ನಟ ದರ್ಶನ್ ವಿಷಯದಲ್ಲಿ ಯಾವುದನ್ನೂ ಕೂಡ ಈಗಲೇ ನಿರ್ಧಿಷ್ಟವಾಗಿ ಹೇಳಲು ಸಾಧ್ಯವೇ ಇಲ್ಲ. ಅವರ ಪಾಲಿಗೆ ಈ 'ದಿ ಡೆವಿಲ್' ಸಿನಿಮಾ ಕೊನೆಯ ಸಿನಿಮಾ ಆದರೂ ಆಗಬಹುದು. ಅಷ್ಟೇ ಅಲ್ಲ, ಕಾಟೇರ ಸಿನಿಮಾದ ಬಳಿಕ ದರ್ಶನ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ.
ನಟ ದರ್ಶನ್ (Darshan Thoogudeepa) ಪರಿಸ್ಥಿತಿ ಸದ್ಯ ಏನಾಗಿದೆ ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಜೈಲು ಸೇರಿರುವ ನಟ ದರ್ಶನ್ ಅವರು ಅಲ್ಲಿಂದ ಹೊರಗಡೆ ಬರೋದು ಯಾವಾಗ ಎಂಬುದು ಸದ್ಯಕ್ಕೆ ಉತ್ತರ ಸಿಗಲಾರದ ಪ್ರಶ್ನೆ. ಆದರೆ, ನಟ ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾ ಡಿಸೆಂಬರ್ 12 ರಂದು ತೆರೆಗೆ ಬರಲಿದೆ. ಈಗಾಗಲೇ ಈ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ದಿ ಡೆವಿಲ್ ಭಾರೀ ನಿರೀಕ್ಷೆ ಕೂಡ ಹುಟ್ಟುಹಾಕಿದೆ.
ಸ್ಯಾಂಡಲ್‌ವುಡ್ ಸ್ಟಾರ್ ನಟ ದರ್ಶನ್ ನಟನೆಯ 'ದಿ ಡೆವಿಲ್' ಸಿನಿಮಾದ ಬಿಡುಗಡೆ ಬಳಿಕ ಇನ್ನೂ ಎರಡು ಸ್ಟಾರ್‌ಗಳ ಸಿನಿಮಾಗಳು ಬಿಡುಗಡೆ ಘೋಷಿಸಿವೆ. ಅವುಗಳಲ್ಲಿ ಒಂದು ಸುದೀಪ್ ನಟನೆಯ ಮಾರ್ಕ್, ಹಾಗೂ ಇನ್ನೊಂದು ಶಿವರಾಜ್‌ಕುಮಾರ್-ಉಪೇಂದ್ರ ನಟನೆಯ '45' ಸಿನಿಮಾ. ಈ 45 ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ ಕೂಡ ನಟಿಸಿದ್ದಾರೆ. ಈ ಮೂಲಕ ಕೇವಲ ಎರಡು ವಾರಗಳ ಅಂತರದಲ್ಲಿ ಬಾಕ್ಸ್ ಆಫೀಸ್ ಸ್ಟಾರ್ ವಾರ್ ಆಗಲಿರುವುದು ಪಕ್ಕಾ ಎನ್ನಲಾಗಿದೆ.
ನಟ ದರ್ಶನ್ ವಿಷಯದಲ್ಲಿ ಯಾವುದನ್ನೂ ಕೂಡ ಈಗಲೇ ನಿರ್ಧಿಷ್ಟವಾಗಿ ಹೇಳಲು ಸಾಧ್ಯವೇ ಇಲ್ಲ. ಅವರ ಪಾಲಿಗೆ ಈ 'ದಿ ಡೆವಿಲ್' ಸಿನಿಮಾ ಕೊನೆಯ ಸಿನಿಮಾ ಆದರೂ ಆಗಬಹುದು. ಅಷ್ಟೇ ಅಲ್ಲ, ಕಾಟೇರ ಸಿನಿಮಾದ ಬಳಿಕ ದರ್ಶನ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬಂದಿಲ್ಲ. ಜೊತೆಗೆ, ನಟ ದರ್ಶನ್ ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ ಬೇಸ್ ಇದೆ. ಈ ಎಲ್ಲಾ ಕಾರಣಗಳಿಂದ ಮುಂಬರುವ 'ದಿ ಡೆವಿಲ್' ಸಿನಿಮಾಗೆ ಭರ್ಜರಿ ಕ್ರೇಜ್ ಸೃಷ್ಟಿಯಾಗಿದೆ. ಈ ಸಿನಿಮಾ ಸೂಪರ್ ಹಿಟ್ ಆಗಬಹುದು ಎಂಬ ಲೆಕ್ಕಾಚಾರ ಹಲವು ಮೂಲಗಳಿಂದ ಬಂದಿದೆ.
ಇದು ಒಂದು ಸುದ್ದಿಯಾದರೆ, ಅದೇ ತಿಂಗಳು ಅಂದರೆ ಡಿಸೆಂಬರ್ 25 ರಂದು ಕನ್ನಡದ ಮತ್ತೊಬ್ಬರು ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ನಟನೆಯ 'ಮಾರ್ಕ್' ಸಿನಿಮಾ ತೆರೆಗೆ ಬರಲಿದೆ. ಈ ಸಿನಿಮಾ ಬಗ್ಗೆ ಕೂಡ ಸಾಕಷ್ಟು ನಿರೀಕ್ಷೆ ಮನೆಮಾಡಿದೆ. ಜೊತೆಗೆ, ಶಿವಣ್ಣ (Shivarajkumar) , ಉಪೇಂದ್ರ (Upendra) ಹಾಗೂ ರಾಜ್ ಬಿ ಶೆಟ್ಟಿ (Raj B Shetty) ನಟನೆಯ '45' ಸಿನಿಮಾ ಕೂಡ ಡಿಸೆಂಬರ್ 25 ರಂದು ಬಿಡುಗಡೆ ಆಗಲಿದೆ. ಅಲ್ಲಿಗೆ, ಡಿಸೆಂಬರ್ ತಿಂಗಳಲ್ಲಿ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್‌ನಲ್ಲಿ ಸ್ಟಾರ್ ವಾರ್ ಆಗೋದು ಕನ್ಫರ್ಮ್ ಎನ್ನಬಹುದು.
ಈ ಮೂರು ಸಿನಿಮಾಗಳು ಡಿಸೆಂಬರ್ ಕೊನೆಯ ವಾರದಲ್ಲಿ ಬರುವುದು ಈಗಾಗಲೇ ಪಕ್ಕಾ ಆಗಿದೆ. ಇನ್ನು, ಬೇರೆ ಸಿನಿಮಾಗಳೂ ಕೂಡ ಅದೇ ತಿಂಗಳಲ್ಲಿ ಹಾಗೂ ಅದೇ ಡೇಟ್‌ಗೆ ಬಿಡುಗಡೆ ಆಗಬಹುದು ಕೂಡ. ಕಾರಣ, ಇನ್ನೂ ಬರೋಬ್ಬರಿ 3 ತಿಂಗಳು ಕಾಲಾವಕಾಶ ಇರುವುದರಿಂದ ಬೇರೆ ಸಿನಿಮಾಗಳ ಘೋಷಣೆ ಆಗಬಹುದು. ಜೊತೆಗೆ, ಅಂದು ಪರಭಾಷೆಯ ಸಿನಿಮಾಗಳು ಕೂಡ ರಿಲೀಸ್ ಆಗೋದು ನಿಶ್ಚಿತ. ಕಾರಣ, ಡಿಸಂಬರ್ ಕೊನೆಯ ವಾರದಲ್ಲಿ ಕ್ರಿಸ್‌ಮಸ್ ಇದೆ, ಜೊತೆಗೆ ವರ್ಷದ ಕೊನೆಯ ವಾರ ಆಗಿರೋದ್ರಿಂದ ಸಾಲುಸಾಲು ರಜೆಗಳು ಇರುತ್ತವೆ. ಹೀಗಾಗಿ ಸಿನಿಮಾ ಬಿಡುಗಡೆಗೆ ಅದು ಸಕಾಲ.
