ಕಿಚ್ಚ ಸುದೀಪ್ ಸೂಪರ್ ಡ್ಯೂಪರ್ ಹೀರೋ. ದುಡ್ಡು ಹಾಕೋರಿಗೆ ಮೋಸ ಆಗೋದಿಲ್ಲ. ವಿತರಕರೂ ಫುಲ್ ದುಡ್ ಮಾಡಿಕೊಳ್ತಾರೆ. ಕೋಟಿಗೊಬ್ಬ-2 ಸಿನಿಮಾ ಅದನ್ನ ಸಾಬೀತು ಮಾಡಿದೆ

ಕನ್ನಡದಲ್ಲಿ ಕೋಟಿ ಕೋಟಿ ಪಡೆಯೊ ಸೂಪರ್ ಸ್ಟಾರ್ ಇದ್ದಾರೆ. ಆದರೆ, ಈ ಕೋಟಿಗೊಬ್ಬ ಅವರೆಲ್ಲರಿಗಿಂತಲೂ ಒಂದ್ ಕೈ ಮುಂದೆ. ಕೋಟಿ ಕೋಟಿ ಪಡೆಯುತ್ತಲೇ ಕೋಟಿಗೊಬ್ಬ ಸಿನಿಮಾ ಮಾಡ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕನ್ನಡದ ಕೋಟಿಗೊಬ್ಬ. ಇದು ಸತ್ಯವೇ. ಆದರೆ, ಕನ್ನಡದಲ್ಲಿ ಕೋಟಿ ಪಡೆಯೋರ ಸಂಖ್ಯೆ ಕಡಿಮೆ ಏನೂ ಇಲ್ಲ. ಕೋಟಿ ಕೋಟಿ ಪಡೆಯೋ ಸೂಪರ್ ಸ್ಟಾರ್'ಗಳೇ ಕನ್ನಡದಲ್ಲಿರೋದು. ಅವರ ಸಿನಿಮಾಕೆ ದುಡ್ಡು ಹಾಕಿದರೆ ನಿರ್ಮಾಪಕ ಫುಲ್ ಸೇಫ್. ಅದಕ್ಕೆ ತಾನೇ ಇವರ ಕೋಟಿ ಫಿಗರ್ ಇನ್ನೂ ಏರ್ತಿರೋ. ಆದರೆ, ನಾವ್ ಹೇಳ್ತೀರೋ ಈ ಕೋಟಿ ವೀರ ಡಿಫರಂಟ್. ಮಾಡೋ ಸಿನಿಮಾನೂ ವಿಭಿನ್ನ. ಪಡೆಯೋ ದುಡ್ಡು ಎಲ್ಲರಕ್ಕಿಂತಲೂ ಕೊಂಚ ಹೆಚ್ಚು. ಅವರೆ ಮಿಸ್ಟರ್ ಹೆಬ್ಬುಲಿ. ಅವರೇ ಮಿಸ್ಟರ್ ಕಿಚ್ಚ. ಅವರೇ ಕನ್ನಡದ ಅಭಿನಯ ಚಕ್ರವರ್ತಿ. ಕಿಚ್ಚನ ಕೋಟಿಗೊಬ್ಬ-2 ಸೂಪರ್ ಡ್ಯೂಪರ್,ನಿರ್ಮಾಪಕ ಸೂರಪ್ ಬಾಬು ಫುಲ್ ಸೇಫ್,ಕೋಟಿಗೊಬ್ಬ ಚಿತ್ರಕ್ಕೆ ಹಾಕಿದ್ದ ದುಡ್ಡು ವಾಪಸ್
ಕಿಚ್ಚ ಸುದೀಪ್ ಸೂಪರ್ ಡ್ಯೂಪರ್ ಹೀರೋ. ದುಡ್ಡು ಹಾಕೋರಿಗೆ ಮೋಸ ಆಗೋದಿಲ್ಲ. ವಿತರಕರೂ ಫುಲ್ ದುಡ್ ಮಾಡಿಕೊಳ್ತಾರೆ. ಕೋಟಿಗೊಬ್ಬ-2 ಸಿನಿಮಾ ಅದನ್ನ ಸಾಬೀತು ಮಾಡಿದೆ.ಅದರಲ್ಲೂ ಕೋಟಿಗೊಬ್ಬ-2 ಸಿನಿಮಾದ ನಿರ್ಮಾಪಕ ಸೂರಪ್ಪ ಬಾಬು ಕೂಡ ಆಗಲೇ ಕಿಚ್ಚನ ಜೊತೆಗೆ ಮತ್ತೊಂದು ಸಿನಿಮಾ ಮಾಡೋಕೆ ಆಸೆ ಪಟ್ಟಿದ್ದರು. ಅದುವೇ ಈಗಿನ ಕೋಟಿಗೊಬ್ಬ-3 ಸಿನಿಮಾ.
ಕೋಟಿಗೊಬ್ಬ-3 ಚಿತ್ರಕ್ಕೆ ಕಿಚ್ಚನಿಗೆ 8 ಕೋಟಿ ಸಂಭಾವನೆ
ಕೋಟಿಗೊಬ್ಬ-3 ಚಿತ್ರದ ಕೆಲಸ ನಡೀತಿದೆ. ಸ್ಕ್ರಿಪ್ಟಿಂಗ್ ಕೂಡ ಆಗುತ್ತಿದೆ. ಆದರೆ, ಸದ್ಯ ಸೂರಪ್ಪ ಬಾಬು ತಮ್ಮ ಚಿತ್ರಕ್ಕೆ ಕೊಟ್ಟ ಸಂಭಾವನೆಯ ಸುದ್ದಿಯನ್ನ ಹೊರಗೆಡವಿದ್ದಾರೆ. ಇಷ್ಟು ಬಿಟ್ರೆ, ಕಿಚ್ಚನ ಈ ಕೋಟಿಗೊಬ್ಬ-3 ಸಿನಿಮಾ ಕೂಡ ಧಮಾಕಾ ಮಾಡೋ ಥರವೇ ಕತೆ ರೆಡಿಯಾಗ್ತಿದೆ.ಯಾವುದಕ್ಕೂ ವೇಟ್ ಮಾಡಿ.