ಮುಂಬೈ: ಬಾಲಿವುಡ್‌ ನಟ ಸಂಜಯ್‌ ದತ್‌ ಅವರ ಜೀವನಾಧಾರಿತ ಚಿತ್ರ ರಣಬೀರ್‌ ಕಪೂರ್‌ ಅವರ ಅಭಿನಯದ ಸಂಜು ಚಿತ್ರ ಬಿಡುಗಡೆಯ ಮೊದಲ ದಿನವೇ 34.75 ಕೋಟಿ ರು. ಸಂಪಾದನೆ ಮಾಡಿದೆ. ರಾಜಕುಮಾರ್‌ ಹಿರಾನಿ ಅವರ ನಿರ್ದೇಶನದ ಈ ಚಿತ್ರವು 2018ನೇ ಸಾಲಿನಲ್ಲಿ ಅತಿಹೆಚ್ಚು ಆದಾಯ ಗಳಿಕೆಯ ಚಿತ್ರವಾಗುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. 

ಈ ಬಗ್ಗೆ ಶನಿವಾರ ಟ್ವೀಟ್‌ ಮಾಡಿರುವ ಟ್ರೇಡ್‌ ವಿಶ್ಲೇಷಕ ತರಣ್‌ ಆದಶ್‌ರ್‍, ಯಾವುದೇ ರಜೆ ದಿನವಲ್ಲವಾದರೂ, ಯಾವುದೇ ಹಬ್ಬ ಹರಿದಿನವೂ ಅಲ್ಲ. ಆದಾಗ್ಯೂ, ಸಂಜು ಚಿತ್ರವು ಒಂದೇ ದಿನಕ್ಕೆ 34.75 ಕೋಟಿ ರು. ಬಾಕ್ಸ್‌ ಆಫೀಸ್‌ ಕೊಳ್ಳೆ ಹೊಡೆದಿದೆ. ಮೂರು ದಿನಗಳಲ್ಲಿ 100 ಕೋಟಿ ರು. ಆದಾಯ ತರುವ ಚಿತ್ರ ಇದಾಗಬಹುದಾಗಿದೆ, ಎಂದು ಅಭಿಪ್ರಾಯಪಟ್ಟಿದ್ದಾರೆ.