ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ತಮ್ಮ ಮುದ್ದು ಮಗಳಿಗೆ ಟಾಯ್ಸ್ ಶಾಪಿಂಗ್ ಹೋಗಿದ್ದನ್ನು ರಾಧಿಕಾ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬಹಳ ವರ್ಷಗಳ ನಂತರ ಶಾಪಿಂಗ್ ಮಾಡಿದ್ದು, ಅದೂ ಪತಿ ಯಶ್ ಒಟ್ಟಿಗೆ, ಮಗಳಿಗಾಗಿ...

ಅಪ್ಪ-ಅಮ್ಮಂಗೇ ಫ್ಯಾನ್ ಫಾಲೋಯರ್ಸ್ ಪಟ್ಟಿಯಲ್ಲಿ ಕಾಂಪಿಟೇಷನ್ ಕೊಡೋ ಮಟ್ಟಕ್ಕೆ ಫೇಮಸ್ ಆಗುತ್ತಿರುವ ಸ್ಯಾಂಡಲ್‌ವುಡ್ ಮಿನಿ ಸಿಂಡ್ರೆಲಾ ಐರಾ ಯಶ್ ಫೋಟೋಸ್ ಹಾಗೂ ವಿಡಿಯೋ ನೋಡಲು ಜನರು ಕಾತುರದಿಂದ ಕಾಯುತ್ತಿರುತ್ತಾರೆ.

ಕೆಜಿಎಫ್ ಚಿತ್ರದಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಇರುವ ರಾಕಿ ಬಾಯ್ ಸಮಯ ಮಾಡಿಕೊಂಡು ಮಗಳಿಗಾಗಿ ಕಾಲ ಕಳೆಯುತ್ತಾರೆ. ಬಹಳ ವರ್ಷಗಳಾದರೂ ತಮಗಾಗಿ ಶಾಪಿಂಗ್ ಮಾಡ ಈ ಜೋಡಿ, ಮಗಳಿಗಾಗಿ ಬೊಂಬೆ ಕೊಳ್ಳಲು ತೆರಳಿದ್ದರು. ಶಾಪಿಂಗ್ ಮಾಲ್‌ನಲ್ಲಿ ಕಳೆದ ಕ್ಷಣಗಳನ್ನು ಅದ್ಭುತವೆಂದು ಅವರು ವರ್ಣಿಸಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋವನ್ನು ರಾಧಿಕಾ ಶೇರ್ ಮಾಡಿಕೊಂಡಿದ್ದಾರೆ.

‘ನಮಗಂಥ ಶಾಪಿಂಗ್ ಮಾಡಿ ವರ್ಷಗಳೇ ಆದವು. ಆದ್ರೆ ಐರಾಗೆ ಆಟದ ಸಾಮಾನು ತರಲು ಮಾಲ್‌ಗೆ ಬಂದಿದ್ದೀವಿ. ಜೀವನ ಹೇಗೆ ಬದಲಾಗುತ್ತೆ ಅಲ್ವಾ? ಟಾಯ್ ಶಾಪಿನಲ್ಲಿ ಕಳೆದ ಸಮಯ ನಮಗೆ ಖುಷಿ ತಂದಿದೆ...’ ಎಂದು ಬರೆದುಕೊಂಡಿದ್ದಾರೆ.

View post on Instagram

ಕೆಲವು ದಿನಗಳ ಹಿಂದೆ ಯಶ್ ಮಗಳೊಂದಿಗೆ ಆಟವಾಡುವಾಗ ಅಭಿಮಾನಿಗಳಿಗೆ ಹಾಯ್ ಹೇಳಿಸಿರುವ ವಿಡಿಯೋ ವೈರಲ್ ಆಗಿತ್ತು. ಮತ್ತೊಂದು ಹೊಸ ಅತಿಥಯ ಆಗಮನಕ್ಕೆ ಈ ಜೋಡಿ ಕಾತುರದಿಂದ ಕಾಯುತ್ತಿದೆ.

ಐರಾಳ ತೊದಲು ಮಾತು! ‘ಹಾಯ್’ ಹೇಳಿಸಿದ ರಾಕಿಂಗ್ ಸ್ಟಾರ್