Asianet Suvarna News Asianet Suvarna News

#MeToo ಟೀಕಾಕಾರರಿಗೆ ಖಡಕ್ ಉತ್ತರ ಕೊಟ್ಟ ನಟಿ ನೀತೂ ಶೆಟ್ಟಿ

ಆವಾಗ್ಲೇ ಮಾತಾಡ್ಬೇಕಿತ್ತು ಅನ್ನೋರು ನೀವೇ, ಮಾತಾಡಿದ್ರೆ, ಪಬ್ಲಿಸಿಟಿಗೋಸ್ಕರ ಅನ್ನೋರು ನೀವೇ!! ಸಪೋರ್ಟ್ ಮಾಡ್ತೀವಿ ಅನ್ನೋರು ನೀವೇ,ಪ್ರೂಫ್ ತೋರ್ಸಿಲ್ಲಾಂದ್ರೆ ನಂಬಲ್ಲ ಅನ್ನೋರು ನೀವೇ!!  - ನೀತು ಶೆಟ್ಟಿ

Sandalwood Actress Neethu shetty Speaks about #MeToo Movement
Author
Bengaluru, First Published Oct 21, 2018, 5:24 PM IST
  • Facebook
  • Twitter
  • Whatsapp

ಬೆಂಗಳೂರು[ಅ.21]: #MeToo ಅಭಿಯಾನದ ಬಗ್ಗೆ ಟೀಕೆ ಮಾಡುತ್ತಿರುವವರಿಗೆ  ಮತ್ತೊರ್ವ ಸ್ಯಾಂಡಲ್'ವುಡ್ ನಟಿ ನೀತು ಶೆಟ್ಟಿ ಖಡಕ್ ಉತ್ತರ ಕೊಟ್ಟಿದ್ದಾರೆ.

ತಮ್ಮ ಫೇಸ್'ಬುಕ್ ಪುಟದಲ್ಲಿ ಬರೆದುಕೊಂಡಿರುವ ಅವರು, ಹೆಸರು ರಿವೀಲ್ ಮಾಡಿ ಅನ್ನೋರು ನೀವೇ,ಮಾಡಿದ್ರೆ ನಂಬದೇ ಇರೋರು ನೀವೇ!! ಆವಾಗ್ಲೇ ಮಾತಾಡ್ಬೇಕಿತ್ತು ಅನ್ನೋರು ನೀವೇ, ಮಾತಾಡಿದ್ರೆ, ಪಬ್ಲಿಸಿಟಿಗೋಸ್ಕರ ಅನ್ನೋರು ನೀವೇ!! ಸಪೋರ್ಟ್ ಮಾಡ್ತೀವಿ ಅನ್ನೋರು ನೀವೇ, ಪ್ರೂಫ್ ತೋರ್ಸಿಲ್ಲಾಂದ್ರೆ ನಂಬಲ್ಲ ಅನ್ನೋರು ನೀವೇ!! ಅರ್ಥ ಮಾಡ್ಕೋತೀವಿ ಅನ್ನೋರು ನೀವೇ, ಸೂಕ್ಷ್ಮತೆ ಮರೆಯೋರು ನೀವೇ!! ಹೆಣ್ಣನ್ನು ಗೌರವಿಸ್ತೀವಿ ಅನ್ನೋರು ನೀವೇ,ಕೆಟ್ಟದಾಗಿ ಕಾಮೆಂಟ್ ಮಾಡೋವ್ರು ನೀವೇ!! ತಪ್ಪಿತಸ್ಥನಿಗೆ ಶಿಕ್ಷೆ ಆಗ್ಬೇಕು ಅನ್ನೋರು ನೀವೇ, ಕ್ಯಾರೆಕ್ಟರ್ ಡೌಟ್ ಮಾಡೋದು ನೀವೇ!! ಎಂದಿದ್ದಾರೆ. 

ಪ್ರಚಾರಕ್ಕಾಗಿ ಆರೋಪ, ನಾಚಿಕೆ ಆಗಲ್ವ : ಶ್ರುತಿಗೆ ಸರ್ಜಾ ತಿರುಗೇಟು

 

ಮತ್ತೊಬ್ಬ ಯುವನಟಿಯಿಂದ ಅರ್ಜುನ್ ಸರ್ಜಾ ವಿರುದ್ಧ #METOO ಬಾಂಬ್!

Follow Us:
Download App:
  • android
  • ios