ಬೆಂಗಳೂರು (ಫೆ. 12): ಅಗ್ನಿಸಾಕ್ಷಿ ಖ್ಯಾತಿಯ ನಟ ವಿಜಯ್ ಸೂರ್ಯ ಕಿರುತೆರೆ ಮಾತ್ರವಲ್ಲ, ಸಿನಿಮಾ ರಂಗದಲ್ಲೂ ಮಿಂಚುತ್ತಿದ್ದಾರೆ. ಇವರು ನಟಿಸಿರುವ ’ಕದ್ದು ಮುಚ್ಚಿ ’ ಸಿನಿಮಾ ಇದೇ ತಿಂಗಳ 22 ರಂದು ತೆರೆ ಕಾಣಲಿದೆ. 

ಏನೇ ಮಾಡಿದ್ರು ಕದ್ದು ಮುಚ್ಚಿ ಮಾಡೋದ್ರಲ್ಲಿ ಒಂಥರಾ ಸುಖ ಇದೆ ಇದೆ ಅನ್ನೋದನ್ನು ಕೇಳಿರುತ್ತೇವೆ. ಶಾಲಾ-ಕಾಲೇಜು ದಿನಗಳಲ್ಲಿ ಪ್ರತಿಯೊಬ್ಬರಿಗೂ ಇದರ ಅನುಭವ ಆಗಿರುತ್ತದೆ. ಇಂತದ್ದೊಂದು ಅನುಭವಗಳ ಜೊತೆ ವಿಭಿನ್ನವಾದ ಕಥೆಯನ್ನು ಇಟ್ಟುಕೊಂಡು ಹೊಸಬರ ತಂಡ ’ಕದ್ದುಮುಚ್ಚಿ’ ಸಿನಿಮಾವನ್ನು ಮಾಡಿದೆ. 

ನಾಯಕನಾಗಿ ವಿಜಯ್ ಸೂರ್ಯ ಕಾಣಿಸಿಕೊಂಡರೆ ನಾಯಕಿಯಾಗಿ ಮೇಘಶ್ರೀ ಕಾಣಿಸಿಕೊಂಡಿದ್ದಾರೆ. ವಸಂತ್ ರಾಜ್ ಚಿತ್ರಕಥೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಇದೊಂದು ಫ್ಯಾಮಿಲಿ ಓರಿಯೆಂಟೆಡ್ ಕಥೆಯಾಗಿದ್ದು ನಾಯಕಿ ಮೇಘಶ್ರೀ ಕ್ಯೂಟ್ , ಇನೋಸೆಂಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ.  

’ಕದ್ದು ಮುಚ್ಚಿ’ ಚಿತ್ರದ ಟ್ರೇಲರ್ ಇಲ್ಲಿದೆ ನೋಡಿ.