂರು (ಜ.12): ಲೇಟಾದ್ರೂ ಲೇಟೆಸ್ಟ್ ಆಗಿ ಬರ್ತಿದ್ದೇವೆ. ತಡವಾಯಿತು ಅಂತ ‘ಭಯವಿಲ್ಲ..!  - ಸೀಝರ್ ಚಿತ್ರದ ನಿರ್ಮಾಪಕ ತ್ರಿವಿಕ್ರಮ್ ಸಾಲ್ಯ ಅತ್ಯಂತ ವಿಶ್ವಾಸದಿಂದಲೇ ಈ ಮಾತು ಹೇಳಿದರು.

ಅವರು ಹಾಗೆ ಹೇಳುವುದಕ್ಕೂ ಕಾರಣವಿತ್ತು. ಯಾಕಂದ್ರೆ ‘ಸೀಝರ್ ’ ಸೆಟ್ಟೇರಿದ್ದು 2015 ರಲ್ಲಿ. ಇಲ್ಲಿಗೆ ಮೂರು ವರ್ಷ. ತೆರೆಗೆ ಬರುವುದಕ್ಕೆ ತಡವಾಗಿದೆ. ಮೂರು ವರ್ಷ ಅಂದ್ರೆ ಕಾಲದ ಬದಲಾವಣೆಯಲ್ಲಿ ಕತೆ, ಮೇಕಿಂಗ್, ಆ್ಯಕ್ಟಿಂಗ್ ಎಲ್ಲವೂ ಹಳತಾಗುವ ಸಾಧ್ಯತೆ ಹೆಚ್ಚು.ಹಾಗಂತ ನಿರ್ಮಾಪಕರಿಗೆ ‘ಭಯವಿಲ್ಲ. ಲೇಟಾದ್ರೂ ಲೇಟೆಸ್ಟ್ ಆಗಿ ಬರುತ್ತಿದ್ದೇವೆ ಎನ್ನುವ ವಿಶ್ವಾಸ ಅವರಿಗಿದೆ. ಅಂದ ಹಾಗೆ, ‘ಸೀಝರ್’ ಚಿರಂಜೀವಿ ಸರ್ಜಾ ಹಾಗೂ ಪಾರೂಲ್ ಯಾದವ್ ಅಭಿನಯದ ಚಿತ್ರ. ಜತೆಗೆ ಈ ಚಿತ್ರದ ಪ್ರಮುಖ ಆಕರ್ಷಣೆಯಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಪ್ರಕಾಶ್ ರೈ ಇದ್ದಾರೆ. ಆ ಮಟ್ಟಿಗೆ ಇದು ಮಲ್ಟಿಸ್ಟಾರ್ ಸಿನಿಮಾ. ಈಗ ಆಡಿಯೋ ಸಿಡಿ ಬಿಡುಗಡೆಯ ಮೂಲಕ ಅದು ಸದ್ದು ಮಾಡಿದೆ. ಆ ದಿನ ಆಡಿಯೋ ಸಿಡಿ ಬಿಡುಗಡೆಗೆ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಬಂದಿರಲಿಲ್ಲ. ಅವರು ಬಿಗ್‌ಬಾಸ್ ಮನೆಯಲ್ಲಿರುವ ಕಾರಣ, ಚಂದನ್ ಅಪ್ಪ, ಅಮ್ಮ ಅಲ್ಲಿಗೆ ಅತಿಥಿಗಳಾಗಿ ಬಂದಿದ್ದರು. ತಾವು ಸಂಗೀತ ನೀಡಿದ ಮೊದಲ ಚಿತ್ರದ ಆಡಿಯೋ ಸಮಾರಂಭವನ್ನು ಬಿಗ್‌'ಬಾಸ್ ಕಾರಣಕ್ಕೆ ಚಂದನ್ ಮಿಸ್ ಮಾಡಿಕೊಂಡರು. ನಟರಾದ ರವಿಚಂದ್ರನ್, ಪ್ರಕಾಶ್ ರೈ ಬಿಡಿ, ನಾಯಕಿ ಪಾರೂಲ್ ಯಾದವ್ ಕೂಡ ಅತ್ತ ತಲೆ ಹಾಕಲಿಲ್ಲ. ಈ ಚಿತ್ರದ ಶೀರ್ಷಿಕೆಯೇ ವಿಭಿನ್ನವಾಗಿದೆ. ಇದು ಕಾರ್ ಮಾಫಿಯಾದ ಕತೆ. ಬ್ಯಾಂಕ್ ಸಾಲದಲ್ಲಿ ಕಾರು ಖರೀದಿಸಿದವರು, ಸರಿಯಾದ ಸಮಯಕ್ಕೆ ಸಾಲ ಪಾವತಿಸದಿದ್ದರೆ, ಅವರ ಕಾರು ಸೀಝ್ ಮಾಡುವ ಒಂದು ಮಾಫಿಯಾವೇ ಬೆಂಗಳೂರಿನಲ್ಲಿದೆಯಂತೆ. ಅದರ ಸುತ್ತ ಹೆಣೆದ ಕತೆಯಿದು. ಕತೆಯಲ್ಲಿ ನಾಯಕ ನಟ ಚಿರಂಜೀವಿ ಸರ್ಜಾ, ಕಾರ್ ಸೀಝರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿರ್ದೇಶಕ ವಿನಯ ಕೃಷ್ಣ ಮಾತು ಶುರು ಮಾಡಿ ಇದೊಂದು ಹೊಸ ಬಗೆಯ ಚಿತ್ರ. ಸ್ನೇಹಿತನ ಸ್ವಂತ ಅನು‘ವಕ್ಕೆ ಕತೆಯ ರೂಪ ನೀಡಿ ತೆರೆಗೆ ತರಲು ಮುಂದಾದ ಸಂದ‘ರ್ದಲ್ಲಿ ನಿರ್ಮಾಪಕ ತ್ರಿವಿಕ್ರಮ್ ಸಿಕ್ಕರು. ಒಮ್ಮೆ ಕತೆ ಕೇಳಿದರು. ಚೆನ್ನಾಗಿದೆ ಸಿನಿಮಾ ಮಾಡೋಣ ಅಂದರು. ಆಗ ಶುರುವಾದ ಜರ್ನಿ ಇದು. ಬರವಣಿಗೆಯಲ್ಲಿ ಇದದ್ದು ದೃಶ್ಯ ರೂಪದಲ್ಲಿ ಬಂದಿದೆ. ತಾಂತ್ರಿಕವಾಗಿ ಸಾಕಷ್ಟು ಅಡ್ವಾನ್ಸ್ ಆದ ಚಿತ್ರವಿದು. ಪೋಸ್ಟ್ ಪ್ರೊಡಕ್ಷನ್ ಕೆಲಸವೇ ಒಂದು ವರ್ಷ ನಡೆದಿದೆ. ಎಲ್ಲರೂ ಯಾಕೆ ತಡವಾಯಿತು ಅಂತ ಕೇಳುತ್ತಾರೆ. ಅದಕ್ಕೆ ಕಾರಣವೇ ಪೋಸ್ಟ್ ಪ್ರೊಡಕ್ಷನ್ ಕೆಲಸ’ ಎಂದರು. ನಿರ್ಮಾಪಕ ತ್ರಿವಿಕ್ರಮ್ ಸಾಲ್ಯ ಮಾತನಾಡಿ ಚಿತ್ರ ನಿರ್ಮಾಪಕನಾಗಿ ಬಂದ ಕತೆ ಹೇಳಿದರು. ‘ಬ್ಯುಸಿನೆಸ್ ಕ್ಷೇತ್ರದಲ್ಲಿದ್ದ ನನಗೆ ಇದು ಸಿನಿಮಾದ ಮೊದಲ ಅನುಭವ. ಒಂದೊಳ್ಳೆ ಸಿನಿಮಾ ಮಾಡಬೇಕು ಅಂದುಕೊಂಡಾಗ ವಿನಯ್ ಕೃಷ್ಣ ಸಿಕ್ಕರು. ಇಂಟರೆಸ್ಟಿಂಗ್ ಕತೆ ಹೇಳಿದರು. ನನ್ನ ಮೊದಲ ಸಾಹಸಕ್ಕೆ ಕತೆ ಸೂಕ್ತ ಎನಿಸಿತು. ಅಲ್ಲಿಂದ ಸಿನಿಮಾ ನಿರ್ಮಾಣ ಶುರುವಾಯಿತು. ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಚೆನ್ನೆ‘ನಲ್ಲಿ ಗ್ರಾಫಿಕ್ಸ್ ಕೆಲಸಗಳು ನಡೆದಿವೆ. ತೆರೆಯಲ್ಲಿ ಅದ್ಭುತವಾಗಿ ಮೂಡಿಬಂದಿದೆ’ ಎಂದರು. ಚಿರಂಜೀವಿ ಸರ್ಜಾ ಚಿತ್ರದಲ್ಲಿನ ತಮ್ಮ ಪಾತ್ರದ ಜತೆಗೆ ನಟರಾದ ರವಿಚಂದ್ರನ್, ಪ್ರಕಾಶ್ ರೈ ಜತೆಗೆ ಅಭಿನಯಿಸಿದ ಅನು‘ವ ಹೇಳಿಕೊಂಡರು. ಅವಕಾಶ ಈ ಚಿತ್ರದ ಮೂಲಕ ಸಿಕ್ಕಿದೆ. ಅಂತಹ ದೊಡ್ಡ ನಟರ ಜತೆಗೆ ಅಭಿನಯಿಸುವಾಗ ಕಲಿಯುವುದಕ್ಕೂ ಅವಕಾಶ ಇರುತ್ತೆ. ಆ ನಿಟ್ಟಿನಲ್ಲಿ ಈ ಸಿನಿಮಾ ನನಗೆ ಸ್ಪೆಷಲ್  ಎಂದರು.

 

loader