ಬೆಂಗಳೂರು[ಅ. 02]  ಕೇಂದ್ರ ಸರ್ಕಾರ ಬರ ಪರಿಹಾರ ನೀಡಿಲ್ಲ..ನೀಡಿಕೆಯಲ್ಲಿ ವಿಳಂಬ ಮಾಡುತ್ತಿದೆ ಎಂಬ ವಿಚಾರ ಕಳೆದ ಹಲವು ದಿನಗಳಿಂದ ಸೋಶಿಯಲ್ ಮೀಡಿಯಾದ ಬಹು ದೊಡ್ಡ ಬಿಸಿ ಬಿಸಿ ಚರ್ಚೆ..  ಉತ್ತರ ಭಾರತದಲ್ಲಿ ಪ್ರವಾಹ ಬಂದಿದ್ದು ಪ್ರಧಾನಿ ನರೇಂದ್ರ ಮೋದಿ  ನಿಮ್ಮ ನೆರವಿಗೆ ನಾವಿದ್ದೇವೆ ಎಂದು ಬಿಹಾರವನ್ನು ಉದ್ದೇಶಿಸಿ ಮಾಡಿದ ಟ್ವೀಟ್ ನಂತರ ಕನ್ನಡಿಗರು ಕೆಂಡಾಮಂಡಲವಾಗಿದ್ದರು.. ಇದು ಕೊಂಚ ಬ್ಯಾಕ್ ಗ್ರೌಂಡ್ ಸ್ಟೋರಿ..

ಇತ್ತ ಕರ್ನಾಟಕದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಮತ್ತು ಕೇಂದ್ರ ರಸಗೊಬ್ಬರ ಖಾತೆ ಸಚಿವ ಸದಾನಂದ ಗೌಡರ ನಡುವೆಯೂ ಟ್ವಿಟರ್ ವಾರ್ ನಡೆದು ಹೋಗಿತ್ತು. ರಾಜ್ಯದ 25 ಜನ ಸಂಸದರು ಉತ್ತರ ಕರ್ನಾಟಕದ ನೆರವಿಗೆ ಯಾಕೆ ದನಿ ಎತ್ತುತ್ತಿಲ್ಲ ಎಂದು ಸೂಲಿಬೆಲೆ ಪ್ರಶ್ನೆ ಮಾಡಿದ್ದೇ ಬೆಂಕಿ ಹೊತ್ತಿಕೊಳ್ಳಲು ಕಾರಣವಾಯ್ತು. ಅವರ ಪ್ರಶ್ನೆ ಸರಿಯಾಗೇ ಇತ್ತು.. ಜನರ ಮನದಾಳ ಹೇಳಿದ್ದರು.

ಆಗಿದ್ದಾಗಲಿ ಎಂದು ಪರಸ್ಪರರು ತಮ್ಮನ್ನು ಸಮರ್ಥನೆ ಮಾಡಿಕೊಂಡರು. ಇದೀಗ ಅಂತಿಮ ಸ್ಟೆಪ್ ಎನ್ನುವಂತೆ ಮಾನ್ಯ ಕೇಂದ್ರ ಸಚಿವರು ಚಿಂತಕ ಸೂಲಿಬೆಲೆ ಜತಗೆ ಸುವರ್ಣ ನ್ಯೂಸ್ ಪೇಜ್ ನ್ನು ಬ್ಲಾಕ್ ಮಾಡಿದ್ದಾರೆ. ಪ್ರಶ್ನೆ ಕೇಳಿದವರಿಗೆ ಸಿಕ್ಕಿದ್ದು ಬ್ಲಾಕ್ ಭಾಗ್ಯ..!

ನಿಮ್ಮ ಮಂತ್ರಿಗಿರಿ ಕರುನಾಡು ಜನರ ಭಿಕ್ಷೆ: ಸದಾನಂದಗೌಡ್ರಿಗೆ ಚಕ್ರವರ್ತಿ ತಿರುಗೇಟು...

ಸದಾನಂದ ಗೌಡರು ಬ್ಲಾಕ್ ಮಾಡಿದ ನಂತರ ಸೂಲಿಬೆಲೆ ಒಂದು ಧನ್ಯವಾದವನ್ನು ಸೋಶಿಯಲ್ ಮೀಡಿಯಾ ಮುಖೇನವೇ ಹೇಳಿದ್ದಾರೆ. ಪರಿಹಾರ ಯಾಕೆ ವಿಳಂಬ? ಯಾಕೆ ಉತ್ತರ ಕರ್ನಾಟಕದ ಜನರ ನೋವು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲ ಎಂದು ಕೇಳಿದವರನ್ನು ಬ್ಲಾಕ್ ಮಾಡಿದ ತಕ್ಷಣ ಪ್ರಶ್ನೆ ಕೇಳುವುದನ್ನು ನಿಲ್ಲಿಸಿಬಿಡುತ್ತಾರೆ ಎಂದು ಮಾನ್ಯ ಸಚಿವರು ಭಾವಿಸಿದರೋ.. ಗೊತ್ತಿಲ್ಲ.

ಬೆಂಗಳೂರು ಉತ್ತರವನ್ನು ಪ್ರತಿನಿಧಿಸುತ್ತಿರುವ ಗೌಡರಿಗೆ ಕೇಂದ್ರದಲ್ಲಿ ಕ್ಯಾಬಿನೆಟ್ ಸ್ಥಾನ ಮಾನ ಒಲಿದು ಬಂದಿದೆ. ಅವರನ್ನು ಆಯ್ಕೆ ಮಾಡಿದ್ದು ಇದೇ ಕರ್ನಾಟಕದ ಜನರು ಎಂಬುದುನ್ನು ಮರೆತುಬಿಟ್ಟರೋ ..ಅದು ಗೊತ್ತಿಲ್ಲ..

ಮಾನ್ಯ ಸದಾನಂದ ಗೌಡರೆ ಎಲ್ಲ ಕಡೆಯಲ್ಲೂ ನಿಮ್ಮದೇ  ಪಕ್ಷದ ಸರಕಾರ ಇದೆ..  ಜನರು ತಮ್ಮ ಹಕ್ಕನ್ನು ಕೇಳುತ್ತಿದ್ದಾರೆ.. ಸಾಧ್ಯವಾದರೆ ಪರಿಹಾರ ಕೊಡಿಸಲು ಪ್ರಯತ್ನ ಮಾಡಿ.. ವಿಳಂಬ ಆಗುತ್ತಿದೆ ವಿಚಾರ ಒಪ್ಪಿಕೊಳ್ಳಿ.. ಅದೆಲ್ಲವನ್ನು ಬಿಟ್ಟು ಮಾಧ್ಯಮ ಹಾಗೂ ಪ್ರಶ್ನೆ ಕೇಳುವವರನ್ನು ಬ್ಲಾಕ್ ಮಾಡುವುದು ಎಷ್ಟು ಸರಿ? ಕನ್ನಡಿಗರಾಗಿ ಉತ್ತರ ಕರ್ನಾಟಕದ ನೋವಿಗೆ ಸ್ಪಂದಿಸಿ ಎನ್ನುವುದೇ ದೊಡ್ಡ ತಪ್ಪೆ?