ಮನಸ್ಸು ಕೊಟ್ಟ ಸೀತೆಗೆ ಮಾತು ಕೊಟ್ಟ ವಲ್ಲಭ...

Seetha Vallabha new serial to set in Colours Kannada
Highlights

ಇನ್ನೂ ಪ್ರೀತಿ-ಪ್ರೇಮಗಳು ಹುಟ್ಟದ ಸಮಯ. ಆದರೆ ಅವನಿಗೋ ಅವಳ ಮೇಲೆ ಏನೋ ಆಕರ್ಷಣೆ. ಅವಳಿಗೂ.. ಅದರಲ್ಲಿ ಯಾವುದೇ ಕುಹಕಗಳಿಲ್ಲ. ಎಲ್ಲವೂ ನಿಷ್ಕಲ್ಮಶ. ತಮ್ಮದೇ ದಾರಿ ಹುಡುಕಿಕೊಂಡು ಹೊರಟ ಈ ಎರಡು ಮುಗ್ಧ ಜೀವಗಳು ಎಷ್ಟೋ ವರ್ಷಗಳ ನಂತರ ಸೇರಿದರೆ? ಸೇರ್ತಾರಾ? ಬಾಲ್ಯದ ಭಾವನೆಗಳು ವರ್ಷಗಳ ನಂತರವೂ ಇರುತ್ತಾ?

ಇಂಥ ವಿಶೇಷ ಕಥಾ ಹಂದರವುಳ್ಳ 'ಸೀತಾ ವಲ್ಲಭ' ಜು.18ರಿಂದ ಕಲರ್ಸ್ ಕನ್ನಡದಲ್ಲಿ ರಾತ್ರಿ 10ಕ್ಕೆ ಪ್ರಸಾರವಾಗಲಿದೆ.

ಹೊಸ ಮುಖ ಮತ್ತು ಕಥೆಯೊಂದಿಗೆ ಬರುವ ಸಿರಿಯಲ್‌ಗಳು ತನ್ನ ವಿಭಿನ್ನತೆಯಿಂದ ಈಗಾಗಲೇ ಜನರ ಮನಗೆದ್ದಿವೆ.  ಸಂಜೆ ಎಂದರೆ ಮನೆ ಕೆಲಸದ ನಡುವೆ ಸಮಯ ಮಾಡಿಕೊಂಡು ಟಿವಿ ಮುಂದೆ ಕೂರುವಂತೆ ಮಾಡುತ್ತವೆ ಈ ಸಿರಿಯಲ್‌ಗಳು.

'ರಾಧ ರಮಣ', 'ಅಗ್ನಿಸಾಕ್ಷಿ' , 'ಪದ್ಮಾವತಿ', 'ಶನಿ'.... ಹೇಗೆ ಹಲವಾರು ಸೀರಿಯಲ್‌ನಿಂದ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿವೆ. ಇದೀಗ ಇದೇ ಹಾದಿಯಲ್ಲಿ 'ಸೀತಾ ವಲ್ಲಭ' ಎಂಬ ವಿಭಿನ್ನ ಕಥೆಯುಳ್ಳ, ನವ ನಟರು ನಟಿಸಿರುವ ಧಾರಾವಾಹಿಯೊಂದು ನಿಮ್ಮನ್ನು ರಂಜಿಸಿಲಿವೆ.

ಈ ಮಧುರ ಪ್ರೀತಿಯನ್ನು ಮೈಸೂರು ಮಂಜು ನಿರ್ದೇಶಿಸಿದರೆ, ಕಿರುತೆರೆಯ ಕಥೆಯೊಂದಕ್ಕೆ ಸೋನು ನಿಗಮ್ ಟೈಟಲ್ ಸಾಂಗ್ ಹಾಡಿರುವುದು ಮತ್ತೊಂದು ವಿಶೇಷ. ಈ ಹಾಡು ಈಗಾಗಲೇ ಜನರ ಮನ ಗೆದ್ದಿದೆ.  ಆಕರ್ಷ್ ಮತ್ತು ಸುಪ್ರೀತಾ ಈ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಕಾಣಿಸುತ್ತಾರೆ.

ಅಚ್ಚು ಹಾಗು ಗುಬ್ಬಿಯ ಪ್ರೀತಿಯನ್ನು ವಿಧಿ ಹೇಗೆ ಕರೆದೊಯ್ಯುತ್ತದೆ ಎಂಬುವುದೇ ಈ ಕಥೆಯ ತಿರುಳು.

 

loader