ಅ್ಯಂಡ್ರೋಸ್  ಪಾತ್ರಧಾರಿ ಅವಿನಾಶ್ 
ಮೂಲತಃ ಬ್ಯುಸಿನೆಸ್‌ಮನ್. ಊರು ಬೆಂಗಳೂರು. ಆರಡಿ ಕಟೌಟ್ ಅಂತ ಕರೆಸಿಕೊಳ್ಳಬಹುದಾದ ಕಟ್ಟುಮಸ್ತು ದೇಹ. ಪೂರ್ತಿ ಹೆಸರು ಅವಿನಾಶ್ ಗೌಡ. ಇದು ಅವರಿಗೆ ಎರಡನೇ ಚಿತ್ರ. ನಟೋರಿಯಸ್ ಕಿಲ್ಲರ್ ಆ್ಯಂಡ್ರೋಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆ್ಯಂಡ್ರೋಸ್ ಓರ್ವ ಕ್ರಿಶ್ಚಿಯನ್ ಸಮುದಾಯದವ. ಕೆಜಿಎಫ್ ಚಿನ್ನದ ಗಣಿ ಧೂಳಿನಲ್ಲಿ ಕಿಲ್ಲರ್ ಆಗಿ ರೂಪ ತಾಳಿ ನಿಂತ ಪಾತಕಿ. ಆತ ಅಲ್ಲಿ ಹೇಗೆ ಗ್ಯಾಂಗ್‌ಸ್ಟರ್ ಆಗಿ ಬೆಳೆದು ಮುಂಬೈ ಡಾನ್‌ಗಳ ಸಂಪರ್ಕದಲ್ಲಿರುತ್ತಾನೆನ್ನುವುದೇ ಅವಿನಾಶ್ ಗೌಡ ಪಾತ್ರ. ನಿರ್ದೇಶಕ ಪ್ರಶಾಂತ್ ನೀಲ್ ಹೇಳುವ ಪ್ರಕಾರ, ಆ್ಯಂಡ್ರೋಸ್ ಪಾತ್ರಕ್ಕೆ ಸೂಕ್ತವಾಗುವ ನಟರ ಹುಡುಕಾಟದಲ್ಲಿ ಕೊನೆಗೆ ಸಿಕ್ಕ ನಟನೇ ಅವಿನಾಶ್. ಕೆಜಿಎಫ್ ತೆರೆ ಕಂಡರೆ ಅವಿನಾಶ್ ತಮ್ಮ ಮೂಲ ಹೆಸರಿಗಿಂತ ಆ್ಯಂಡ್ರೋಸ್ ಅಂತಲೇ ಪ್ರೇಕ್ಷಕರ ಮನಸಲ್ಲಿ ಜನಪ್ರಿಯತೆ ಪಡೆಯುವುದು ಗ್ಯಾರಂಟಿ.

ಕೋಲ್ಡ್ ಬ್ಲಡೆಡ್ ವಿಲನ್ ಲಕ್ಷ್ಮಣ್
ವಿಲನ್ ಅಂದ್ರೆ ವಿಕಾರವಾಗಿರಬೇಕು ಅಂತೇನಿಲ್ಲ. ಕರುಣೆ ಮುಖದ ಹಿಂದೆ ಕ್ರೌರ್ಯ ತೋರಿಸುವ ಗೋಮುಖ ವ್ಯಾಘ್ರದ ಹಾಗೆ ಇಲ್ಲಿ ಕಾಣಿಸಿಕೊಳ್ಳುವ ರಾಜೇಂದ್ರ ದೇಸಾಯಿ ಎನ್ನುವ ಪಾತ್ರಕ್ಕೆ ಬಣ್ಣ ಹಚ್ಚಿದ್ದು ನಟ ಲಕ್ಷ್ಮಣ್. ಇವರು ಮೂಲತಃ ಮೈಸೂರಿನವರು. ನೆಲೆ ನಿಂತಿದ್ದು ಬೆಂಗಳೂರು. ಈಗಾಗಲೇ ಒಂದಷ್ಟು ಸಿನಿಮಾಗಳಲ್ಲಿ ಖಳನಟನಾಗಿ ಕಾಣಿಸಿಕೊಂಡಿದ್ದಾರೆ. ಆದರೆ ಕೆಜಿಎಫ್ ಚಿತ್ರದಲ್ಲಿ ರಾಜೇಂದ್ರ ದೇಸಾಯಿ ಪಾತ್ರ ಲಕ್ಷ್ಮಣ್ ಅವರನ್ನು ಓರ್ವ ಕಲಾವಿದನನ್ನಾಗಿ ತೋರಿಸುವುದು ಗ್ಯಾರಂಟಿ ಎನ್ನುವ ವಿಶ್ವಾಸ ಅವರಿಗೂ ಇದೆ. ಪಕ್ಕಾ ವಿಲನ್ ಶೇಡ್ ಜತೆಗೆ ಅವರು ಡಿಫರೆಂಟ್ ಗೆಟಪ್‌ನಲ್ಲಿ ತೆರೆ ಮೇಲೆ ಬರುತ್ತಿರುವುದು ಇದೇ 

ಡಾನ್ ವಾನರಮ್ ಆಗಿ ಅಯ್ಯಪ್ಪ
ರವಿಶಂಕರ್, ಸಾಯಿಕುಮಾರ್ ಸಹೋದರ ಅಯ್ಯಪ್ಪ ಕೂಡ ಬಹು ಬೇಡಿಕೆಯ ನಟ. ಬೇಡಿಕೆಯ ಡಬ್ಬಿಂಗ್ ಆರ್ಟಿಸ್ಟ್. ದನಿಯಿಂದಲೇ ಹೆದರಿಕೆ ಹುಟ್ಟಿಸುವ ಶಕ್ತಿ ಇರುವ ಅಯ್ಯಪ್ಪ ಇಲ್ಲಿ ಚೆನ್ನೈ ನಂಟಿನ ಡಾನ್ ವಾನರಮ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಅಯ್ಯಪ್ಪ. ಇಲ್ಲಿ ಅವರ ಗೆಟಪ್, ಲುಕ್ ಎಲ್ಲವೂ ಚೇಂಜ್. ಪಕ್ಕಾ ತಮಿಳು ನಂಟಿನ ಕೆಜಿಎಫ್ ನೆಲದ ರೌಡಿ ಗೆಟಪ್‌ನಲ್ಲೇ ತೆರೆ ಮೇಲೆ ಬರುತ್ತಿದ್ದಾರೆ. 

ಗರುಡ ಎಂಬ ರಾಮನ ಅವತಾರ
ಉದ್ದನೆ ಗಡ್ಡ, ಕೆಂಗಣ್ಣಿನ ನೋಟದಲ್ಲಿ ಪ್ರೇಕ್ಷಕರೇ ಬೆಚ್ಚಿ ಬೀಳುವಂತೆ ಕಾಣುವ ನಟ ರಾಮ್, ಕೆಜಿಎಫ್ ಚಿತ್ರದ ಮತ್ತೊಬ್ಬ ಪ್ರಮುಖ ವಿಲನ್. ಈಗಾಗಲೇ ಹಲವು ಚಿತ್ರ, ವಿಭಿನ್ನ ರೀತಿಯ ಖಳ ನಟನ ಪಾತ್ರಗಳಲ್ಲಿ ಮಿಂಚಿದ್ದಾರೆ. ಇಲ್ಲಿ ಅವರದು ಗರುಡನ ಪಾತ್ರ. ಗರುಡ ಎನ್ನುವ ಹೆಸರಿಗೆ ತಕ್ಕಂತೆ ನಟೋರಿಯಸ್ ರೌಡಿ. ಕೆಜಿಎಫ್‌ನಿಂದ ಹಿಡಿದು ಚೆನ್ನೈ, ಮುಂಬೈ ಡಾನ್‌ಗಳ ಜತೆಗೆ ಲಿಂಕ್ ಇರುವ ವ್ಯಕ್ತಿ ಈತ. ತನ್ನ ವಿರುದ್ಧ ಕತ್ತಿ ಮಸೆಯುವವರನ್ನು ಸೈಲೆಂಟ್ ಆಗಿ ಮುಗಿಸಿಬಿಡುವ ಸೈಲೆಂಟ್ ಕಿಲ್ಲರ್. 

ಚಿಟ್ಟೆ ಈಗ ವಿಕನ್ ಕಮಲ್ 
ಕಂಚಿನ ಕಂಠ, ಕತ್ತಿ ಮೀಸೆ ಮೂಲಕ ಗಮನ ಸೆಳೆದ ನಟ ವಶಿಷ್ಟ ಸಿಂಹ ಡಾನ್ ಕಮಲ್ ಆಗಿ ಅಬ್ಬರಿಸಲು ರೆಡಿ ಆಗಿದ್ದಾರೆ. ಕೆಜಿಎಫ್ ನ ಪ್ರಮುಖ ಡಾನ್‌ಗಳಲ್ಲಿ ಒಬ್ಬರಾದ ವಶಿಷ್ಟ ಅವರ ಪಾತ್ರದ ಲುಕ್ಕೇ ಇಲ್ಲಿ ವಿಭಿನ್ನ. ಪಕ್ಕಾ ರೆಟ್ರೋ ಸ್ಟೈಲ್. ಹಾಗೆಯೇ ಎಂಭತ್ತರ ದಶಕದ ವಿಲನ್ ತರಹದ ಗೆಟಪ್. ಆ ಕಾಲದ ರಿಯಲ್ ಡಾನ್‌ಗಳೇ ಎದುರಿಗೆ ಬಂದು ನಿಂತ ಹಾಗೆ ವಿಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಂಡಿರುವ ನಟ ವಶಿಷ್ಟ ಸಿಂಹ, ಚಿಟ್ಟೆಯಷ್ಟೇ ಕಮಲ್ ಆಗಿ ಮಿಂಚುವುದು ಗ್ಯಾರಂಟಿ ಎನ್ನುವ ವಿಶ್ವಾಸ ಚಿತ್ರತಂಡದ್ದು

ಮತ್ತಷ್ಟು ಡಾನ್ ಗಳು 
ನಿರ್ದೇಶಕರೇ ಹೇಳುವರ ಹಾಗೆ ಕೆಜಿಎಫ್ ಒಂದು ಗ್ಯಾಂಗ್‌ಸ್ಟರ್ ಸಿನಿಮಾ. ಇಲ್ಲಿ ಕಥಾ ನಾಯಕ ಯಶ್ ಅವರ ಪಾತ್ರವೇ ಚಿತ್ರದ ದೊಡ್ಡ ವಿಲನ್. ಇಲ್ಲಿರುವ ವಿಲನ್ ಗಳ ದೊಡ್ಡ ಪಟ್ಟಿಯೇ ಇದೆ. ದಿನೇಶ್ ಮಂಗಳೂರು, ನಾಗೇಂದ್ರ, ಪುನೀತ್ ಗೌಡ, ಹರೀಶ್ ರೈ, ರಮೇಶ್ ಇಂದಿರಾ, ತಾರಕ್, ಬಾಲಕೃಷ್ಣ ಕೂಡ ಪ್ರಮುಖ ವಿಲನ್ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಈ ಪೈಕಿ ಹೈದರಾಬಾದ್ ಮೂಲದ ಬಾಲಕೃಷ್ಣ ಇಲ್ಲಿ ದುಬೈ ಡಾನ್ ಆಗಿ ಅಬ್ಬರಿಸಲಿದ್ದಾರೆ.

ಪಾತ್ರ ಎನ್ನುವುದಕ್ಕಿಂತ ಸಿನಿಮಾವಾಗಿ ಕೆಜಿಎಫ್ ನಂಗಿಷ್ಟ. ‘ರಾಜಾ ಹುಲಿ’ ನಂತರ ಮತ್ತೆ ಯಶ್ ಎದುರು ವಿಲನ್ ಆಗಿ ಕಾಣಿಸಿಕೊಳ್ಳುವ ಅವಕಾಶ. ನೆಗೆಟಿವ್ ಶೇಡ್ ಇರುವ ಪಾತ್ರ. ಅದರ ಲುಕ್ ಆ್ಯಂಡ್ ಗೆಟಪ್ ಎರಡು ವಿಭಿನ್ನ. ನಿರ್ದೇಶಕ ಪ್ರಶಾಂತ್ ನೀಲ್ ಜತೆಗೆ ಕೆಲಸ ಮಾಡುವುದೇ ಖುಷಿ. ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಈ ಚಿತ್ರದೊಳಗೆ ನಾನೊಂದು ಪಾತ್ರ ಎನ್ನುವುದು ಹೆಮ್ಮೆ. - ವಶಿಷ್ಟ ಸಿಂಹ ನಟ