ಅಭಿಮಾನಿಗಳನ್ನು ಸ್ನೇಹಿತರೆಂದು ಕರೆದು ಪ್ರೀತಿ ತೋರಿಸುವ ಸ್ಯಾಂಡಲ್ ವುಡ್ ಬಚ್ಚನ್ ಇಂದು 46 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕಿಚ್ಚನ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ. ಒಂದೆಡೆ ಗೌರಿ-ಗಣೇಶ ಹಬ್ಬ ಮತ್ತೊಂದೆಡೆ ಕಿಚ್ಚ ಸುದೀಪ್ ಹುಟ್ಟು ಹಬ್ಬ. ಇನ್ನು ಉತ್ತರ ಕರ್ನಾಟಕ ಪ್ರವಾಹದ ಪ್ರಯುಕ್ತ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಲು ಸುದೀಪ್ ನಿರ್ಧರಿಸಿದ್ದಾರೆ.

 

ಹುಟ್ಟು ಹಬ್ಬದ ಪ್ರಯುಕ್ತ ಹೆಚ್.ಡಿ. ಕೋಟೆಯಲ್ಲಿ ಸುದೀಪ್ ಅಭಿಮಾನಿಗಳು ಅನ್ನ ಸಂತರ್ಪಣೆಯನ್ನು ಮಾಡಿ ಸುದೀಪ್ ಗೆ ಆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಆಶಿಸಿದ್ದಾರೆ. ಇನ್ನು ಕೆಲವರು ಚಿಕ್ಕ ಕಿರುಕಾಣಿಕೆಯಾಗಿ ರಕ್ತದಾನ ಮಾಡಿದ್ದಾರೆ. ಒಟ್ಟಿನಲ್ಲಿ ಒಳ್ಳೊಳ್ಳೆ ಕೆಲಸಗಳ ಮೂಲಕ ಸುದೀಪ್ ಹುಟ್ಟುಹಬ್ಬವನ್ನು ಸಾರ್ಥಕಗೊಳಿಸುತ್ತಿದ್ದಾರೆ ಅಭಿಮಾನಿಗಳು.