ಬೆಂಗಳೂರು (ಜ. 07):  ಕನ್ನಡ ಸಿನಿಮಾ ಖ್ಯಾತ ವಿತರಕ ಹಾಗೂ ಫೈನಾನ್ಸಿಯರ್ ನಾಗ ಪ್ರಸಾದ್ ಇಂದು ಕೊನೆ ಉಸಿರೆಳೆದಿದ್ದಾರೆ. 

ಚಿಂಗಾರಿ, ಗಾಡ್​ ಫಾದರ್ ,ಭೀಮ ತೀರದಲ್ಲಿ ಹಾಗೂ ಚಂದ್ರ ಚಿತ್ರವನ್ನ ವಿತರಣೆ ಮಾಡಿದ್ದರು.  ಜ್ವರ ಹಾಗೂ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಪ್ರಸಾದ್  ಚಿಕಿತ್ಸೆ ಫಲಕಾರಿ ಆಗದೇ ನಿನ್ನೆ ರಾತ್ರಿ ಆಸ್ವತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ. 

ಪ್ರಸಾದ್ ಅವರ ಅಂತ್ಯಕ್ರಿಯೆ ಇಂದು ಸಂಜೆ ನಡೆಯಲಿದ್ದು  ವಿಜಯನಗರದ ಪ್ರಸಾದ್ ನಿವಾಸದಲ್ಲಿ ಅಂತಿಮ ದರ್ಶನಕ್ಕಾಗಿ ಸಿದ್ಧತೆ ಮಾಡಲಾಗಿದೆ.