ಅನಿಲ್ ಮಂಡ್ಯ ನಿರ್ದೇಶಿಸುತ್ತಿರುವ, ಚಿರಂಜೀವಿ ಸರ್ಜಾ ನಾಯಕನಾಗಿ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ ಟೈಟಲ್ ಫಿಕ್ಸ್ ಆಗಿದೆ. ಚಿತ್ರದ ಹೆಸರು ‘ಕ್ಷತ್ರಿಯ’. ಈ ಚಿತ್ರಕ್ಕೆ ‘ಕೆಮಿಸ್ಟ್ರಿ ಆಫ್ ಕರಿಯಪ್ಪ’ ಚಿತ್ರ ಖ್ಯಾತಿಯ ಸಂಜನಾ ಆನಂದ್ ನಾಯಕಿ.

ಈ ಚಿತ್ರಕ್ಕೆ ಇಂದು(ಮೇ 29) ಮುಹೂರ್ತ ಫಿಕ್ಸ್ ಆಗಿದೆ. ನಿರ್ದೇಶಕ ಅನಿಲ್ ಮಂಡ್ಯ ಕತೆ, ಚಿತ್ರಕತೆ ಬರೆದಿದ್ದಾರೆ. ಚಿರು ಮ್ಯಾನರಿಸಂಗೆ ತಕ್ಕಂತೆ ಇದು ಪಕ್ಕಾ ಆ್ಯಕ್ಷನ್ ಸಿನಿಮಾ. ಚಿರುಗೆ ಮದುವೆ ನಂತರ ಅದೃಷ್ಟ ಖುಲಾಯಿಸಿದೆ.

ಸಾಲು ಸಾಲು ಸಿನಿಮಾಗಳು ಅವರ ಕೈಸೇರುತ್ತಿವೆ. ‘ಸಿಂಗಂ’, ‘ಜುಗಾರಿ ಕ್ರಾಸ್’ ಸಿನಿಮಾಗಳ ಜತೆಗೆ ಶಿವತೇಜಸ್ ನಿರ್ದೇಶನದ ಹೊಸ ಸಿನಿಮಾ ಸೇರಿ ಈಗಾಗಲೇ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.