ಸಂಯುಕ್ತಾ ಈ ಡ್ಯಾನ್ಸ್ ನೋಡಿದರೆ ಫುಲ್ ಫಿದಾ ಆಗ್ತೀರಿ..

Sandalwood actress Samyukta Hegde entertains by her dance
Highlights

ಸ್ಯಾಂಡಲ್‌ವುಡ್ ನಟಿ ಸಂಯುಕ್ತಾ ಹೆಗಡೆ ಸದಾ ಒಂದಿಲ್ಲೊಂದು ಕಿರಿಕ್‌ಗಳಿಂದ ಸುದ್ದಿಯಲ್ಲಿರುತ್ತಾರೆ. ಉತ್ತಮ ಡ್ಯಾನ್ಸರ್ ಸಹ ಆಗಿರುವ ಈ ನಟಿ ಆಧುನಿಕ ಡ್ಯಾನ್ಸ್ ಕಲಿಯುತ್ತಿರುವ ವೀಡಿಯೋ ಪೋಸ್ಟ್ ಮಾಡಿದ್ದು, ಹೇಗಿದೆ ನೀವೇ ನೋಡಿ..

ಬೆಂಗಳೂರು: 'ಕಿರಿಕ್ ಪಾರ್ಟಿ'ಯ ಸಂಯುಕ್ತಾ ಹೆಗಡೆ ಸದಾ ಒಂದಲ್ಲೊಂದು ಕಿರಿಕ್‌ಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಅದರಲ್ಲಿಯೂ ಸೀಸನ್5ರ ಬಿಗ್ ಬಾಸ್ ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಪಡೆದು, ವೈಲ್ಡ್ ನಡೆಯಿಂದಲೇ ಮನೆಯಿಂದ ಹೊರ ಬಂದಿದ್ದರು. 

ಅತ್ಯುತ್ತಮ ಡ್ಯಾನ್ಸರ್ ಸಹ ಆಗಿರುವ ಸಂಯುಕ್ತಾ, ತಮ್ಮ ಡ್ಯಾನ್ಸ್ ವೀಡಿಯೋಗಳನ್ನು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇದೀಗ ಈ ನಟಿ ಬಚತಾ ಡ್ಯಾನ್ಸ್ ಕಲಿಯುತ್ತಿದ್ದಾರೆ. ಇದನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸೂಕ್ಷ್ಮ, ಆಧುನಿಕ ನೃತ್ಯ ಕಲೆಯಾದ ಬಚತಾವನ್ನು ಅದ್ಭುವಾಗಿ ಪ್ರದರ್ಶಿಸುತ್ತಿರುವ ವೀಡಿಯೋವನ್ನು ಸಂಯುಕ್ತಾ ಶೇರ್ ಮಾಡಿಕೊಂಡಿದ್ದಾರೆ. ಫಿಟ್‌ನೆಸ್‌ಗೂ ಸಂಯುಕ್ತಾ ಪ್ರಾಮುಖ್ಯತೆ ನೀಡುವುದು ಈ ವೀಡಿಯೋದಲ್ಲಿ ಗೊತ್ತಾಗುತ್ತದೆ. 
 

loader