ಸ್ಯಾಂಡಲ್ ವುಡ್ ಖ್ಯಾತ ಡೈರೆಕ್ಟರ್ ಕಮ್ ಆ್ಯಕ್ಟರ್ ರಿಷಬ್ ಶೆಟ್ಟಿ ಪ್ರೇಮಿಗಳ ದಿನದಂದು ಎಲ್ಲ ಯಂಗ್ ಆ್ಯಂಡ್ ಎನರ್ಜೆಟಿಕ್ ಹಾರ್ಟ್ ಗಳಿಗೆ ಒಂದಷ್ಟು ಪ್ರೀತಿಯ ಮಾತುಗಳನ್ನು ಹೇಳಿದ್ದಾರೆ. ಏನೆಂದು ಹೇಳಿದ್ದಾರೆ ಇಲ್ಲಿದೆ ಓದಿ

ಪ್ರೇಮಿಗಳ ದಿನ ಎಂದಾಕ್ಷಣ ಹುಡುಗ-ಹುಡುಗಿ ಮತ್ತು ಪಾರ್ಕು. ಇಷ್ಟೇ ಹೆಚ್ಚಾಗಿ ನೆನಪಾಗುತ್ತದೆ. ಆದರೆ, ಪ್ರೀತಿ ಅನ್ನೋದು ಇದರ ಆಚೆಗೂ ಇದೆ. ನಮ್ಮ ಸುತ್ತಲಿನವರನ್ನು ಪ್ರೀತಿಸುವುದು, ನಮ್ಮನ್ನು ಬೆಳೆಸಿದ ಸ್ನೇಹಿತರು, ಊರು, ಬದುಕು ಕೊಟ್ಟ ನಗರ, ಐಡೆಂಟಿಟಿ ಕೊಟ್ಟ ದೇಶವನ್ನು ಪ್ರೀತಿಸುವಂತಾಗಬೇಕು. ಈ ಕಾರಣಕ್ಕೆ ನನ್ನ ಪ್ರಕಾರ ಪ್ರೇಮಿಗಳ ದಿನ ಎಂದು ಹೇಳಿ ಪ್ರೀತಿಯನ್ನು ಸೀಮಿತ ಮಾಡುವ ಬದಲು, ಪ್ರೀತಿಸುವವರ ದಿನ ಅಂತ ಆಚರಿಸಿದರೆ ಒಳ್ಳೆಯದು. ಆಗ ಪ್ರೀತಿಯ ವ್ಯಾಪ್ತಿ ದೊಡ್ಡದಾಗುತ್ತದೆ ಎಂಬುದು ನನ್ನ ಅನಿಸಿಕೆ. ಆದರೆ, ಈಗ ಪ್ರೇಮಿಗಳ ದಿನವನ್ನು ಅವರವರ ಭಾವಕ್ಕೆ ತಕ್ಕಂತೆ ಆಚಣೆ ಮಾಡುತ್ತಿದ್ದಾರೆ. ಇದು ಆಚರಣೆಯಾಗಿ ಮಾತ್ರ ಉಳಿಯದಿರಲಿ. ಪ್ರೀತಿ ಅನ್ನೋದು ಕೊನೆಯ ತನಕ ಅಂದರೆ ನಾವು ಇಲ್ಲದಿದ್ದರೂ ಅದು ಸದಾ ಉಸಿರಾಗಿರುವ ಸ್ಪಚ್ಛವಾದ ಮನಸ್ಸಿನ ಕನ್ನಡಿ ಪ್ರೀತಿ. ಹೀಗಾಗಿ ಪ್ರೇಮಿಗಳ ದಿನವನ್ನು ಪ್ರೀತಿಸುವವರ ದಿನವನ್ನಾಗಿ ಆಚರಿಸಿ. ಎಲ್ಲರ ಪ್ರೀತಿಗೆ ನೀವು ಪಾತ್ರರಾಗಿ, ನಿಮಗೂ ಎಲ್ಲ ರೀತಿಯ ಪ್ರೀತಿಯೂ ಸಿಗಲಿ.