ಪ್ರೇಕ್ಷಕನ ಕಣ್ಣಲ್ಲಿ ಕಂಡಂತೆ ‘ಪೈಲ್ವಾನ್’!

ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾಗೆ ಪ್ರೇಕ್ಷಕರಿಂದ ಉತ್ತಮ ರೆಸ್ಪಾನ್ಸ್ | ಬಾಕ್ಸಾಫೀಸ್ ನಲ್ಲಿ ನಾಗಾಲೋಟದಿಂದ ಮುನ್ನುಗ್ಗುತ್ತಿದೆ | ಪ್ರೇಕ್ಷಕ ಕಂಡಂತೆ ಸಿನಿಮಾ ಹೇಗನಿಸುತ್ತದೆ ಇಲ್ಲಿದೆ ರಿವ್ಯೂ 

Sandalwood Kiccha sudeep Pailwan movie review aspect of Viewer

ಕಿಚ್ಚ ಸುದೀಪ್ ಪೈಲ್ವಾನ್ ಸಿನಿಮಾ ರಿಲೀಸ್ ಗೂ ಮುನ್ನ ನಿರೀಕ್ಷೆ ಹುಟ್ಟಿಸಿರುವಂತೆ ರಿಲೀಸ್ ಆದ ಮೇಲೆ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಚಿತ್ರ ನೋಡಿದ ಪ್ರತಿಯೊಬ್ಬ ಪ್ರೇಕ್ಷಕನೂ ಥಿಯೇಟರ್ ನಿಂದ ಖುಷಿಯಿಂದ ಹೊರ ಬರುತ್ತಿದ್ದಾನೆ. ಇದು ಸಿನಿಮಾ ಕಂಡಿರುವ ಯಶಸ್ಸು ಅಂತಾನೇ ಹೇಳಬಹುದು.   

ಪೈಲ್ವಾನ್ ತಂದೆ- ಮಗಳ ನಡುವಿನ ಸೆಂಟಿಮೆಂಟ್ ಸಿನಿಮಾ. ಮನೆಮಂದಿಯೆಲ್ಲಾ ಕುಳಿತು ನೋಡುವ ಸಿನಿಮಾ. ದೇಸಿ ಪ್ರತಿಭೆಯನ್ನು ಪ್ರೋತ್ಸಾಹಿಸುವ, ಅವರಲ್ಲಿರುವ ಪ್ರತಿಭೆಯನ್ನು ತೆರೆ ಮೇಲೆ ಅದ್ಭುತವಾಗಿ ಕಟ್ಟಿಕೊಡುವಲ್ಲಿ ನಿರ್ದೇಶಕ ಕೃಷ್ಣ ಗೆದ್ದಿದ್ದಾರೆ. ಸುದೀಪ್ ನಲ್ಲಿರುವ ಪ್ರತಿಭೆಯನ್ನು ಬಸಿದು ತೆಗೆದಂತಿದೆ. ಅಖಾಡದಲ್ಲಿ ಸುದೀಪ್ ಕುಸ್ತಿಗೆ ನಿಂತರೆ ಸಿಂಹ ಸಾರ್ ಸಿಂಹ!.  ಅಷ್ಟು ಅದ್ಭುತವಾಗಿ ನಿಭಾಯಿಸಿದ್ದಾರೆ ಸುದೀಪ್. ಈ ಚಿತ್ರಕ್ಕಾಗಿ ಅವರ ವರ್ಕೌಟ್ ಹಾಗೂ ಪರಿಶ್ರಮ ಸಿನಿಮಾದಲ್ಲಿ ಎದ್ದು ಕಾಣಿಸುತ್ತದೆ. ಪೈಲ್ವಾನ್ ಅಂದ್ರೆ ಸುದೀಪ್, ಸುದೀಪ್ ಅಂದ್ರೆ ಪೈಲ್ವಾನ್ ಅಂದ್ರೆ ತಪ್ಪಾಗಲ್ಲ. ‘ಸರ್ಕಾರ್’ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸುನೀಲ್ ಶೆಟ್ಟಿ ಗಮನ ಸೆಳೆಯುತ್ತಾರೆ. ಅವರ ಡೈಲಾಗ್, ಬಾಡಿ ಲಾಂಗ್ವೇಜ್ ಆಕರ್ಷಣೀಯವಾಗಿದೆ. ಡೈಲಾಗ್ ಡಿಲವರಿ ಖಡಕ್ ಆಗಿದೆ.   

ರಾಜಕಾರಣಕ್ಕೆ ಸುದೀಪ್? ಚಿರಂಜೀವಿಯಿಂದ ಪೈಲ್ವಾನ್ ಕಲಿತ ಪಾಠ

ಸಾಂಗ್ ಬಗ್ಗೆ ಹೇಳುವುದಾದರೆ ಒಳ್ಳೆಯ ಮೇಕಿಂಗ್. ‘ಬಂದ ನೋಡು ಪೈಲ್ವಾನ್’ ಹಾಗೂ ‘ಬಾರೋ ಪೈಲ್ವಾನ್’ ಎರಡೂ ಸಾಂಗ್ ಮೇಕಿಂಗ್ ಅದ್ಭುತವಾಗಿದೆ. ಗ್ರಾಫಿಕ್ಸ್ ವರ್ಕ್ ಕೂಡಾ ಚೆನ್ನಾಗಿದೆ. ಪೈಲ್ವಾನ್ ಎಂಟ್ರಿ ಬಾಲಿವುಡ್ ಸುಲ್ತಾನ್, ದಂಗಲ್ ಮೀರಿಸುವಂತಿದೆ. ಕಿಚ್ಚನ ಮಗಳಾಗಿ ಕಾಣಿಸಿಕೊಂಡಿರುವ ಮಾತಿನ ಮಲ್ಲಿ ಹುಬ್ಬಳ್ಳಿಯ ಪುಟಾಣಿ ಪ್ರತಿಭೆ ಶಾರ್ವರಿ ಮುದ್ದಾಗಿ ನಟಿಸಿದ್ದಾಳೆ. ಅಲ್ಲಲ್ಲಿ ಪುಟಾಣಿಯ ಕಾಮಿಡಿ ಇಷ್ಟವಾಗುತ್ತದೆ. 

‘ದೇವರು ಎಲ್ಲರಿಗೂ ಕನಸುಗಳನ್ನು ಕೊಟ್ಟಿರ್ತಾನೆ. ಆದರೆ ಹಸಿವು ಎಲ್ಲಾ ಕನಸುಗಳನ್ನು ತಿಂದು ಹಾಕಿ ಬಿಡುತ್ತದೆ’ ಅನ್ನೋ ಡೈಲಾಗ್ ಮೂಲಕ ಪುಟ್ಟ ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಧ್ರುವತಾರೆ ಹಾಡು ಪರಿಚಯಿಸುತ್ತದೆ. ಈ ಹಾಡು ಕೇಳಿದಾಗ ಪ್ರೇಕ್ಷಕರ ಕುಳಿತಲ್ಲೇ ಕಣ್ಣೀರಾಗುತ್ತಾನೆ. ಇಲ್ಲೇ ಪೈಲ್ವಾನ್ ಗೆದ್ದಿದ್ದಾನೆ. 

ಇದನ್ನೆಲ್ಲ ಇಲ್ಲಿಗೇ ಬಿಟ್ಟುಬಿಡಿ, ಮುಂದೆ ಸಾಗೋಣ ಬನ್ನಿ- ಸುದೀಪ್‌

ಮದುವೆ ಮನೆಯಲ್ಲಿ ನಡೆಯುವ ಸೀನನ್ನು ಸಿಕ್ಕಾಪಟ್ಟೆ ಹೆಣ್ಮಕ್ಕಳು ಇಷ್ಟಪಟ್ಟಿದ್ದಾರೆ. ಮದುವೆಯಾದರೆ ಈ ರೀತಿಯೇ ಆಗಬೇಕು ಎಂದು ಕನಸು ಕಂಡಿದ್ದಾರೆ. ಸುದೀಪ್ ಕೊಟ್ಟ ಎಂಟ್ರಿ ಹಾಗಿರುತ್ತದೆ. ಇದನ್ನು ನೋಡಬೇಕು ಅಂದ್ರೆ ಸಿನಿಮಾವನ್ನೇ ನೋಡಬೇಕು.

ಪತ್ರಿಕಾಗೋಷ್ಟಿಯೊಂದರಲ್ಲಿ ರವಿಚಂದ್ರನ್ ಹೇಳಿದಂತೆ ಕುರುಕ್ಷೇತ್ರದಲ್ಲಿ ಕೃಷ್ಣನಾಗಿ ನಾನು ಗೆದ್ದಿದ್ದೇನೆ. ಪೈಲ್ವಾನ್ ನಲ್ಲಿ ಕೃಷ್ಣನಾಗಿ ಸುದೀಪ್ ರನ್ನು ಅಭಿಮಾನಿಗಳು ಗೆಲ್ಲಿಸುತ್ತಾರೆ’ ಎಂದಿದ್ದರು. ಅದು ನಿಜವಾಗಿದೆ.  ಸಿನಿಮಾದಲ್ಲಿ ನಾಯಕಿಯ ಎಂಟ್ರಿ ತುಂಬಾ ವಿಭಿನ್ನವಾಗಿದೆ. ಸುದೀಪ್ -ಆಕಾಂಕ್ಷ ನಡುವೆ ಹೆಚ್ಚಿನ ಸಂಭಾಷಣೆಯಿರುವುದಿಲ್ಲ. ‘ಕಣ್ಣ ಮಣಿಯೇ ಹಾಡಿನ ಸೆಟ್ ಚೆನ್ನಾಗಿದೆ. ಆದರೆ ಸುದೀಪ್ ಗೆ ಹಾಡು ಅಷ್ಟಾಗಿ ಒಗ್ಗಿಕೊಳ್ಳುವುದಿಲ್ಲ. ಜೊತೆಗೆ ಡ್ರಾಮಾಟಿಕ್ ಜಾಸ್ತಿ ಆದಂತೆ ಭಾಸವಾಗುತ್ತದೆ. 

ಸ್ಯಾಂಡಲ್ ವುಡ್ ಸ್ಟಾರ್ ಫ್ಯಾನ್ಸ್ ವಾರ್ ಗೆ ರೋಚಕ ತಿರುವು

ಫಸ್ಟ್ ಹಾಫನ್ನು ರಬ್ಬರ್ ಬ್ಯಾಂಡ್ ನಂತೆ ಎಳೆದಂತೆ ಭಾಸವಾಗುತ್ತದೆ. ಕ್ಲೈಮ್ಯಾಕ್ಸ್ ನಲ್ಲಿ ಬಾಕ್ಸಿಂಗ್ ಸೀನನ್ನು ಸ್ವಲ್ಪ ಜಾಸ್ತಿ ಎಳೆದಂತೆ ಎನಿಸುತ್ತದೆ. ಕಡಿಮೆ ಇದ್ದಿದ್ದರೆ ಪ್ರೇಕ್ಷಕನಿಗೆ ಇನ್ನಷ್ಟು ಇಷ್ಟವಾಗುತ್ತಿತ್ತು. ರಾಣಾ ಪ್ರತಾಪ್ ಹಾಗೂ ಟೋನಿ ಪಾತ್ರ ತುಂಬಾ ಚೆನ್ನಾಗಿದೆ. ಕುಸ್ತಿಯಲ್ಲಿ ರಾಣಾ ಪ್ರತಾಪ್ ಟಕ್ಕರ್ ಕೊಡಲು ನಿಂತರೆ, ಬಾಕ್ಸಿಂಗ್ ನಲ್ಲಿ ಟೋನಿ ಟಕ್ಕರ್ ಕೊಡುತ್ತಾನೆ. ಇವರೆಡೂ ಪಾತ್ರ ಸದ್ದು ಮಾಡಿದೆ. ಫೈಟಿಂಗ್ ನಲ್ಲಿ ರವಿವರ್ಮನ ಕೈಚಳಕ ಕೆಲಸ ಮಾಡಿದೆ. 

ಪೈಲ್ವಾನ್ ನೋಡಲು ಥಿಯೇಟರ್ ನಲ್ಲಿ ಕುಳಿತ ಪ್ರೇಕ್ಷಕನಿಗೆ ಎರಡೂವರೆ ತಾಸು ಕಳೆದಿದ್ದೇ ಗೊತ್ತಾಗುವುದಿಲ್ಲ. ಪೈಸಾ ವಸೂಲ್ ಸಿನಿಮಾ ಎಂದರೆ ತಪ್ಪಾಗಲಿಕ್ಕಿಲ್ಲ. ಇನ್ನೇಕೆ ತಡ. ನೀವೂ ಒಮ್ಮೆ ಹೋಗಿ ಪೈಲ್ವಾನ್ ನೋಡಿಕೊಂಡು ಬನ್ನಿ.   

- ಚಂದನ್ ಕುಮಾರ್, ಸುವರ್ಣ ವೆಬ್ ಡೆಸ್ಕ್ 
 

Latest Videos
Follow Us:
Download App:
  • android
  • ios