ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ನಟಿ ಸಂಜನಾ : ಆಕೆಯ ಪ್ರಿಯತಮನ ಬಗ್ಗೆ ಒಂದಿಷ್ಟು ವಿವರ

First Published 7, Dec 2017, 4:18 PM IST
Sanjana Chidanand Gossip News
Highlights

ಕೋಲ್ಕತ್ತಾ ಮೂಲದವರಾದ ಇವರು ಸ್ಟಾರ್ ಸುವರ್ಣದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂಜಿನಿಯರಿಂಗ್ ಓದಿರುವ ಗೌರವ್ ಕಲ್ಕತ್ತಾ ಮೂಲದವರು.

ನಟಿ ಸಂಜನಾ ಚಿದಾನಂದ್ ಅವರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಸಿನಿಮಾ ಜೊತೆಗೆ ಕನ್ನಡ ರಿಯಾಲಿಟಿ ಶೋ ಬಿಗ್ ಬಾಸ್'ನಲ್ಲಿಯೂ ಸ್ಪರ್ಧಿಯಾಗಿ ಖ್ಯಾತಿಗಳಿಸಿದ್ದರು.

ಸಂಜನಾ ವಿವಾಹವಾಗುತ್ತಿರುವ ಹುಡುಗನ ಹೆಸರು ಗೌರವ್ ರಾಯ್. ಎಂಜಿನಿಯರಿಂಗ್ ಪದವೀಧರ. ಕೋಲ್ಕತ್ತಾ ಮೂಲದವರಾದ ಇವರು ಸ್ಟಾರ್ ಸುವರ್ಣದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂಜಿನಿಯರಿಂಗ್ ಓದಿರುವ ಗೌರವ್ ಕಲ್ಕತ್ತಾ ಮೂಲದವರು.

ಸಂಜನಾ ಮೂರು ವರ್ಷದ ಹಿಂದೆ ಗೌರವ್ ಅವರನ್ನು ಸ್ಟಾರ್ ಸುವರ್ಣ ವಾಹಿನಿಯ ಕಾರ್ಯಕ್ರಮದಲ್ಲಿ ಭೇಟಿ ಮಾಡಿದ್ದರು. ಬಿಗ್ ಬಾಸ್ ಶೋ ಹೋಗುವ ಮುಂಚೆಯೇ ಸ್ನೇಹತನದಿಂದ ಇವರಿಬ್ಬರಿಗೂ ಪ್ರೇಮಾಂಕುರವಾಗಿತ್ತು. ಮುಂದಿನ ವರ್ಷ ಇಬ್ಬರಿಗೂ ನಿಶ್ಚಿತಾರ್ಥ ನಡೆಯಲಿದ್ದು, 2019ರಲ್ಲಿ ವಿವಾಹವಾಗಲಿದ್ದಾರೆ.