ತರುಣ್ ಸುಧೀರ್ ನಿರ್ದೇಶನದ ಈ ಚಿತ್ರದ ಟೈಟಲ್ ಹಿಂದೆ ಒಂದು ಇಂಟರೆಸ್ಟಿಂಗ್ ಕಥೆ ಇದೆ. ನಿರ್ಮಾಪಕ ಡಿ. ಉಮಾಪತಿ ಅವರು ತರುಣ್ ಸುಧೀರ್ ನಿರ್ದೇಶನದ ‘ಚೌಕ’ ಚಿತ್ರವನ್ನು ನೋಡಿ ಆ ಚಿತ್ರದ ದರ್ಶನ್ ಪಾತ್ರವನ್ನು ತುಂಬಾ ಇಷ್ಟಪಟ್ಟಿದ್ದರು. ಆ ಪಾತ್ರದ ಹೆಸರೇ ರಾಬರ್ಟ್. ಮುಂದೊಂದು ದಿನ ದರ್ಶನ್ ಅವರಿಗೆ ಸಿನಿಮಾ ಮಾಡಿದರೆ ಇದೇ ಹೆಸರಲ್ಲಿ ಸಿನಿಮಾ ಮಾಡಬೇಕು ಅಂತ ಚಲನಚಿತ್ರ ಮಂಡಳಿಯಲ್ಲಿ ಟೈಟಲ್ ನೋಂದಾಯಿಸಿದ್ದರು ಎಂದು ತರುಣ್ ಸುಧೀರ್ ಹೇಳುತ್ತಾರೆ. ಇದೀಗ ತರುಣ್ ಮತ್ತು ಉಮಾಪತಿ ಜೊತೆಯಾಗಿ ಸಿನಿಮಾ ಮಾಡುತ್ತಿರುವುದರಿಂದ ಚಿತ್ರಕ್ಕೆ ‘ರಾಬರ್ಟ್’ ಹೆಸರನ್ನು ಫೈನಲ್ ಮಾಡಲಾಗಿದೆ. ಈ ಚಿತ್ರವೂ ಕುಸ್ತಿ, ಬಾಕ್ಸಿಂಗ್ ಹಿನ್ನೆಲೆಯ ಕತೆ ಹೊಂದಿದೆ ಎನ್ನಲಾಗಿದೆ. ದರ್ಶನ್ ‘ಒಡೆಯ’ಚಿತ್ರವನ್ನು ಮುಗಿಸಿ ‘ರಾಬರ್ಟ್’ ಆಗಿ ಬದಲಾಗಲಿದ್ದಾರೆ.

'ನಿರ್ಮಾಪಕರು ಟೈಟಲ್ ನೋಂದಾಯಿಸಿರುವುದು ನಿಜ. ಆದರೆ ಅದೇ ಫೈನಲ್ ಅಂತ ಈಗ ನಾನು ಹೇಳಲ್ಲ' - ತರುಣ್ ಸುಧೀರ್

‘ಚೌಕ’ ಚಿತ್ರದ ರಾಬರ್ಟ್ ಭಾರಿ ಪವರ್ ಫುಲ್. ಹಾಗಾಗಿ ಅದೇ ಹೆಸರು ಫೈನಲ್ - ಉಮಾಪತಿ