ಯಾರೀಕೆ ಎನ್ನುವವರಿಗೆ ಒಂದು ಮಾಹಿತಿ. ಸಂಹಿತಾ ‘ಹಾಲು ತುಪ್ಪ’,‘ಅಮೃತ ಘಳಿಗೆ’ ಚಿತ್ರಗಳ ನಾಯಕಿ. ಮೂಲತಃ ಮಾಡೆಲಿಂಗ್‌ ಮಂದಾಕಿನಿ. ಇವರು ನಟಿಸಿದ ‘ವಿಷ್ಣು ಸರ್ಕಲ್‌’,‘ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು’ ಹಾಗೂ ‘ಗೌಡರ ದರ್ಬಾರ್‌’ ಚಿತ್ರಗಳು ರಿಲೀಸ್‌ಗೆ ರೆಡಿ ಆಗಿವೆ. ‘ಖರಾಬ್‌ ದುನಿಯಾ’ ಹಾಗೂ ಟೈಟಲ್‌ ಫೈನಲ್‌ ಆಗದ ಮತ್ತೊಂದು ಚಿತ್ರ ಶೂಟಿಂಗ್‌ ಹಂತದಲ್ಲಿವೆ. ಹೊಸಬರ ಪೈಕಿ, ಸಂಹಿತಾ ಕನ್ನಡದ ಬ್ಯುಸಿ ನಟಿ. ಆದರೂ, ಒಳ್ಳೆಯ ಅವಕಾಶಗಳು ಹೊಸಬರಿಗೆ ಇಲ್ಲಿ ಸಿಗುವುದು ಕಮ್ಮಿ ಎನ್ನುವ ನೋವು ಸಂಹಿತಾ ಅವರದ್ದು.

ನನಗಂತೂ ಕನ್ನಡ ಚಿತ್ರರಂಗದಲ್ಲಿ ಯಾವ ಕೆಟ್ಟ ಅನುಭವ ಆಗಿಲ್ಲ: ಭಾವನಾ ರಾವ್

ಮಾಡೆಲಿಂಗ್‌ ಲೋಕದಿಂದ ಸಂಹಿತಾ ನಟಿಯಾಗಿ ಬೆಳ್ಳಿತೆರೆಗೆ ಎಂಟ್ರಿಯಾಗಿ ಇಲ್ಲಿಗೆ ಎರಡು ವರ್ಷ.ಒಳ್ಳೇ ಅವಕಾಶ, ಸಾಲು ಸಾಲು ಸಿನಿಮಾ ಸಿಕ್ಕಿದೆ ಎಂದು ಹೇಳಲೆಂದೇ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಅದೇ ಹೊತ್ತಿಗೆ ‘ ಕನ್ನಡದ ನಟಿಯರಿಗೆ ಕನ್ನಡದಲ್ಲೇ ಅವಕಾಶ ಕಮ್ಮಿ ’ಅಂತ ನೋವು ತೋಡಿಕೊಂಡರು. ‘ ಕನ್ನಡದಲ್ಲೀಗ ನಟಿಯರಿಗೆ ಕೊರತೆ ಇಲ್ಲ. ಒಂದು ಕಾಲದಲ್ಲಿ ನಟಿಯರಿಗೆ ಇಲ್ಲಿ ಕೊರತೆಯಿದೆ ಎನ್ನುತ್ತಿದ್ದವರು ಅಚ್ಚರಿ ಪಡುವ ಹಾಗೆ ದಿನಕ್ಕೊಬ್ಬರು ಹೊಸಬರು ಸಿನಿಮಾಲೋಕಕ್ಕೆ ಎಂಟ್ರಿ ಆಗುತ್ತಿದ್ದಾರೆ. ಪ್ರತಿಭಾವಂತರೇ ಬಣ್ಣದ ಲೋಕಕ್ಕೆ ಬರುತ್ತಿದ್ದಾರೆ. ಆದರೂ ಕೆಲವರಿಗೆ ಪರಭಾಷೆ ನಟಿಯರ ಮೇಲೆ ಹೆಚ್ಚು ಆಸಕ್ತಿ. ಇದರ ಕಾರಣ ನನಗೆ ಗೊತ್ತಿಲ್ಲ. ಏನೇ ಆದ್ರೂ ಕನ್ನಡದವರಿಗೆ ಕನ್ನಡದಲ್ಲೇ ಅವಕಾಶ ಸಿಕ್ಕರೆ ಚೆಂದ ’ ಅಂತ ತಮ್ಮ ಮನದಾಳ ಇಂಗಿತ ವ್ಯಕ್ತಪಡಿಸಿದರು.

ಕೆಟ್ಟವರು ಎಲ್ಲಾ ಕಡೆ ಇದ್ದಾರೆ: ಶಿಲ್ಪಾ ಮಂಜುನಾಥ್

ಇದೀಗ ತಮಿಳಿನ ‘ಕಾದಲ್‌ ವಾನಮ್‌’ ಚಿತ್ರದಲ್ಲೂ ಸಂಹಿತಾ ನಟಿಸುತ್ತಿದ್ದಾರೆ. ಅವಕಾಶಗಳು ಅಲ್ಲೂ ಬರುತ್ತಿವೆಯಂತೆ. ಆದರೂ ಕನ್ನಡದಲ್ಲೇ ನಟಿಯಾಗಿ ಗುರುತಿಸಿಕೊಳ್ಳಬೇಕೆನ್ನುವ ಹಂಬಲ ವ್ಯಕ್ತಪಡಿಸುತ್ತಾರೆ ಸಂಹಿತಾ.‘ ನಾನು ಪಕ್ಕಾ ಕನ್ನಡದ ಹುಡುಗಿ. ಹಾಸನ ಜಿಲ್ಲೆಯಿಂದ ಬಂದವಳು. ಮಾಡೆಲಿಂಗ್‌ ಕ್ಷೇತ್ರದಲ್ಲಿ ನಾನು ಎಷ್ಟೇ ಹೆಸರು ಮಾಡಿದ್ದರೂ, ಮೊದಲು ನಟಿಯಾಗಿದ್ದು ಇಲ್ಲಿಯೇ. ಪರಭಾಷೆಗಳಲ್ಲಿ ಎಷ್ಟೇ ಅವಕಾಶಗಳಿದ್ದರೂ ಕನ್ನಡದಲ್ಲೇ ಗುರುತಿಸಿಕೊಳ್ಳಬೇಕೆನ್ನುವ ಕಾರಣದಿಂದಲೇ ತಮಿಳು ಸಿನಿಮಾ ಅವಕಾಶ ಬೇಡ ಎಂದಿದ್ದೇನೆ’ ಅಂತ ಹೇಳಿಕೊಂಡರು.

ಸುಮಾರು 30ಕ್ಕೂ ಹೆಚ್ಚು ಫ್ಯಾಷನ್‌ ಶೋ ಜತೆಗೆ ವಿವಿಧ ಕಂಪನಿಗಳ ಪ್ರಾಡೆಕ್‌್ಚಗೆ ಬ್ರಾಂಡ್‌ ಅಂಬಾಸಿಡರ್‌ ಆಗಿಯೂ ಕೆಲಸ ಮಾಡಿರುವ ಸಂಹಿತಾ, ತಮಗೆ ಸಿನಿಮಾವೇ ಹೆಚ್ಚು ಆಸಕ್ತಿ ಎನ್ನುತ್ತಾರೆ.