ಕೊನೆಗೂ ಡಬ್ಬಿಂಗ್ ಸಿನಿಮಾ ಸತ್ಯದೇವ್ ಐಪಿಎಸ್ ಚಿತ್ರ ರಿಲೀಸ್ ಆಗದೆ ಪ್ಲಾಪ್ ಆಗಿದೆ. ರಾಜ್ಯಾದ್ಯಂತ 60ಕ್ಕೂ ಹೆಚ್ಚು  ಚಿತ್ರಮಂದಿರಗಳಲ್ಲಿ  ತೆರೆ ಕಾಣುತ್ತೆ ಎಂದು ನಿರ್ಮಾಪಕರು ಹೇಳಿದ್ದರು. ಆದರೆ ಬೆಂಗಳೂರಿನಲ್ಲಿ  ಸಿನಿಮಾ ಬಿಡುಗಡೆ ಕಂಡಿಲ್ಲ. ನಗರದ ನಟರಾಜ, ಸಂಪಿಗೆ ಚಿತ್ರಮಂದಿರದಲ್ಲಿ ರಿಲೀಸ್ ಅಗಬೇಕಿತ್ತು. ಆದರೆ ಪ್ರತಿಭಟನೆ ಆಗುತ್ತದೆ ಎಂಬ ಕಾರಣಕ್ಕೆ ಸಿನಿಮಾ ರಿಲೀಸ್ ಮಾಡದಿರಲು ನಿರ್ಧರಿಸಲಾಗಿದೆ.

ಬೆಂಗಳೂರು(ಮಾ.03): ಕೊನೆಗೂ ಡಬ್ಬಿಂಗ್ ಸಿನಿಮಾ ಸತ್ಯದೇವ್ ಐಪಿಎಸ್ ಚಿತ್ರ ರಿಲೀಸ್ ಆಗದೆ ಪ್ಲಾಪ್ ಆಗಿದೆ. ರಾಜ್ಯಾದ್ಯಂತ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತೆ ಎಂದು ನಿರ್ಮಾಪಕರು ಹೇಳಿದ್ದರು. ಆದರೆ ಬೆಂಗಳೂರಿನಲ್ಲಿ ಸಿನಿಮಾ ಬಿಡುಗಡೆ ಕಂಡಿಲ್ಲ. ನಗರದ ನಟರಾಜ, ಸಂಪಿಗೆ ಚಿತ್ರಮಂದಿರದಲ್ಲಿ ರಿಲೀಸ್ ಅಗಬೇಕಿತ್ತು. ಆದರೆ ಪ್ರತಿಭಟನೆ ಆಗುತ್ತದೆ ಎಂಬ ಕಾರಣಕ್ಕೆ ಸಿನಿಮಾ ರಿಲೀಸ್ ಮಾಡದಿರಲು ನಿರ್ಧರಿಸಲಾಗಿದೆ.

ಇನ್ನೂ ಹುಬ್ಬಳ್ಳಿ ಯ ಸ್ಟೇಷನ್ ರಸ್ತೆಯಲ್ಲಿರುವ ರೂಪಂ ಚಿತ್ರಮಂದಿರದಲ್ಲಿ ಡಬ್ಬಿಂಗ್​​ ಚಿತ್ರ ರಿಲೀಸ್​ ಮಾಡಲು ನಿರ್ಧರಿಸಲಾಗಿತ್ತು. ಆದ್ರೆ ಯಾವೊಬ್ಬ ಪ್ರೇಕ್ಷಕ ಚಿತಕ್ರಮಂಂದಿರ ಬಳಿ ಸುಳಿದಿಲ್ಲ. ಟಾಕೀಸ್ ಸುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿತ್ತು. ಆದ್ರೆ ಕೊನೆಗೆ ಹೋರಾಟಗಾರರಿಗೆ ಮಣಿದ ಥಿಯೇಟರ್ ಮಾಲೀಕ ಸತ್ಯದೇವ್ ಐಪಿಎಸ್ ಬದಲು ಕನ್ನಡ ಚಿತ್ರ ಪ್ರದರ್ಶನ ಮಾಡಿದ್ದಾರೆ.