ಮಾರ್ಚ್‌ 1 ರಂದು 'ಯಜಮಾನ' ರಿಲೀಸ್‌ಗೆ ಸಿದ್ಧವಾಗುತ್ತಿದ್ದು ಮತ್ತೊಂದು ಕಡೆ ಸಿನಿಮಾದ 5 ನೇ ಹಾಡು ಬಿಡುಗಡೆ ಮಾಡಿದೆ. ಈ ಹಾಡು 3 ನಿಮಿಷ 38 ಸೆಕೆಂಡ್ ಇದೆ.

ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಂಡ ದಾಸ ’ಹತ್ತು ರೂಪಾಯಿಗೊಂದು.....’ ಹಾಡಿನಲ್ಲಿ ಕ್ಲಾಸ್ ಆಗಿ ಕಾಣಿಸಿಕೊಂಡಿದ್ದಾರೆ. 10 ರೂಪಾಯಿ ಮೌಲ್ಯವನ್ನು ಯೋಗ್‌ರಾಜ್ ಭಟ್ ಈ ಹಾಡಿನ ಮೂಲಕ ಹೇಳಿದ್ದಾರೆ. ಸಂಗೀತ ನಿರ್ದೇಶಕ ಹರಿಕೃಷ್ಣ ಹಾಡನ್ನು ಕಂಪೋಸ್ ಮಾಡಿದ್ದು ವಿಜಯ್ ಪ್ರಕಾಶ್ ಧ್ವನಿ ನೀಡಿದ್ದಾರೆ.

 

ಟ್ವೀಟರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ‘ಫಿಲಂ ರಿಲೀಸ್ ಟೈಮ್ ಹತ್ತಿರ ಬಂದಿದೆ. ಟ್ರೈಲರ್ ಹಾಗೂ 4 ಹಾಡುಗಳನ್ನು ಅಷ್ಟು ದೊಡ್ಡ ಮಟ್ಟದಲ್ಲಿ ಸ್ವೀಕರಿಸಿರುವ ಜನತೆಗೆ ನನ್ನ ನಮನಗಳು. "ಯಜಮಾನ" ಚಿತ್ರದ ಕೊನೆಯ ಹಾಡು 'ಹತ್ ರೂಪಾಯಿಗೊಂದು' ಹಾಡು ಈಗ ನಿಮ್ಮ ಮುಂದೆ. ನೋಡಿ ಆನಂದಿಸಿ, ಎಂದಿನಂತೆ ಹರಸಿ, ನಿಮ್ಮ ದಾಸ ದರ್ಶನ್ ' ಎಂದು ಟ್ವೀಟ್ ಮಾಡಿದ್ದಾರೆ.