Asianet Suvarna News Asianet Suvarna News

ರಸ್ತೆ ಆಪಘಾತದಲ್ಲಿ ಬಾಲ ನಟ ಸಾವು!

ಹಿಂದಿ ಚಿತ್ರ ಹಾಗೂ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದ 14 ವರ್ಷದ ಬಾಲ್ಯ ನಟ ಶಿವಲೇಖ್ ಸಿಂಗ್ ರಸ್ತೆ ಆಪಘಾವೊಂದರಲ್ಲಿ ನಿಧನರಾಗಿದ್ದಾರೆ.

Sankatmochan Hanuman fame child actor  Shivlekh Singh passes away in Road accident
Author
Bangalore, First Published Jul 19, 2019, 2:10 PM IST
  • Facebook
  • Twitter
  • Whatsapp

ರಾಯಪುರ (ಜೂ.19):  ಅಯ್ಯೋ ವಿಧಿಯೇ, ಈ ಸಾವು ನ್ಯಾಯವೇ?

ಹಿಂದಿ ಧಾರಾವಾಹಿಗಳಲ್ಲಿ ತನ್ನ ಮುಗ್ಧ ನಟನೆಯಿಂದ ಅಪಾರ ಅಭಿಮಾನಿಗಳನ್ನು ಹೊಂದಿದ್ದ 14 ವರ್ಷದ ಬಾಲ್ಯ ನಟ ಶಿವಲೇಖ್ ಸಿಂಗ್ ಅಪಘಾತವೊಂದರಲ್ಲಿ ಕೊನೆಯುಸಿರೆಳೆದಿದ್ದಾರೆ.

 

'ಬಾಲ್‌ವೀರ್' ಖ್ಯಾತಿಯ ಶಿವಲೇಖ್, ಮಾಧ್ಯಮವೊಂದಕ್ಕೆ ಸಂದರ್ಶನ ನೀಡಲು ಪೋಷಕರೊಂದಿಗೆ ಬಿಲಾಸ್‌ಪುರದಿಂದ ರಾಯ್ಪುರಕ್ಕೆ ತೆರಳುತ್ತಿದ್ದರು. ರಾಯಪುರಕ್ಕೆ ಹೋಗುತ್ತಿದ್ದಾಗ ನಿಯಂತ್ರಣ ತಪ್ಪಿದ ಲಾರಿಯೊಂದು ಇವರು ಪ್ರಯಾಣಿಸುತ್ತಿದ್ದ ಕಾರಿ ಡಿಕ್ಕಿ ಹೊಡೆದು, ಈ ಅವಘಡ ಸಂಭವಿಸಿದೆ. ಘಟನೆಯಲ್ಲಿ ಶಿವಲೇಖ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದು, ತಾಯಿ ಲೇಖ್ನಾ, ತಂದೆ ಶೀವೇಂದ್ರ ಸಿಂಗ್ ಹಾಗೂ ಮತ್ತೊಬ್ಬರು ನವೀನ್ ಸಿಂಗ್‌ ಎಂಬುವವರಿಗೆ ಗಂಭೀರ ಗಾಯಗಳಾಗಿವೆ.

ಛತ್ತೀಸ್‌ಘಡ ಮೂಲದ ಶೀವೇಂದ್ರ ಸಿಂಗ್ ಶೂಟಿಂಗ್‌ಗಾಗಿಯೇ ಮುಂಬೈನಲ್ಲಿ ವಾಸವಿದ್ದರು. ಬಾಲ್ ವೀರ್, ಸಸುರಾಲ್ ಸಿಮರ್ ಕಾ ಹಾಗೂ ಸಂಕಟಮೋಚಕ ಹನುಮಾನ್ ಧಾರಾವಾಹಿಗಳಲ್ಲದೇ, ಹಲವು ರಿಯಾಲಿಟಿ ಶೋಗಳಲ್ಲಿಯೂ ಪಾಲ್ಗೊಂಡು ತಮ್ಮ ಪ್ರತಿಭೆ ಪ್ರದರ್ಶಿಸಿದ್ದರು. ಮಕ್ಕಳಿಗೆ ಅಚ್ಚುಮೆಚ್ಚಿನ ನಟನಾಗಿದ್ದರು.

Follow Us:
Download App:
  • android
  • ios