ನಟಿ, ರಾಜಕಾರಣಿ ರಮ್ಯಾ ಮದುವೆ ಆಗುತ್ತಿದ್ದಾರೆನ್ನುವ ಸುದ್ದಿಗೆ ರಮ್ಯಾ ತಾಯಿ ರಂಜಿತಾ ಸ್ಪಷ್ಟನೆ ನೀಡಿದ್ದು, ಇದೊಂದು ಸುಳ್ಳುಸುದ್ದಿ ಎಂದು ಹೇಳಿದ್ದಾರೆ. ‘ರಮ್ಯಾ ದುಬೈನಲ್ಲಿ ಮದುವೆ ಆಗುತ್ತಿದ್ದಾರೆನ್ನುವುದೆಲ್ಲ ಸುಳ್ಳು. ಹಾಗೆಲ್ಲ ಕದ್ದು ಮುಚ್ಚಿ ಮದುವೆಯಾಗುವ ಅಗತ್ಯವೂ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ದುಬೈನಲ್ಲಿ ಮೋಹಕತಾರೆ ರಮ್ಯಾ ಮದುವೆ? ಹುಡುಗ ಎಲ್ಲರಿಗೂ ಗೊತ್ತು!

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ‘ಮದುವೆ ವಿಚಾರದಲ್ಲಿ ನಮ್ಮಿಬ್ಬರ ನಡುವೆ ಸಣ್ಣ ಮುನಿಸು ಇದೆ. ಮದುವೆ ಆಗು ಅಂದರೆ ರಮ್ಯಾ ಕೇಳುತ್ತಿಲ್ಲ. ಹಾಗಾಗಿ ನನ್ನೊಂದಿಗೆ ಮಾತನಾಡುತ್ತಿಲ್ಲ. ಆದರೆ ಆಕೆ ದುಬೈನಲ್ಲಿ ಮದುವೆ ಆಗುತ್ತಿದ್ದಾರೆನ್ನುವ ಸುದ್ದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ’ ಎಂದಿದ್ದಾರೆ.

‘ಪದ್ಮಾವತಿ’ ಕಲ್ಯಾಣಕ್ಕೆ 2 ಲೈನ್‌ನಲ್ಲಿ ಶುಭಕೋರಿದ ಜಗ್ಗೇಶ್!

ಇದೇ ವೇಳೆ ಅವರು ರಮ್ಯಾ ಮತ್ತವರ ಗೆಳೆಯ ಪೋರ್ಚುಗಲ್‌ನ ರಫಾಯಿಲ್‌ ನಡುವಿನ ಸಂಬಂಧದ ಕುರಿತಾಗಿ ಮಾತನಾಡಿ, ‘ಅವರಿಬ್ಬರು ಈಗಲೂ ಒಳ್ಳೆಯ ಸ್ನೇಹಿತರು. ಹಾಗೆಯೇ ಅವರ ನಡುವೆ ಮದುವೆಯ ಬಗ್ಗೆ ಚರ್ಚೆಯೂ ನಡೆದಿದೆ. ಆದರೆ ರಮ್ಯಾಗೆ ಭಾರತ ಬಿಟ್ಟು ದೂರ ಇರಲು ಇಷ್ಟವಿಲ್ಲ. ಹಾಗೆಯೇ ರಫಾಯಲ್‌ಗೆ ಪೋರ್ಚುಗಲ್‌ ಬಿಟ್ಟು ದೂರ ಇರುವುದಕ್ಕೆ ಇಷ್ಟವಿಲ್ಲ. ಈ ವಿಚಾರದಲ್ಲಿ ಅವರ ನಡುವೆ ಹೊಂದಾಣಿಕೆ ಆಗುತ್ತಿಲ್ಲ. ಅವರು ಮದುವೆ ಆಗುತ್ತಿದ್ದಾರೆ ಎನ್ನುವುದು ಸುಳ್ಳು’ ಎಂದು ರಂಜಿತಾ ಸ್ಪಷ್ಟಪಡಿಸಿದ್ದಾರೆ. ಹಾಗೆಯೇ ‘ರಮ್ಯಾಗೆ ರಾಜಕಾರಣಿ ಅಥವಾ ಸಿನಿಮಾ ರಂಗದವರನ್ನು ಮದುವೆ ಆಗುವುದಕ್ಕೆ ಇಷ್ಟವಿಲ್ಲ’ ಎನ್ನುವ ಸಂಗತಿಯನ್ನೂ ರಂಜಿತಾ ಬಹಿರಂಗಪಡಿಸಿದ್ದಾರೆ.