Asianet Suvarna News Asianet Suvarna News

ಸೂಪರ್ ಹಿಟ್ ಆಯ್ತು ಡಾಟರ್ ಆಫ್ ಪಾರ್ವತಮ್ಮ ಟೀಸರ್

ನಟಿ ಸುಮಲತಾ ಅಂಬರೀಶ್ ಹಾಗೂ ಹರಿಪ್ರಿಯಾ ನಟನೆಯ ‘ಡಾಟರ್ ಆಫ್ ಪಾರ್ವತಮ್ಮ’ ಚಿತ್ರದ ಟೀಸರ್ ಈಗಷ್ಟೆ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ಅಂದಹಾಗೆ ಮೊನ್ನೆ ಚಿತ್ರದ ಟೀಸರ್ ಬಿಡುಗಡೆಯ ನೆಪದಲ್ಲಿ ಚಿತ್ರತಂಡ ಮಾಧ್ಯಮಗಳ ಮುಂದೆ ಬಂತು. 

Sandalwood Film Daughter of parvathamma teaser goes viral
Author
Bengaluru, First Published Oct 12, 2018, 10:49 AM IST
  • Facebook
  • Twitter
  • Whatsapp

ಸುಮಲತಾ ಅಂಬರೀಶ್ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಂಡ ಸಂಭ್ರಮದಲ್ಲಿದ್ದರು. ‘ನಿರ್ದೇಶಕರು ಬಂದು ಕತೆ ಹೇಳಿದಾಗ ತುಂಬಾ ಸಿಂಪಲ್ಲಾಗಿದೆ ಅನಿಸಿತು. ಆ ಮೇಲೆ ಚಿತ್ರೀಕರಣ ಮಾಡುತ್ತ ಹೋದಂತೆ ಅದ್ಭುತವಾದ ಕತೆ, ಹೊಸ ರೀತಿಯ ಪಾತ್ರ ಎಂಬುದು ಗೊತ್ತಾಯಿತು. ಈಗ ಟೀಸರ್ ನೋಡಿದಾಗ ಚಿತ್ರದ ಬಗ್ಗೆ ನಮಗೆ ಮತ್ತಷ್ಟು ನಂಬಿಕೆ ಬಂದಿದೆ. ಪಾರ್ವತಮ್ಮ ಎನ್ನುವ ಹೆಸರಿಗೆ ಒಂದು ಶಕ್ತಿ, ಪ್ರೀತಿ ಮತ್ತು ಆಕರ್ಷಣೆ ಇದೆ’ ಎಂಬುದು ಸುಮಲತಾ ಅಂಬರೀಶ್ ಅವರ ಮಾತು.

ನಟ ವಿನಯ್ ರಾಜ್‌ಕುಮಾರ್ ಹಾಗೂ ನಿರ್ದೇಶಕ ಪವನ್ ಒಡೆಯರ್ ಆಗಮಿಸಿ ಚಿತ್ರತಂಡಕ್ಕೆ ಶುಭ ಕೋರಿದರು. ಶಶಿಧರ ಕೆ.ಎಂ, ವಿಜಯಲಕ್ಷ್ಮೀ ಕೃಷ್ಣೆಗೌಡ, ಸಂದೀಪ್ ಶಿವಮೊಗ್ಗ ಹಾಗೂ ಶ್ವೇತ ಮಧುಸೂದನ್ ಜಂಟಿಯಗಿ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.ಜೆ ಶಂಕರ್ ಈ ಚಿತ್ರದ ನಿರ್ದೇಶಕರು. ಅವರಿಗಿದು ಮೊದಲ ಸಿನಿಮಾ. ‘ಮಹಿಳಾ ಪ್ರಧಾನ ಕತೆಯನ್ನು ಹೇಳುವುದಕ್ಕೆ ಹೊರಟಿರುವ ಸಿನಿಮಾ ಇದು. ಅಮ್ಮ- ಮಗಳು ಈ ಚಿತ್ರದ ಮುಖ್ಯ ಕೇಂದ್ರಗಳು. ಅವರ ಸುತ್ತ ಸಿನಿಮಾ ಸಾಗುತ್ತದೆ’ ಎಂದರು ನಿರ್ದೇಶಕರು.

ನಟ ಸೂರಜ್ ಗೌಡ ಚಿತ್ರದ ಮತ್ತೊಂದು ಮುಖ್ಯ ಪಾತ್ರಧಾರಿ. ಪೂಜಾರಿ ಮಗನ ಪಾತ್ರದಲ್ಲಿ ಬಂದು ಚಿತ್ರಕ್ಕೆ ಹೊಸ ತಿರುವು ಕೊಡುತ್ತಾರೆ ಸೂರಜ್ ಗೌಡ. ಪ್ರಭು, ತರಂಗವಿಶ್ವ ಅವರು ಸಹ ನಟಿದ್ದಾರೆ. ಇನ್ನೂ ನಟಿ ಹರಿಪ್ರಿಯಾ ಅವರಿಗೆ ಸುಮಲತಾ ಅಂಬರೀಶ್ ಅವರೊಂದಿಗೆ ನಟಿಸಿರುವ ಸಂಭ್ರಮ ಇದೆ. ‘ನಾನು ತನಿಖಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನದು ಪವರ್‌ಫುಲ್ ಪಾತ್ರ’ ಎಂದರು ಹರಿಪ್ರಿಯಾ. ಮಿದುನ್ ಮುಕುಂದನ್ ಸಂಗೀತ ಸಂಯೋಜಿಸಿದ್ದಾರೆ. 

 

Follow Us:
Download App:
  • android
  • ios