ಗ್ಯಾಂಗ್ರಿನ್ ಆಗಿ ಜೀವಕ್ಕೆ ಅಪಾಯ ಇದ್ದುದರಿಂದ ತೊಡೆವರೆಗೂ ಕಾಲನ್ನ ಕತ್ತರಿಸಿದ್ದಾರೆ. ಡಾ. ರಾಜ್ ಕುಮಾರ್ ಅವರ ಚಿತ್ರಗಳಿಂದ ಹಿಡಿದು ಇತ್ತೀಚಿನವರೆಗೆ ಚಿತ್ರರಂಗದಲ್ಲಿರುವ ಸತ್ಯಜಿತ್, ಖಳನಾಯಕರಾಗಿ, ಪೋಷಕ ನಟರಾಗಿ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ.

ಬೆಂಗಳೂರು(ಅ.29): ಕನ್ನಡ ಚಿತ್ರರಂಗದ ಹಿರಿಯ ಕಲಾವಿದ. 650 ಚಿತ್ರಗಳಲ್ಲಿ ನಟಿಸಿರುವ ಸತ್ಯಜಿತ್ ಸಂಕಷ್ಟದಲ್ಲಿದ್ಧಾರೆ. ಸುಮಾರು 35 ವರ್ಷ ಬದುಕು ಚೆನ್ನಾಗಿಯೇ ಇತ್ತು. ಆದರೆ, ಕಳೆದ ಜೂನ್ ತಿಂಗಳಿಂದ ಈ ಕಲಾವಿದ ಕಷ್ಟ ಅನುಭವಿಸಿದ್ದಾರೆ.

ಗ್ಯಾಂಗ್ರಿನ್ ಆಗಿ ಜೀವಕ್ಕೆ ಅಪಾಯ ಇದ್ದುದರಿಂದ ತೊಡೆವರೆಗೂ ಕಾಲನ್ನ ಕತ್ತರಿಸಿದ್ದಾರೆ. ಡಾ. ರಾಜ್ ಕುಮಾರ್ ಅವರ ಚಿತ್ರಗಳಿಂದ ಹಿಡಿದು ಇತ್ತೀಚಿನವರೆಗೆ ಚಿತ್ರರಂಗದಲ್ಲಿರುವ ಸತ್ಯಜಿತ್, ಖಳನಾಯಕರಾಗಿ, ಪೋಷಕ ನಟರಾಗಿ ಕನ್ನಡಿಗರಿಗೆ ಚಿರಪರಿಚಿತರಾಗಿದ್ದಾರೆ.

ಮೂಲತಃ ಹುಬ್ಬಳ್ಳಿಯವರಾದ ಸತ್ಯಜಿತ್, ಕಾಲು ಕಳೆದುಕೊಂಡ ಬಳಿಕ ಸುವರ್ಣ ನ್ಯೂಸ್ ಜೊತೆ ನೋವು ಹಂಚಿಕೊಂಡಿದ್ದಾರೆ. ಆದರೆ, ಯಾರ ಬಳಿಯೂ ಕೈಚಾಚಲೊಪ್ಪದ ಅವರು, ಕಷ್ಟದಲ್ಲಿರುವ ಕಲಾವಿದರಿಗೆ ಪರಿಹಾರ ಕೊಡಿ ಅಂತ ಸಿ.ಎಂ.ಸಿದ್ಧರಾಮಯ್ಯನವರನ್ನ ಕೇಳುತ್ತಿದ್ದಾರೆ. ಚಿಕಿತ್ಸೆ ಮುಗಿದಿದ್ರೂ ಕೃತಕ ಕಾಲು ಅಳವಡಿಸಲು ಸತ್ಯಜಿತ್`ಗೆ ಹಣದ ಅವಶ್ಯಕತೆ ಇದೆ.