ಈ ಕುರಿತು ಅವರು ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ಹಾಕಿಕೊಂಡಿರುವ ಸ್ಟೇಟಸ್‌ ಚಂದನವನದಲ್ಲಿ ಸಂಚಲನ ಮೂಡಿಸಿದೆ. ಅವರು ನಾಯಕಿ ಆಗಿ ಅಭಿನಯಿಸಿದ ‘ಗೀತಾ’ ಚಿತ್ರ ರಿಲೀಸ್‌ ಆದ ಬೆನ್ನಲೇ, ಶಾನ್ವಿ ಇಂತಹದೊಂದು ಸ್ಟೇಟಸ್‌ ಹಾಕಿರುವುದು ಭಾರೀ ಕುತೂಹಲ ಮೂಡಿಸಿದೆ. ಆದರೆ ಅದಕ್ಕೆ ಶಾನ್ವಿ ಹೇಳುವುದೇ ಬೇರೆ.

ನಟಿಗೆ ಮೋಸ ಮಾಡಿ ‘ಗೀತಾ’ ಹಿಟ್ ಆಯ್ತಾ? ಶಾನ್ವಿ ಬರೆದ್ರು ಅಸಮಾಧಾನ ಪತ್ರ!

‘ನಾನು ಹೇಳ್ತಿರೋದು ಯಾರೋ ಬಬ್ಬರು ಅಥವಾ ಒಂದು ಸಿನಿಮಾದ ಕುರಿತು ಅಲ್ಲ, ಈ ಹಿಂದಿನ ನನ್ನೆಲ್ಲ ಸಿನಿಮಾಗಳಲ್ಲೂ ನನಗಾದ ಅನುಭವ ಅದು. ಅದನ್ನೇ ಇಲ್ಲಿ ಹೇಳಿಕೊಂಡಿದ್ದೇನೆ. ಕೊನೆ ಪಕ್ಷ ಮುಂದೆ ಬರುವವರಿಗಾದರೂ ಒಂದು ಸ್ಪಷ್ಟತೆ ಇರಲಿ ಎನ್ನುವುದಷ್ಟೇ ನನ್ನ ಉದ್ದೇಶ’ ಎಂಬುದು ಅವರ ಪ್ರತಿಕ್ರಿಯೆ. ಹಾಗಾದ್ರೆ ಶಾನ್ವಿ ಶ್ರೀವಾಸ್ತವ್‌ ತಮ್ಮ ಇನ್‌ಸ್ಟಾಗ್ರಾಮ್‌ ಅಕೌಂಟ್‌ ಹಾಕಿಕೊಂಡ ಸ್ಟೇಟಸ್‌ನ ಸಾರಾಂಶ ಏನು?

ಮೋಸ್ಟ್ ಫ್ಯಾಷನೆಬಲ್ ಶಾನ್ವಿ ಶ್ರೀವಾಸ್ತವ್ ಕ್ಯೂಟ್ ಫೋಟೋಗಳು

‘ಒಂದು ಸಿನಿಮಾ ಅಂತಿಮವಾಗಿ ಹೇಗೆ ಮೂಡಿ ಬರುತ್ತೋ ಗೊತ್ತಿಲ್ಲ. ಆದ್ರೆ ಅದಕ್ಕಾಗಿ ಪ್ರಾಮಾಣಿಕ ಪ್ರಯತ್ನ ತೀರಾ ಅಗತ್ಯ. ಆದರೆ ಅದು ಕೆಲವರಿಗೆ ಅರ್ಥವೇ ಆಗೋದಿಲ್ಲ. ಒಂದು ಒಳ್ಳೆಯ ಸಿನಿಮಾ ಮಾಡಲು ಬೇಕಾದ ಪ್ರಾಮಾಣಿಕ ಕೆಲಸವನ್ನು ಶ್ರದ್ಧೆಯಿಂದ, ನೈತಿಕತೆಯಿಂದ ಮಾಡುವುದಕ್ಕೆ ಪ್ರಾಮುಖ್ಯತೆ ನೀಡಿ. ಪ್ರತಿಯೊಬ್ಬ ನಟರೂ ಆಯಾ ಸಿನಿಮಾದ ಭಾಗ. ಅವರನ್ನು ನೀವು ಪ್ರಾಮಾಣಿಕವಾಗಿ ಅಪ್ರೋಚ್‌ ಮಾಡಿ. ಸ್ಕಿ್ರಪ್ಟ್‌ ಹೇಗಿರುತ್ತದೆಯೋ, ನೀವೇನು ಹೇಳುತ್ತೀರೋ ಅದನ್ನು ತೆರೆ ಮೇಲೆ ತನ್ನಿ. ಬದಲಾವಣೆ ಮಾಡಿಕೊಂಡರೆ ಅದನ್ನು ಕಲಾವಿದರಿಗೆ ತಿಳಿಸಿ’ ಎನ್ನುವುದು ಶಾನ್ವಿ ಮಾತು. ಇದನ್ನು ಸ್ಯಾಂಡಲ್‌ವುಡ್‌ನ ಹಲವು ನಟ-ನಟಿಯರು ಬೆಂಬಲಿಸಿದ್ದಾರೆ. ಶ್ರುತಿ ಹರಿಹರನ್‌, ರಶ್ಮಿಕಾ ಮಂದಣ್ಣ, ಆಶಿಕಾ ರಂಗನಾಥ್‌ ಸೇರಿದಂತೆ ಹಲವರು ಸರಿಯಾಗಿಯೇ ಹೇಳಿದ್ದೀರಿ ಅಂತ ಶಾನ್ವಿ ಬೆನ್ನಿಗೆ ನಿಂತಿದ್ದಾರೆ.

 

ಶಾನ್ವಿಗೆ ಯಾರ ಮೇಲೆ ಸಿಟ್ಟು?

ಶಾನ್ವಿ ಈ ಮಾತುಗಳನ್ನು ಯಾರ ಕುರಿತು ಹೇಳಿದ್ದು? ಅವರ ಟಾರ್ಗೆಟ್‌ ಯಾರು? ಯಾರ ಮೇಲೆ ಅವರ ಬೇಸರ? ಶಾನ್ವಿ ತಮ್ಮ ಸ್ಟೇಟಸ್‌ನಲ್ಲಿ ಯಾರನ್ನೂ ಪ್ರಸ್ತಾಪಿಸಿಲ್ಲ. ಯಾರ ಹೆಸರನ್ನು ಹೇಳಿಲ್ಲ. ಆದರೂ ‘ಗೀತಾ’ ಚಿತ್ರದ ಬಿಡುಗಡೆ ಬೆನ್ನಲ್ಲೇ ಇಂತಹ ಸ್ಟೇಟಸ್‌ ಹಾಕಿದ್ದು ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಗೀತಾ ಚಿತ್ರದ ಕುರಿತೇ ಈ ಹೇಳಿಕೆ ನೀಡಿದ್ದಾರೆಂಬ ಮಾತುಗಳೂ ಕೇಳಿ ಬಂದಿವೆ. ಆದರೆ ಅದಕ್ಕೆ ಶಾನ್ವಿ ಅವರ ಉತ್ತರವೇ ಬೇರೆ.

‘ನನ್ನ ಹೇಳಿಕೆಯನ್ನು ಯಾರಾರ‍ಯರಿಗೋ ತಳುಕು ಹಾಕಿ ವಿವಾದ ಸೃಷ್ಟಿಸುವುದು ಸರಿಯಲ್ಲ. ಯಾರೋ ಒಬ್ಬರನ್ನು ಕುರಿತು ನಾನು ಈ ಮಾತು ಹೇಳಿದ್ದಲ್ಲ. ಈ ಹಿಂದಿನ ನನ್ನೆಲ್ಲ ಸಿನಿಮಾಗಳಲ್ಲೂ ನನಗಾದ ಅನುಭವ. ಪಾತ್ರದ ಬಗ್ಗೆ ಹೇಳುವಾಗಲೇ ಒಂದು ರೀತಿ ಹೇಳುತ್ತಾರೆ. ಅದನ್ನು ಚಿತ್ರೀಕರಿಸಿ, ತೆರೆಗೆ ತಂದಾಗ ಅದರ ಸ್ವರೂಪವೇ ಬದಲಾಗಿರುತ್ತೆ. ಕೊನೆ ಪಕ್ಷ ಅದು ಬದಲಾಗಿದೆ ಅಂತ ಹೇಳುವ ಸೌಜನ್ಯವೂ ಕೆಲವರಿಗೆ ಇಲ್ಲ. ಗ್ಲಾಮರ್‌, ಗ್ಲೀಮರ್‌ ಎನ್ನುವುದಕ್ಕಿಂತ ನಟನೆಯನ್ನೇ ನಂಬಿಕೊಂಡು ಅಭಿನಯಿಸಲು ಒಪ್ಪಿಕೊಳ್ಳುವಂತಹ ನನ್ನಂತವರಿಗೆ ಈ ರೀತಿ ಅನ್ಯಾಯ ಆಗಬಾರದು. ಕೆಲವರೇ ಹಾಗೆಯೇ ಮಾಡಿದ್ದಾರೆ. ಇದೆಲ್ಲ ಯಾಕೆ ಎನ್ನುವುದೇ ಅರ್ಥ ವಾಗುತ್ತಿಲ್ಲ. ಇನ್ನು ಮುಂದೆ ಈ ರೀತಿ ಆಗುವುದು ನನಗೆ ಇಷ್ಟವಿಲ್ಲ. ಕೊನೆ ಪಕ್ಷ ಮುಂದೆ ಬರುವುವರಿಗಾದರೂ ಒಂದು ಸ್ಪಷ್ಟತೆ ಇರಲಿ ಎನ್ನುವುದಷ್ಟೇ ನನ್ನ ಉದ್ದೇಶ’ ಎನ್ನುತ್ತಾರೆ ಶಾನ್ವಿ ಶ್ರೀವಾಸ್ತವ್‌.