ಉದಯ್‌ ಕೆ ಮೆಹ್ತಾ ನಿರ್ಮಾಣದ ಈ ಚಿತ್ರದ ಮುಹೂರ್ತಕ್ಕೆ ಚಾಲನೆ ನೀಡಿದ್ದು ಧ್ರುವ ಸರ್ಜಾ. ಹಳ್ಳಿ ಮತ್ತು ನಗರ ಪ್ರದೇಶದ ಹಿನ್ನೆಲೆಯಲ್ಲಿ ಕತೆ ಸಾಗಲಿದೆ. ಈಗ ಈ ತಂಡಕ್ಕೆ ಹೊಸದಾಗಿ ದತ್ತಣ್ಣ ಸೇರಿಕೊಂಡಿದ್ದಾರೆ. ರೊಮ್ಯಾಂಟಿಕ್‌ ಕಂ ಕಾಮಿಡಿ ಚಿತ್ರ ಇದಾಗಿದ್ದು, ಸತೀಶ್‌ ಅವರಿಗೆ ಈ ಚಿತ್ರದಲ್ಲಿ ವಿಶೇಷವಾದ ಪಾತ್ರವಿದೆಯಂತೆ.

ಇನ್ನೂ ನಟಿ ಅದಿತಿ ಪ್ರಭುದೇವ ಅವರು ಗ್ರಂಥಪಾಲಕಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಪಾತ್ರಗಳ ಸಂಯೋಜನೆಯೇ ಭಿನ್ನವಾಗಿರುವುದರಿಂದ ಸಿನಿಮಾ ಕೂಡ ವಿಭಿನ್ನವಾಗಿ ಮೂಡಿಬರಲಿದೆ ಎಂಬುದು ಚಿತ್ರತಂಡದ ಮಾತು. ಈಗ ಮುಹೂರ್ತ ಮಾಡಿಕೊಂಡಿದ್ದು, ಇನ್ನೇನು ಚಿತ್ರತಂಡ ಚಿತ್ರೀಕರಣಕ್ಕೆ ಹೊರಡುತ್ತಿದೆ.

ಬಜಾರ್ ಹುಡುಗಿಗೆ ಸಿಕ್ತು ‘ಬ್ರಹ್ಮಚಾರಿ’ಗಳಿಂದ ಸಾಥ್!