ಸ್ಯಾಂಡಲ್‌ವುಡ್ ಕ್ರಿಯೇಟಿವ್ ಡೈರೆಕ್ಟರ್ 'ಗೂಗ್ಲಿ' ಮಾಸ್ಟರ್ ಪವನ್ ಒಡೆಯರ್ ಹಾಗೂ ಅಪೇಕ್ಷಾ ಪುರೋಹಿತ್ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ಒಂದು ವರ್ಷವಾಗಿದ್ದು ಇಬ್ಬರನ್ನೊಬ್ಬರು ಮುದ್ದು ಮುದ್ದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಶ್ ಮಾಡಿಕೊಂಡಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯವಾಗಿರುವ ಈ ಜೋಡಿ ತುಂಬಾ ಕ್ರಿಯೇಟಿವ್. ಪವನ್ ಮದುವೆ ನಂತರ ಬಂದ ಮೊದಲ ಹುಟ್ಟುಹಬ್ಬಕ್ಕೆ ಹೆಂಡತಿ "ದಿ ಬಾಸ್" ಟೀ ಶರ್ಟ್ ಕೊಟ್ಟಿದ್ದಾರೆ. ಆದರೆ ಇದರಲ್ಲಿರುವ ಟ್ವಿಸ್ಟ್ ಏನೆಂದರೆ ಗಂಡನಿಗೆ ‘ದಿ ಬಾಸ್’ ಕೊಟ್ಟರೆ ಹೆಂಡತಿ "ದಿ ರಿಯಲ್ ಬಾಸ್" ಎಂದು ಬರೆದಿದ್ದು ವೈರಲ್ ಅಗಿತ್ತು.

ಪವನ್ ಒಡೆಯರ್ ಹೆಂಡತಿ ಕೊಟ್ಟ ವಿಶೇಷ ಬರ್ತಡೇ ಗಿಫ್ಟ್ !

ಅಪೇಕ್ಷಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ 'ಗಂಡ ಅನ್ನೋ ಪದ ಎಲ್ಲಾ ಗಂಡಸಿಗೂ ಸಿಗುವ ಪದವಿ. ಆದರೆ ಅದಕ್ಕೊಂದು ಅರ್ಥ ಕೊಡುವುದು ತುಂಬು ಹೃದಯ ಹಾಗೂ ಮನಸ್ಸು. ಥ್ಯಾಂಕ್ಸ್‌ ಫಾರ್ ಲೈಫ್‌ ಪಾರ್ಟ್ನರ್’ ಎಂದು ಮದುವೆ ವಿಡಿಯೋ ಶೇರ್ ಮಾಡಿ ಬರೆದುಕೊಂಡಿದ್ದಾರೆ.

 

ಇನ್ನು ಪವನ್ 'ನಿನ್ನನ್ನು ವರ್ಣನೆ ಮಾಡಲು ಪದಗಳೇ ಸಿಗುತ್ತಿಲ್ಲ. ನೀನು ಸುತ್ತ ಇದ್ದಾಗ ಸಮಯ ಹೋಗಿದ್ದೇ ಗೊತ್ತಾಗುವುದಿಲ್ಲ ಪುಟ್ಟಾ. ನನ್ನ ಜೀವನದಲ್ಲಿ ಸಿಕ್ಕ ಅಮೂಲ್ಯ ವ್ಯಕ್ತಿ ನೀನು. ಹ್ಯಾಪಿ ವೆಡ್ಡಿಂಗ್ ಆ್ಯನಿವರ್ಸರಿ. ಮೈ ಡಿಯರ್ ವೈಫ್ ' ಎಂದು ಬರೆದುಕೊಂಡಿದ್ದಾರೆ.