ಅಕ್ಟೋಬರ್ 15ರಿಂದ ಆರಂಭಗೊಳ್ಳಲಿರುವ ಬಿಗ್'ಬಾಸ್ 5ನೇ ಸೀಜನ್ ಮೂಲಕ ಮತ್ತೆ ಬಿಗ್ ಬಾಸ್ ಆಗಿ ಎಲ್ಲರ ಮನೆಯಂಗಳಕ್ಕೆ ಬರಲು ಸುದೀಪ್ ಸಜ್ಜಾಗಿದ್ದಾರೆ. ಇದಕ್ಕೆ ತಯಾರಿಯಾಗಿ ಈಗಾಗಲೇ ಒಂದು ಪ್ರೋಮೋ ರಿಲೀಸ್ ಆಗಿದ್ದು, ಇದೀಗ ಅದರ ಬೆನ್ನಲ್ಲೇ ಮತ್ತೊಂದು ಪ್ರೋಮೋ ರಿಲೀಸ್ ಆಗಿದೆ.

ಬೆಂಗಳೂರು(ಸೆ.14): ಅಕ್ಟೋಬರ್ 15ರಿಂದ ಆರಂಭಗೊಳ್ಳಲಿರುವ ಬಿಗ್'ಬಾಸ್ 5ನೇ ಸೀಜನ್ ಮೂಲಕ ಮತ್ತೆ ಬಿಗ್ ಬಾಸ್ ಆಗಿ ಎಲ್ಲರ ಮನೆಯಂಗಳಕ್ಕೆ ಬರಲು ಸುದೀಪ್ ಸಜ್ಜಾಗಿದ್ದಾರೆ. ಇದಕ್ಕೆ ತಯಾರಿಯಾಗಿ ಈಗಾಗಲೇ ಒಂದು ಪ್ರೋಮೋ ರಿಲೀಸ್ ಆಗಿದ್ದು, ಇದೀಗ ಅದರ ಬೆನ್ನಲ್ಲೇ ಮತ್ತೊಂದು ಪ್ರೋಮೋ ರಿಲೀಸ್ ಆಗಿದೆ.

Add Asianetnews Kannada as a Preferred SourcegooglePreferred

ಕಿಚ್ಚ ಸುದೀಪ್ ಈ ಪ್ರೋಮೋದಲ್ಲಿ ಮತ್ತೊಮ್ಮೆ ಸ್ಟೈಲಿಷ್ ಹಾಗೂ ಡಿಫ್ರೆಂಟ್ ಆಗಿ ಕಂಡು ಬಂದಿದ್ದಾರೆ. ಅಲ್ಲದೇ ಈ ಬಾರಿ ಬಿಗ್ ಬಾಸ್'ನಲ್ಲಿ ವಾರ ವಾರ ಹಬ್ಬದೂಟ ಎಂಬ ಡೈಲಾಗ್ ಹೇಳುವ ಮೂಲಕ ಈ ಬಾರಿಯ ಬಿಗ್ ಬಾಸ್'ನಲ್ಲಿ ಹೊಸತೇನೋ ಇರಲಿದೆ ಬುವುದನ್ನು ಸ್ಪಷ್ಟಪಡಿಸಿದ್ದಾರೆ.

ಸದ್ಯಕ್ಕೆ ಬಿಗ್ ಬಾಸ್ ಸೀಸನ್ 5ನೇ ಆವೃತ್ತಿಯ ಈ ಪ್ರೋಮೋ ಸೋಷಿಯಲ್ ಮೀಡಿಯಾದಲ್ಲಿ ಗಮನ ಸೆಳೆಯುತ್ತಿದ್ದು ಅಕ್ಟೋಬರ್ 15ರಿಂದಲೇ ಶೋ ಆರಂಭಗೊಳ್ಳಲಿದೆ ಎಂಬ ಸಿಹಿಸುದ್ದಿಯನ್ನು ಪ್ರೇಕ್ಷಕರಿಗೆ ಹೊತ್ತು ತಂದಿದೆ.