ಈ ಚಿತ್ರದ ನಿರ್ದೇಶಕ ಕ್ರಿಶ್. ಇಲ್ಲಿ ಸಂಗೀತಾ ಭಟ್ ನಾಯಕಿ. ಬಾಲು ನಾಗೇಂದ್ರ ನಾಯಕ. ಮೀಟೂ ಆರೋಪದಿಂದ ಸಾಕಷ್ಟು ವಿವಾದ- ಸುದ್ದಿಗೆ ಕಾರಣವಾದ ಸಂಗೀತಾ ಭಟ್ ಅವರ ಕೊನೆಯ ಸಿನಿಮಾ ಎಂಬುದು
ಸದ್ಯದ ಮಾಹಿತಿ.

#MeToo ನಂತರ ಸಂಗೀತಾ ಭಟ್ ಮದ್ವೆ ಫೋಟೋ ರಿವೀಲ್ !

ಶೂಟಿಂಗ್ ಮುಗಿಸಿರುವ ಈ ಚಿತ್ರ ನಾಯಕಿ ಇಲ್ಲದೆ ಪ್ರಚಾರ ಹಾಗೂ ಬಿಡುಗಡೆಗೆ ತಯಾರಿ ಮಾಡಿಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ವೇಣು ಹಸ್ರಾಳಿ ಬರೆದಿರುವ ‘ಯಾಕೆ ಅಂತ ಗೊತ್ತಿಲ್ಲ ಕಣ್ರೀ ನನ್ನನ್ನು ನೋಡಿ ನಕ್ಬುಟ್ಳು ಸುಂದ್ರಿ’ ಎನ್ನುವ ಹಾಡಿನ ಲಿರಿಕಲ್ ವಿಡಿಯೋ ಬಿಡುಗಡೆ ಮಾಡಲಾಗಿದ್ದು, ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿದೆ. ಯುಎಸ್‌ಎನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯ ಗಿರೀಶ್ ಕುಮಾರ್ ಕಲ್ಲೇಶಾಚಾರ್ ಕೊಟ್ಟ ಕಾನ್ಸೆಪ್ಟ್ ಅನ್ನು ಬಳಸಿಕೊಂಡು ನಿರ್ದೇಶಕರು ಅಮೆರಿಕದಲ್ಲೇ ಹಾಡಿನ ಲಿರಿಕಲ್ ಕಂಪೋಸ್ ಮಾಡಿರುವುದು ವಿಶೇಷ.

#MeToo ನಂತರ ಕಾಣೆಯಾಗಿದ್ದ ನಟಿ ಸಂಗೀತಾ ಭಟ್ ಜರ್ಮನಿಯಲ್ಲಿ ಮೋಜು ಮಸ್ತಿ!

ಸಂಗೀತಾ ಭಟ್ ಮತ್ತೆ ಬರ್ತಾರೆಯೇ?: ಮೀಟೂ ವಿವಾದದ ನಂತರ ಸಂಗೀತಾ ಭಟ್ ಚಿತ್ರರಂಗದ ಕಡೆಗೆ ಮುಖ ಮಾಡಲಿಲ್ಲ. ‘ಕಪಟನಾಟಕ ಪಾತ್ರಧಾರಿ’ ಚಿತ್ರಕ್ಕೆ ಶೂಟಿಂಗ್ ಸದ್ದಿಲ್ಲದೆ ಮುಗಿಸಿದ್ದಾರಂತೆ. ಈ ಚಿತ್ರದ ಮೂಲಕ ಮತ್ತೆ ಚಿತ್ರರಂಗಕ್ಕೆ ಬರುತ್ತಾರೆಯೇ ಎಂದರೆ ‘ಈ ಚಿತ್ರಕ್ಕೆ ಶೂಟಿಂಗ್ ಮುಗಿಸಿ ಸೈಲೆಂಟಾಗಿ ಸಂಗೀತಾ ಭಟ್ ಜರ್ಮನ್ ಸೇರಿಕೊಂಡಿದ್ದಾರೆ. ಆನ್ ಲೈನ್ ಸೇರಿದಂತೆ ಬೇರೆ ಬೇರೆ ರೀತಿಯಲ್ಲಿ ಚಿತ್ರಕ್ಕೆ ಪ್ರಚಾರ ಮಾಡುತ್ತೇನೆ ಎಂದಿದ್ದಾರೆ. ಆ ಮೂಲಕ ಮತ್ತೆ ಅವರು ಚಿತ್ರರಂಗಕ್ಕೆ ಬರುತ್ತಾರೆ ಎನ್ನುವ ಬಗ್ಗೆ ಗ್ಯಾರಂಟಿ ಇಲ್ಲ’ ಎಂಬುದು ಚಿತ್ರತಂಡ ಕೊಡುವ ಮಾಹಿತಿ.